newsfirstkannada.com

ಶಾಲೆಗೆ ನಾನ್​​ ವೆಜ್​ ತಂದ ಆರೋಪ; ಶಾಲೆಯಿಂದ ವಿದ್ಯಾರ್ಥಿಯನ್ನೇ ಹೊರಹಾಕಿದ ಪ್ರಿನ್ಸಿಪಾಲ್​​

Share :

Published September 6, 2024 at 4:09pm

    ಶಾಲೆಗೆ ನಾನ್ ವೆಜ್ ಊಟ ಕಟ್ಟಿಕೊಂಡು ಬರ್ತಿದ್ದ ವಿದ್ಯಾರ್ಥಿ ಸ್ಕೂಲ್​ನಿಂದ ಸಸ್ಪೆಂಡ್

    ನನ್ನ ಮಗ ಹಾಗಿಲ್ಲವೆಂದು ಪೋಷಕರ ವಾದ, ಪಟ್ಟು ಸಡಿಲಿಸದ ಪ್ರಿನ್ಸಿಪಾಲ್, ಆಗಿದ್ದೇನು?

    ಪ್ರಿನ್ಸಿಪಾಲ್ ಪಾಲಕರ ನಡುವಿನ ವಾಗ್ವಾದದ ವಿಡಿಯೋ ವೈರಲ್, ಪ್ರಕರಣ ದಾಖಲು

ಲಖನೌ: ಉತ್ತಪ್ರದೇಶದ ಅಮ್ರೋಹ್​ನ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಹಾಗೂ ಮಗುವಿನ ಪೋಷಕರ ನಡುವೆ ನಡೆದ ಗಲಾಟೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ನಾನ್​ ವೆಜ್​ ಊಟ ಶಾಲೆಗೆ ತಂದಿದ್ದಕ್ಕಾಗಿ ಶಾಲೆಯ ಪ್ರಿನ್ಸಿಪಾಲ್ 7 ವರ್ಷದ ವಿದ್ಯಾರ್ಥಿಯನ್ನು ಶಾಲೆಯಿಂದ ಸಸ್ಪೆಂಡ್ ಮಾಡಿದ್ದಾರೆ. ಇದೇ ವಿಚಾರವಾಗಿ ವಿದ್ಯಾರ್ಥಿಯ ಪಾಲಕರು ಬಂದು ಪ್ರಿನ್ಸಿಪಾಲ್​ರನ್ನು ಕೇಳಿದಾಗ, ನಾನು ಈ ರೀತಿಯ ವಿದ್ಯಾರ್ಥಿಗೆ ಇಲ್ಲಿ ವಿದ್ಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ತರದ ಸಂಸ್ಕಾರವನ್ನು ಹೊಂದಿರುವ ಮಗುವಿಗೆ ನಾನು ಇಲ್ಲಿ ಕಲಿಸುವುದಿಲ್ಲೆ ಎಂದು ಪ್ರಿನ್ಸಿಪಾಲ್ ವಾದ ಮಾಡಿದ್ದಾರೆ.

ಅಸಲಿಗೆ ಆಗಿದ್ದೇನು? ಅನ್ಯಕೋಮಿನ ಬಾಲಕ ಸಸ್ಪೆಂಡ್ ಆಗಿದ್ದು ಏಕೆ.?

ಪ್ರಿನ್ಸಿಪಾಲರು ಹೇಳುವ ಪ್ರಕಾರ ಸಸ್ಪೆಂಡ್ ಆದ ಮಗು ಶಾಲೆಗೆ ಮಾಂಸಾಹಾರ ಊಟವನ್ನು ಕಟ್ಟಿಕೊಂಡು ಬರುತ್ತಿದ್ದನಂತೆ. ಉಳಿದ ಮಕ್ಕಳಿಗೆ ತಿನ್ನುವಂತೆ ಒತ್ತಾಯ ಮಾಡುತ್ತಿದ್ದನಂತೆ. ಬೇರೆ ಮಕ್ಕಳು ಪ್ರಿನ್ಸಿಪಾಲರಿಗೆ ದೂರು ನೀಡಿದ್ದಾರೆ. ಇದು ಮಾತ್ರವಲ್ಲ, ನಾನು ನಿಮ್ಮೆಲ್ಲರನ್ನೂ ಮುಸ್ಲಿಂರನ್ನಾಗಿ ಮಾಡುತ್ತೇನೆ, ಈಗ ಇರುವ ಎಲ್ಲಾ ಮಂದಿರಗಳನ್ನು ಒಡೆಯುತ್ತೇನೆ ಎಂದು ತನ್ನ ಸ್ನೇಹಿತರೆದುರು ಹೇಳಿದ್ದಾನೆ ಎಂದು ಪ್ರಾಂಶುಪಾಲರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಆಂಧ್ರದಲ್ಲಿ ಅಧಿಕಾರಿಗಳ ಬಿಗ್ ಮಿಸ್ಟೇಕ್ಸ್; CM ಚಂದ್ರಬಾಬು ನಾಯ್ಡು ಪ್ರಾಣಾಪಾಯದಿಂದ ಪಾರು

ಇದೇ ವಿಚಾರವಾಗಿ ಪ್ರಿನ್ಸಿಪಾಲ್ ಹಾಗೂ ಬಾಲಕನ ಪೋಷಕರ ನಡುವೆ ವಾಗ್ವಾದ ಜೋರಾಗಿದೆ. ಆದ್ರೆ ಪೋಷಕರು ತಮ್ಮ ಮಗುವನ್ನು ಸಮರ್ಥಿಸಿಕೊಳ್ಳುತ್ತ ಅವನು ಎಂದಿಗೂ ನಾನ್ ವೆಜ್ ಊಟ ತೆಗೆದುಕೊಂಡು ಬಂದಿಲ್ಲ, ನಾವು ಕೊಟ್ಟು ಕೂಡ ಕಳುಹಿಸಿಲ್ಲ. ಅವನು ಜೋರಾಗಿ ಮಾತನಾಡಲು ಕೂಡ ಬರದಷ್ಟು ಮುಗ್ಧ. ಅವನ ಬಗ್ಗೆ ನಮ್ಮ ಏರಿಯಾದಲ್ಲಿ ಯಾರೂ ಕೂಡ ಬೆರಳು ಮಾಡಿ ಮಾತನಾಡಿಲ್ಲ. ಅಷ್ಟೊಂದು ಮುಗ್ಧ ಹುಡುಗ ಎಂದು ವಾದಿಸಿದ್ದಾರೆ.

ಇದನ್ನೂ ಓದಿ: ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!ಸದ್ಯ

ಈ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಬಳಿಕ ಅಮ್ರೋಹ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೂರು ಜನರಿರುವ ತನಿಖಾ ಕಮಿಟಿಯನ್ನು ರಚಿಸಿ ತನಿಖೆಗೆ ಅಮ್ರೋಹ್ ಪೊಲೀಸರು ಮುಂದಾಗಿದ್ದಾರೆ. ತನಿಖೆಯ ನಂತರವಷ್ಟೇ ಅಸಲಿಗೆ ಆ ಬಾಲಕ ಮಾಡಿದ್ದೇನು ಅನ್ನೋದರ ಸತ್ಯ ಹೊರಬೀಳಲಿದೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆಗೆ ನಾನ್​​ ವೆಜ್​ ತಂದ ಆರೋಪ; ಶಾಲೆಯಿಂದ ವಿದ್ಯಾರ್ಥಿಯನ್ನೇ ಹೊರಹಾಕಿದ ಪ್ರಿನ್ಸಿಪಾಲ್​​

https://newsfirstlive.com/wp-content/uploads/2024/09/PRINCIPAL-ON-NONVEG.jpg

Load More