ಆಕೆ ಇಲ್ಲದಕ್ಕೆ ಕಂಜನ್ ಜೊತೆಗೆ ಧನಂಜಯನ ಗಲಾಟೆ
ರಿಯಲ್ ಫೈಟ್ ನೋಡಿ ಬೆಚ್ಚಿ ಬಿದ್ದ ಮೈಸೂರಿನ ಜನತೆ
ಕಂಜನ್ನನ್ನು ಅಟ್ಟಾಡಿಸಿಕೊಂಡು ಹೋದ ಧನಂಜಯ
ಮೈಸೂರು: ನಾಡಹಬ್ಬ ದಸರಾಗೆ ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಗಜಪಡೆಗಳು ಮೈಸೂರಿನಲ್ಲಿ ಬೀಡುಬಿಟ್ಟಿವೆ. ನಿನ್ನೆ ರಾತ್ರಿ ಊಟ ಕೊಡುವ ವೇಳೆ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಜಗಳ ಆಗಿದೆ.
ಕೋಪದಲ್ಲಿ ಧನಂಜಯ ಆನೆಯು ಕಂಜನ್ನನ್ನು ಅಟ್ಟಾಡಿಸಿದೆ. ಮೈಸೂರು ಅರಮನೆ ಆವರಣದಲ್ಲಿ ಕಂಜನ್ನನ್ನು ಓಡಿಸಿಕೊಂಡು ಬಂದಿದೆ. ಅತ್ತ ಕಂಜನ್ ತಪ್ಪಿಸಿಕೊಳ್ಳುವ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಿಗೆ ಸಾಕ್ಷಿಯಾಗಿದೆ.
ಧನಂಜಯ ಆನೆಯ ಕೋಪಗೊಂಡ ಕುರಿತು ಡಿಸಿಎಫ್ ಪ್ರಭುಗೌಡ ಮಾತನಾಡಿದ್ದಾರೆ. ಗಂಡಾನೆಗಳ ನೇಚರ್ ಹಾಗೇ ಇರುತ್ತೆ. ಪ್ರತಿ ಬಾರಿ ಆನೆಗಳಿಗೆ ಊಟ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿರುತ್ತಿತ್ತು. ನಿನ್ನೆ ರಾತ್ರಿ ಊಟ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇಲ್ಲದ ಕಾರಣ ಧನಂಜಯ ಆನೆ ಕಂಜನ್ ಆನೆ ಮೇಲೆ ಜಗಳಕ್ಕೆ ಬಿದ್ದಿದೆ ಅಷ್ಟೇ. ಧನಂಜಯ ಆನೆ ಕಂಜನ್ ಆನೆಯನ್ನ ಓಡಿಸಿಕೊಂಡು ಹೋಗಿದ್ದಾನೆ. ಈ ವೇಳೆ ಕಂಜನ್ ಆನೆಯಿಂದ ಮಾವುತ ಕೆಳಗೆ ಜಿಗಿದಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: TV ನೋಡುತ್ತಿದ್ದ ವೇಳೆ ಎದೆನೋವು.. ಹೃದಯಾಘಾತಕ್ಕೆ ಬಲಿಯಾದ 11 ವರ್ಷದ ಬಾಲಕ
ಬಳಿಕ ಮಾತನಾಡಿದ ಅವರು, ಯಾರು ಆತಂಕ ಪಡುವ ಅಗತ್ಯ ಇಲ್ಲ. ಅರಮನೆಯಿಂದ ಹೊರಗೆ ಹೋಗುತ್ತಿದಂತೆಯೇ ಧನಂಜಯಗೆ ಕಂಟ್ರೋಲ್ ಬಂದಿದೆ. ಈ ಘಟನೆ ಸಡನ್ ಆಗಿ ಆಗಿರುವುದು ಎಂದಿದ್ದಾರೆ.
ಇದನ್ನೂ ಓದಿ: ಡೇಂಜರ್ ಝೋನ್ ತಲುಪಿದ KL ರಾಹುಲ್; ಗೇಟ್ ಪಾಸ್ ಕೊಡಲು ನಿರ್ಧರಿಸಿತಾ ಬಿಸಿಸಿಐ
ಕಂಜನ್ ಮತ್ತು ಧನಂಜಯ ಆನೆಗೆ ಮದ ಬಂದಿಲ್ಲ, ಇದನ್ನ ಈಗಾಗಲೇ ಚೆಕ್ ಮಾಡಲಾಗಿದೆ. ಕಂಜನ್ ಆನೆ ರಸ್ತೆಗೆ ಹೋಗುತ್ತಿದಂತೆ ಜನರನ್ನ ನೋಡಿ ಗಾಬರಿಯಾಗಿ ಸುಮ್ನನಾಗಿದ್ದಾನೆ. ಜನರು ಆನೆಗಳನ್ನ ದೂರದಿಂದ ನೋಡಬೇಕು ಎಂದು ಡಿಸಿಎಫ್ ಪ್ರಭುಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ