newsfirstkannada.com

ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಬ್ಲೇಡ್‌ನಿಂದ ಹಲ್ಲೆ.. ಕೆನ್ನೆಗೆ ಗಾಯ

Share :

Published May 2, 2024 at 9:28am

  ಘಟನೆಯಿಂದ ತೀವ್ರ ಆತಂಕಕ್ಕೆ ಒಳಗಾದ ವಿದ್ಯಾರ್ಥಿನಿಯರು

  ಬಾಲಕಿ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿರುವುದು ಯಾರು..?

  ಮಕ್ಕಳು ಶಾಲಾ ಆವರಣದಲ್ಲಿ ಇರುವಾಗ ಹಲ್ಲೆ ಮಾಡಲಾಗಿದೆ

ನವದೆಹಲಿ: ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯ ಮುಖದ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ದೆಹಲಿಯ ಗುಲಾಬಿ ಬಾಗ್ ಟೈಪ್-1 CO-ED ಸರ್ವೋದಯ ವಿದ್ಯಾಲಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ದುಷ್ಕರ್ಮಿಗಳು ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿದ್ದಾರೆ. ಕೆನ್ನೆ ಮೇಲೆ ಕುಯ್ದುದಿದ್ದರಿಂದ ಸಾಕಷ್ಟು ರಕ್ತ ಹೋಗುತ್ತಲೇ ಇದೆ. ನೋವು ತಾಳಲಾರದೇ ವಿದ್ಯಾರ್ಥಿನಿಯು ಕಿರುಚಿಕೊಂಡು ಅಳುತ್ತಿದ್ದಾಳೆ. ಅಲ್ಲದೇ ಆಕೆಯ ಗೆಳೆತಿಯರು ಕೂಡ ಗಾಬರಿಗೊಂಡಿದ್ದಾರೆ. ಸದ್ಯ ಇದನ್ನು ಅಲ್ಲಿದ್ದ ಮಹಿಳೆಯೊಬ್ಬರು ಮೊಬೈಲ್​​ನಲ್ಲಿ ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?

ಹಲ್ಲೆ ಮಾಡಿದವರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಪೊಲೀಸರು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಘಟನೆಗಳು ಮಕ್ಕಳಲ್ಲಿ ಕಂಡು ಬರಬಾರದು. ಇದು ತೀವ್ರ ಆತಂಕವನ್ನು ಉಂಟು ಮಾಡುವ ಘಟನೆ ಆಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಬ್ಲೇಡ್‌ನಿಂದ ಹಲ್ಲೆ.. ಕೆನ್ನೆಗೆ ಗಾಯ

https://newsfirstlive.com/wp-content/uploads/2024/05/DELHI_SCHOLL.jpg

Load More