Advertisment

ಮೈಸೂರು ರಾಜ ಮನೆತನಕ್ಕೆ ಶುಭ ಸುದ್ದಿ.. 2ನೇ ಮಗುವಿಗೆ ತಂದೆಯಾದ ಯದುವೀರ್ ಕೃಷ್ಣದತ್ತ ಒಡೆಯರ್

author-image
admin
Updated On
ಮೈಸೂರು ರಾಜ ಮನೆತನಕ್ಕೆ ಶುಭ ಸುದ್ದಿ.. 2ನೇ ಮಗುವಿಗೆ ತಂದೆಯಾದ ಯದುವೀರ್ ಕೃಷ್ಣದತ್ತ ಒಡೆಯರ್
Advertisment
  • 2016 ಜೂನ್ 27ರಂದು ಯದುವೀರ್, ತ್ರಿಷಿಕಾ ಕುಮಾರಿ ಮದುವೆ
  • ಅರಮನೆಯಲ್ಲಿ ಯದುವೀರ್ ಕಂಕಣಧಾರಿಗಳಾಗಿದ್ದಾಗ ಶುಭ ಸುದ್ದಿ
  • ಸಂಸದ ಯದುವೀರ್‌ ಒಡೆಯರ್‌ ಮನೆಗೆ ಎರಡನೇ ಪುತ್ರನ ಆಗಮನ

ಮೈಸೂರು: ರಾಜವಂಶಸ್ಥ ಯದುವೀರ್, ತ್ರಿಷಿಕಾ ದಂಪತಿ 2ನೇ ಮಗುವಿನ ಜನ್ಮ ನೀಡಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಕೇಳಿ ಬಂದಿರುವ ಈ ಸುದ್ದಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

Advertisment

publive-image

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅರಮನೆಯಲ್ಲಿ ಇಂದು ದಸರಾ ಪ್ರಯುಕ್ತ ಆಯುಧ ಪೂಜೆ ನೆರವೇರಿಸಲಾಗುತ್ತಿದೆ. ಅರಮನೆಯ ಖಾಸಗಿ ದರ್ಬಾರ್‌ಗಾಗಿ ಯದುವೀರ್ ಒಡೆಯರ್ ಅವರು ಕಂಕಣಧಾರಿಗಳಾಗಿದ್ದಾರೆ. ಇದರ ಮಧ್ಯೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 2ನೇ ಗಂಡು ಮಗುವಿಗೆ ತಂದೆ ಆಗಿದ್ದಾರೆ.

ಇದನ್ನೂ ಓದಿ: ಮೈಸೂರು ಅರಮನೆಯಿಂದ ಶುಭ ಸುದ್ದಿ.. ನವರಾತ್ರಿ ಸಂಭ್ರಮದಲ್ಲಿ ಯದುವೀರ್-ತ್ರಿಷಿಕಾ​ ದಂಪತಿಗೆ 2ನೇ ಮಗು ಜನನ 

ಮೈಸೂರು ರಾಜ ಮನೆತನದಲ್ಲಿ ಸಂತಾನ ಸಂಭ್ರಮ ಮುಗಿಲು ಮುಟ್ಟಿದೆ. ಶರ ನವರಾತ್ರಿ ಸಂಭ್ರಮವಿರುವಾಗಲೇ ರಾಜಪರಿವಾರಕ್ಕೆ ಹೊಸ ಅತಿಥಿ ಆಗಮನವಾಗಿದೆ. ಇದು ದಸರಾ ಸಂಭ್ರಮದಲ್ಲಿ ರಾಜವಂಶಸ್ಥರಿಗೆ ಮತ್ತೊಂದು ಸಂಭ್ರಮ ಮನೆ ಮಾಡಿದೆ.

Advertisment

publive-image

ಒಡೆಯರ ಪತ್ನಿ ತ್ರಿಷಿಕಾ ಕುಮಾರಿ ಅವರು ರಾಜಸ್ಥಾನದ ಡುಂಗರಪುರ ರಾಜ ಕುಟುಂಬದವರು. 2016 ಜೂನ್ 27ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಸ್ಥಾನದ ತ್ರಿಷಿಕಾ ಕುಮಾರಿ ದೇವಿ ಅವರನ್ನು ವಿವಾಹವಾಗಿದ್ದರು. ಆದ್ಯವೀರ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹಿರಿಯ ಪುತ್ರ. ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಮನೆಗೆ ಎರಡನೇ ಪುತ್ರನ ಆಗಮನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment