ಗದಗದಲ್ಲಿ ಹತ್ಯೆಯಾದ ನಾಲ್ವರಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ; ಇವರ ದತ್ತು ಮಗಳನ್ನೂ ಕೊಲೆಗೈದ ಪಾಪಿಗಳು

author-image
Ganesh
Updated On
ಮಲಗಿದ್ದಲ್ಲೇ ನಾಲ್ವರ ಬರ್ಬರ ಹತ್ಯೆ ಪ್ರಕರಣ; ಶಂಕಿತ ಕೊಲೆ ಆರೋಪಿಗಳು ಇವರೇನಾ?
Advertisment
  • ರಾತ್ರಿ ಮಲಗಿದ್ದಲ್ಲೇ ನಡೀತು ನಾಲ್ವರ ಬರ್ಬರ ಹತ್ಯೆ, ಬೆಚ್ಚಿಬಿದ್ದ ಗದಗ
  • ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಕೊಲೆ ಮಾಡಿ ಪರಾರಿ
  • ಹತ್ಯೆಯಾದ ನಾಲ್ವರಲ್ಲಿ ಮೂವರು ಕೊಪ್ಪಳದವರು ಎಂಬ ಮಾಹಿತಿ ಲಭ್ಯ

ಕೊಪ್ಪಳ/ಗದಗ: ಮಲಗಿದ್ದಲ್ಲೇ ನಾಲ್ವರ ಭೀಕರ ಹತ್ಯೆಗೈದ ಪ್ರಕರಣ ಗದಗ ನಗರದ ದಾಸರ ಓಣಿಯಲ್ಲಿ ಬೆಳಕಿಗೆ ಬಂದಿದೆ. ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಕೊಲೆ ಮಾಡಲಾಗಿದೆ. ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ 27, ಪರಶುರಾಮ 55, ಪತ್ನಿ ಲಕ್ಷ್ಮೀ 45, ಪುತ್ರಿ ಆಕಾಂಕ್ಷ 16 ಕೊಲೆಯಾದವರು.

ಇದನ್ನೂ ಓದಿ:ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ; ಮಲಗಿದ್ದಲ್ಲೇ ಕೊಲೆಗೈದು ದುಷ್ಕರ್ಮಿಗಳು ಪರಾರಿ

ಹತ್ಯೆಯಾದವರಲ್ಲಿ ಮೂವರು ಮೂಲತಃ ಕೊಪ್ಪಳದ ಭಾಗ್ಯನರದ ನಿವಾಸಿಗಳು. ಪರಶುರಾಮ, ಲಕ್ಷ್ಮೀ, ಆಕಾಂಕ್ಷ ಕೊಪ್ಪಳದ ಭಾಗ್ಯನಗರದ ನಿವಾಸಿಗಳು. ಹತ್ಯೆಯಾದ ಪರಶುರಾಮ ಬಿಜೆಪಿಯ ಕಾರ್ಯಕರ್ತ. ಕಳೆದ ಸ್ಥಳೀಯ ಚುನಾವಣೆಯಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಪಟ್ಟಣ ಪಂಚಾಯತಿಯ 13ನೇ ವಾರ್ಡ್​ನಿಂದ ಸ್ಪರ್ಧಿಸಿ ಸೋತಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್​​​ನಲ್ಲಿ ರೋಹಿತ್​ಗೆ ವಿರಾಟ್ ಸಾಥಿ; ಮಹತ್ವದ ನಿರ್ಧಾರದ ಹಿಂದಿನ ಅಸಲಿ ಲೆಕ್ಕಾಚಾರ ಇಲ್ಲಿದೆ..!

ನಂತರ ಹೋಟೆಲ್ ಬ್ಯುಸಿನೆಸ್​ನಲ್ಲಿ ಪರುಶುರಾಮ ತೊಡಗಿಸಿಕೊಂಡಿದ್ದರು. ಹತ್ಯೆಯಾದ ಮೂವರು ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿದ್ದರು. ಉಳಿದ ಪರಶುರಾಮ ಸಂಬಂಧಿಕರೆಲ್ಲ ಕುಷ್ಟಗಿ ತಾಲೂಕಿನ ಹನುಮಸಾಗರದ ಗಡಿಭಾಗದಲ್ಲಿ ವಾಸವಾಗಿದ್ದರು.
ಹತ್ಯೆಯಾದ ಪುತ್ರಿ ಆಕಾಂಕ್ಷಳನ್ನು ಪರಶುರಾಮ-ಲಕ್ಷ್ಮಿ ದಂಪತಿ ದತ್ತು ಪಡೆದುಕೊಂಡಿದ್ದರು. ಮಕ್ಕಳಾಗದ ಹಿನ್ನೆಲೆಯಲ್ಲಿ ಲಕ್ಷ್ಮೀ ಸಂಬಂಧಿಕರಿಂದ ಆಕಾಂಕ್ಷಳನ್ನು ದತ್ತು ಪಡೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment