/newsfirstlive-kannada/media/post_attachments/wp-content/uploads/2024/06/Hamsalekha.jpg)
ಮಂಡ್ಯ: ಕೊಲೆ ಕೇಸಲ್ಲಿ ಜೈಲು ಸೇರಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾತಾಡಿದ್ದಾರೆ. ಮಂಡ್ಯ ರೈತ ಭವನದಲ್ಲಿ ಆಯೋಜಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರಧಾನ ಸಮಾರಂಭದ ಬಳಿಕ ಮಾತಾಡಿದ ನಾದಬ್ರಹ್ಮ ಹಂಸಲೇಖ ಅವರು, ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿದೆ. ಎಷ್ಟು ಪ್ರಶಸ್ತಿಗಳು, ಎಷ್ಟು ರಾಷ್ಟ್ರ ಪ್ರಶಸ್ತಿಗಳು ಸ್ಯಾಂಡಲ್ವುಡ್ಗೆ ಸಿಕ್ಕಿವೆ ಎಂದರು.
ಎಂತೆಂತಾ ಪ್ರತಿಭಾವಂತರು, ಹಿರಿಯ ಕಲಾವಿದರು ಇಲ್ಲಿ ಹುಟ್ಟಿದ್ದಾರೆ. ಎಷ್ಟು ಎತ್ತರಕ್ಕೇರಿದ್ರೂ ಯಾವಾಗಾದ್ರೂ ಒಂದು ಸಲ ಎಲ್ಲೋ ಒಂದು ಕಡೆ ಕೆಳಗೆ ಬೀಳಬೇಕಾಗುತ್ತೆ. ಈಗ ಕನ್ನಡ ಚಿತ್ರರಂಗದ್ದು ಅದೇ ಕಥೆ. ಆದಷ್ಟು ಬೇಗೆ ಮತ್ತೆ ಎತ್ತರಕ್ಕೆ ಹೋಗಲಿ ಎಂದು ಆಶಿಸುತ್ತೇನೆ ಎಂದರು.
ಕೇರಳ ಚಿತ್ರೋದ್ಯಮ ಹೀಗೆ ಆಗಿತ್ತು. ಅದು ಈಗ ಉತ್ತುಂಗದಲ್ಲಿದೆ. ಕೆಳಗೆ ಬಿದ್ದು ಮೇಲೆ ಎದ್ದಿದೆ. ನಾವು ಸಿನಿಮಾ ಕಲಾವಿದರು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡೋರು ನಾವು. ಸಿಟ್ಟು ಎಂದರೆ ಸ್ಟ್ರಿಪ್ಟ್, ದ್ವೇಷ ಎಂದರೆ ಕ್ಯಾರೆಕ್ಟರ್ ಅಂತಾ ನಾವು ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ನಿಜ ಜೀವನದಲ್ಲಿ ಅದು ಮಾಡಬಾರದು. ಇದು ಕಲಾವಿದರ ಕರ್ತವ್ಯ. ದರ್ಶನ್ ನನ್ನ ಮಗು. ನನ್ನ ಮಗು ಆ ತಪ್ಪು ಮಾಡಿದ್ರೆ, ನಾನು ಅಷ್ಟೇ ನೋವು ತಿಂತಾ ಇದೀನಿ. ಆ ಮಗು ಕೂಡ ಅಷ್ಟೇ ನೋವು ತಿಂತಾ ಇರುತ್ತೆ. ನಾವು ಆತ ಕೊಟ್ಟಿರೋ ಕೊಡುಗೆ ಕಡೆ ನೋಡೋಣ ಎಂದರು.
ಇದನ್ನೂ ಓದಿ:ನಟ ದರ್ಶನ್ ಖೈದಿ 6106 ನಂಬರ್ ಹಿಂದೆ ಬಿದ್ದ ನಿರ್ಮಾಪಕ.. ಈ ಟೈಟಲ್ ಸಿನಿಮಾ ಆಗುತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ