ಕರ್ಬೂಜ ಹಣ್ಣಿಗೆ ಪಿತ್ತ ಮತ್ತು ವಾತವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ
ದೇಹದ ಶಕ್ತಿ ಹೆಚ್ಚಿಸುತ್ತೆ, ರಕ್ತದೊತ್ತಡ ನಿಯಂತ್ರಿಸುತ್ತೆ.. ಎಲ್ಲದಕ್ಕೂ ಬೆಸ್ಟ್ ಕರ್ಬೂಜ
ಮೂತ್ರ ಕೋಶದಲ್ಲಿ ಕಾಣಿಸುವ ಕಲ್ಲನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ
ಯಪ್ಪಾ.. ಬಿಸಿಲು.. ಉರಿ ಸೆಕೆ. ಸದ್ಯ ಬೆಂಗಳೂರಿನ ಜನರ ಬಾಯಾಲ್ಲಿ ಬರೋ ಮಾತಿದು. ಹೌದು. ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥಾ ಸರ್ಕಸ್ ಜೀವನದ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಬಿಸಿಲ ಬೇಗೆ ತಂಪಾದ ಪಾನೀಯ ದಾಹ ನೀಗಿಸುತ್ತದೆ. ಆದರೆ ಕೆಲವು ಪಾನೀಯಗಳು ದೇಹವನ್ನು ತಂಪಾಗಿರಿಸಿದರೂ ಆರೋಗ್ಯಕ್ಕೆ ಪರಿಣಾಮಕಾರಕವಾಗಬಹುದು. ಹಾಗಾಗಿ ಅಂತಹ ಹಾಳುಮೂಳು ಸೇವಿಸುವ ಬದಲು ಕರ್ಬೂಜ ಇಂಥಾ ಸಮಯದಲ್ಲಿ ಬೆಸ್ಟ್. ಇದರಿಂದ ಆರೋಗ್ಯಕ್ಕೂ ಹತ್ತಾರು ಲಾಭವಿದೆ.
ದೇಹದ ಶಕ್ತಿ ಹೆಚ್ಚಿಸುತ್ತೆ
ಕರ್ಬೂಜ ಹಣ್ಣು ತಂಪು ಗುಣವನ್ನು ಹೊಂದಿದೆ. ಇದಕ್ಕೆ ಪಿತ್ತ ಮತ್ತು ವಾತವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇವಿಷ್ಟು ಮಾತ್ರವಲ್ಲ, ದೇಹದ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥವನ್ನು ಈ ಹಣ್ಣು ಹೊಂದಿದೆ.
ಕರುಳನ್ನು ಸ್ವಚ್ಛ ಮಾಡುತ್ತೆ
ಕರ್ಬೂಜ ಮೂತ್ರವನ್ನು ಹೆಚ್ಚಿಸುವ ಗುಣದ ಜೊತೆಗೆ, ಮೂತ್ರ ಕೋಶದಲ್ಲಿ ಕಾಣಿಸುವ ಕಲ್ಲನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ. ಮತ್ತೊಂದು ವಿಚಾರವೆಂದರೆ ಇದು ಕರುಳನ್ನು ಸಹ ಸ್ವಚ್ಛ ಮಾಡುತ್ತದೆ.
ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ
ಮಲ ವಿಸರ್ಜನೆಗೂ ಇದು ಸಹಕಾರಿಯಾಗಿ. ಕರ್ಬೂಜ ಹಣ್ಣಿನಲ್ಲಿ ನಾನಾ ಗುಣವಿದ್ದು, ಕೆಲವರಿಗೆ ಮಲ ವಿಸರ್ಜನೆಯಾಗಲು ವೈದ್ಯರು ಈ ಹಣ್ಣನ್ನು ಸೇವಿಸಲು ಹೇಳುತ್ತಾರೆ. ಇದಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ.
ಇದನ್ನೂ ಓದಿ: ‘ಲೂಸಿಫರ್-2’ ಸಿನಿಮಾದಲ್ಲಿ ಶಿವಣ್ಣ? ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಕಡೆಯಿಂದ ಆಹ್ವಾನ!
ರಕ್ತದೊತ್ತಡ ನಿಯಂತ್ರಿಸುತ್ತೆ
ಹೃದಯ ಸಂಬಂಧ ಕಾಯಿಲೆಯನ್ನು ನಿಯಂತ್ರಿಸುವ ಗುಣ, ಅಧಿಕ ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಹಾಗೂ ಉರಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಕರ್ಬೂಜ ಜ್ಯೂಸ್ ಮಾಡಿ ಸೇವಿಸಿದರೆ ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ