newsfirstkannada.com

ಮೈಸೂರಲ್ಲಿ ಆರೆಂಜ್ ಅಲರ್ಟ್ ಘೋಷಣೆ! ಬಿಸಿಲಿಗೆ ಹೊರ ಬಾರದಂತೆ ಎಚ್ಚರಿಸಿದ ಹವಾಮಾನ ಇಲಾಖೆ

Share :

Published May 2, 2024 at 10:07am

    ಬಿಸಿಲಿನ ತಾಪ ತಾಳಲಾರದೆ ಕಂಗೆಟ್ಟ ರಾಜ್ಯದ ಜನರು

    ಐದು ದಿನಗಳ ಕಾಲ ಮೈಸೂರಲ್ಲಿ ಆರೆಂಜ್​ ಅಲರ್ಟ್​​

    ಈ ಸಮಯದಲ್ಲಿ ಹೊರಬರಬೇಡಿ ಎಂದ ಹವಾಮಾನ ಇಲಾಖೆ

ಮೈಸೂರು: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಬೇಗೆಗೆ ರಾಜ್ಯದ ಜನರು ಕಂಗಾಲಾಗಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಕಂಗೆಟ್ಟಿದ್ದಾರೆ. ಇತ್ತ ಮೈಸೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ರಣ ಬಿಸಿಲಿನಿಂದ ಜನರು ಬಳಲಿ ಬೆಂಡಾಗಿದ್ದಾರೆ. ಹೀಗಾಗಿ 1 ನೇ ತಾರೀಖಿನಿಂದ 5 ರವರೆಗೆ ಮೈಸೂರಿನಲ್ಲಿ ಅರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಖದ ಅಲೆ ಎಚ್ಚರಿಕೆಯಿಂದ ಈ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಬ್ಲೇಡ್‌ನಿಂದ ಹಲ್ಲೆ.. ಕೆನ್ನೆಗೆ ಗಾಯ

ಭಾರತದ ಹವಾಮಾನ ಇಲಾಖೆಯು ವಯಸ್ಸಾದವರು, ಮಕ್ಕಳನ್ನು ಬಿಸಿಲಿಗೆ ಕರೆ ತರಬೇಡಿ. 12 ಗಂಟೆಯಿಂದ 3 ಗಂಟೆಯ ವರೆಗೆ ಬಿಸಿಲಲ್ಲಿ ಕೆಲಸ ಮಾಡಬೇಡಿ. ಬಿಸಿಲಿಗೆ ಹೋಗುವ ಮುನ್ನ ಟೋಪಿ, ಕನ್ನಡಕ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಲ್ಲಿ ಆರೆಂಜ್ ಅಲರ್ಟ್ ಘೋಷಣೆ! ಬಿಸಿಲಿಗೆ ಹೊರ ಬಾರದಂತೆ ಎಚ್ಚರಿಸಿದ ಹವಾಮಾನ ಇಲಾಖೆ

https://newsfirstlive.com/wp-content/uploads/2023/06/Heat.jpg

Load More