newsfirstkannada.com

×

‘ಲೂಸಿಫರ್​-2’ ಸಿನಿಮಾದಲ್ಲಿ ಶಿವಣ್ಣ? ಮಾಲಿವುಡ್​ ನಟ ಪೃಥ್ವಿರಾಜ್‌ ಸುಕುಮಾರನ್ ಕಡೆಯಿಂದ ಆಹ್ವಾನ!

Share :

Published March 27, 2024 at 1:12pm

    ಮಾಲಿವುಡ್​ ಸಿನಿಮಾದಲ್ಲಿ ನಟಿಸುವಂತೆ ಶಿವಣ್ಣನಿಗೆ ಬೇಡಿಕೆ

    ಲೂಸಿಫರ್​-2ನಲ್ಲಿ ಕಾಣಿಸಿಕೊಳ್ಳಲ್ಲೊದ್ದಾರೆ ಹ್ಯಾಟ್ರಿಕ್​ ಹೀರೋ?

    ಪೃಥ್ವಿರಾಜ್‌ ಸುಕುಮಾರನ್ ನಿರ್ದೇಶನದ 'ಲೂಸಿಫರ್ 2'  ಸಿನಿಮಾ

ಮಲಯಾಳಂ ಖ್ಯಾತ ನಟ ಪೃಥ್ವಿರಾಜ್‌ ಸುಕುಮಾರನ್ ‘ಲೂಸಿಫರ್’ ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾ ಹಿಟ್​ ಆಗಿತ್ತು. ಇದೀಗ ಲೂಸಿಫರ್​ ಸಿನಿಮಾದ ಮುಂದುವರಿದ ಭಾಗವಾಗಿ ‘ಲೂಸಿಫರ್ 2’  ಸಿನಿಮಾ ನಿರ್ದೇಶನದತ್ತ  ಪೃಥ್ವಿರಾಜ್‌ ಸುಕುಮಾರನ್ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್​​ವುಡ್ ನಟ​ ಹ್ಯಾಟ್ರಿಕ್​ ಹೀರೋ ಶಿವರಾಜ್ ಕೂಡ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

‘ಲೂಸಿಫರ್’ ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಮೋಹನ್ ಲಾಲ್, ಪೃಥ್ವಿರಾಜ್‌, ವಿವೇಕ್ ಒಬೆರಾಯ್, ಟೊವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ಇದೀಗ ‘ಲೂಸಿಫರ್ 2’ ಸಿನಿಮಾ ಆರಂಭ ಆಗ್ತಿದ್ದು, ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಶಿವಣ್ಣಗೆ ಅಪ್ರೋಚ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಶಿವಣ್ಣ ಸದ್ಯಕ್ಕೆ ಚಿತ್ರತಂಡದ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಶಿವಣ್ಣ ಮಾಲಿವುಡ್​ ಸ್ಕ್ರೀನ್​ ಮೇಲೂ ರಾರಾಜಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಇಲ್ಲಿ ಸೈನಿಕರು ಹಾವಿನ ರಕ್ತ ಕುಡಿಬೇಕು, ಚೇಳು, ಎರೆಹುಳು ತಿನ್ಬೇಕು.. ಇವರ ಮಿಲಿಟರಿ ಟ್ರೈನಿಂಗ್​ ನೋಡಿದ್ರೆ ಭಯವಾಗುತ್ತೆ

ಸದ್ಯ ಲೋಕ ಸಭಾ ಚುನಾವಣೆ ದಿನಾಂಕ ನಿಗದಿಯಾಗಿದೆ. ಕರ್ನಾಟದಲ್ಲಿ ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ಕುಮಾರ್​ ಕೂಡ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಶಿವಮೊಗ್ಗದಿಂದ ಚುನಾವಣೆಗೆ ನಿಂತಿದ್ದಾರೆ. ಹೀಗಾಗಿ ಪತ್ನಿಯ ಗೆಲುವಿಗಾಗಿ ಶಿವ ರಾಜ್​ಕುಮಾರ್​ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೀಗ ಮಾಲಿವುಡ್​ ಸಿನಿಮಾಕಡೆಯಿಂದಲೂ ಶಿವಣ್ಣನಿಗೆ ಬೇಡಿಕೆ ಬಂದಿರುವ ಸುದ್ದಿ ಅಭಿಮಾನಿಗಳ ಸಂಸಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

.

‘ಲೂಸಿಫರ್​-2’ ಸಿನಿಮಾದಲ್ಲಿ ಶಿವಣ್ಣ? ಮಾಲಿವುಡ್​ ನಟ ಪೃಥ್ವಿರಾಜ್‌ ಸುಕುಮಾರನ್ ಕಡೆಯಿಂದ ಆಹ್ವಾನ!

https://newsfirstlive.com/wp-content/uploads/2024/03/Shivanna-4.jpg

Load More