ಹಾವು ಕೊಂ*ದ 24 ಗಂಟೆಯಲ್ಲೇ ಗುಡಿ ನಿರ್ಮಾಣ.. ಆದ್ರೂ ಮಕ್ಕಳಿಗೆ ಪದೇ ಪದೆ ಸರ್ಪ ಕಾಣುತ್ತಿರುವುದು ಏಕೆ?

author-image
Bheemappa
Updated On
ಹಾವು ಕೊಂ*ದ 24 ಗಂಟೆಯಲ್ಲೇ ಗುಡಿ ನಿರ್ಮಾಣ.. ಆದ್ರೂ  ಮಕ್ಕಳಿಗೆ ಪದೇ ಪದೆ ಸರ್ಪ ಕಾಣುತ್ತಿರುವುದು ಏಕೆ?
Advertisment
  • ತಿಳಿಯದೇ ಮಾಡಿದ ತಪ್ಪಿಗೆ ಬೇರೆ ಪರಿಹಾರದ ಮಾರ್ಗಗಳು ಇವೆಯಾ?
  • ಬಾಲಕಿ ಹೇಳಿದಂತೆ ದೇವಸ್ಥಾನ ನಿರ್ಮಾಣ ಆದರೂ ಸರ್ಪ ಕಾಣಿಸ್ತಿದೆ!
  • ದೊಡ್ಡವರಿಗೆ ಕಾಣಿಸಿಕೊಳ್ಳದ ಸರ್ಪ ಮಕ್ಕಳಿಗೆ ಮಾತ್ರ ಕಾಣುತ್ತಿದೆಯಾ?

ಪ್ರತಿಯೊಂದಕ್ಕೂ ಪರಿಹಾರ ಮಾರ್ಗ ಅನ್ನೋದು ಇದ್ದೇ ಇರುತ್ತೆ. ಆದ್ರೆ, ಅದನ್ನು ಯಾವ ರೀತಿಯಲ್ಲಿ ಶ್ರದ್ಧಾ ಭಕ್ತಿಯಿಂದ, ಕ್ರಮಬದ್ಧವಾಗಿ ಮಾಡುತ್ತೇವೆ ಅನ್ನೋದು ಮುಖ್ಯ. ಅಷ್ಟಕ್ಕೂ ಈ ಮಾತೇಕೆ ಅಂದ್ರೆ, ಹಾವಿನ ಹತ್ಯೆ ಬಳಿಕ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಆದ್ರೆ, ಹಾವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾ ಇರೋದು ಏಕೆ? ಪರಿಹಾರಕ್ಕೆ ಜ್ಯೋತಿಷಿಗಳು ತಿಳಿಸೋ ಮಾರ್ಗ ಏನು?.

ಹಾವು ಅಂದ್ರೆ ಸಾಕು ಮೈನಡುಗಿ ಹೋಗುತ್ತೆ. ಅಂತಾದ್ರಲ್ಲಿ ಊರಿನ ಮಕ್ಕಳಿಗೆ ಆಗಾಗ ದೊಡ್ಡ ನಾಗರ ಹಾವೊಂದು ಕಾಣಿಸಿಕೊಳ್ಳುತ್ತೆ ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ? ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಇದು ನಡೆದಿರುವುದು. ನಾಗರ ಹಾವು ಪದೇ ಪದೇ ಕಾಣಿಸಿಕೊಳ್ಳುತ್ತಿರೋದು ಏಕೆ? ದೇವಸ್ಥಾನ ಕಟ್ಟಿ ಪೂಜೆ ಸಲ್ಲಿಕೆ ಮಾಡಿದ್ರೂ ಪರಿಹಾರ ಆಗಿಲ್ವಾ? ಮಕ್ಕಳಿಗೆ ಕಾಣಿಸಿಕೊಳ್ಳುತ್ತಿರೋದು ಯಾಕಾಗಿ? ಇದ್ಕೆ ಇರೋ ಪರಿಹಾರ ಮಾರ್ಗವಾದ್ರೂ ಏನು? ಆ ಬಗ್ಗೆ ಜ್ಯೋತಿಷಿಗಳು ನ್ಯೂಸ್‌ ಫಸ್ಟ್‌ ಜೊತೆ ಮಾತಾಡಿದ್ದಾರೆ.

ಇದನ್ನೂ ಓದಿ: ಷಡ್ಯಂತ್ರ ಮಾಡಿದವರ ಹೆಸರು ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೀನಿ.. ಬಿ ನಾಗೇಂದ್ರ ಕಣ್ಣೀರು

publive-image

24 ಗಂಟೆಯಲ್ಲಿ ನಿರ್ಮಾಣವಾಯ್ತು ನಾಗನಿಗೆ ದೇವಸ್ಥಾನ!

ಮನೆಯ ಹಿತ್ತಲಿನಲ್ಲಿ ಈಗಷ್ಟೇ ನಿರ್ಮಾಣವಾಗಿರೋ ಪುಟ್ಟ ದೇವಸ್ಥಾನ. ಅಲ್ಲಿ ಪ್ರತಿಷ್ಠಾಪನೆ ಆಗಿರೋ ಕಲ್ಲಿನ ನಾಗ ದೇವರು. ದೇವರ ದರ್ಶನಕ್ಕೆ ತಂಡೋಪ ತಂಡವಾಗಿ ಬರುತ್ತಿರೋ ಜನ. ಇದು ಧಾರವಾಡ ಜಿಲ್ಲೆಯ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಕಂಡು ಬಂದ ದೃಶ್ಯ. ಇದು ಗ್ರಾಮದ ಹನುಮಂತ ಜಾಧವ ಎಂಬುವವರ ಹಿತ್ತಲಿನಲ್ಲಿ ಒಂದೇ ರಾತ್ರಿಯಲ್ಲಿ ನಿರ್ಮಾಣವಾಗಿರೋ ದೇವಸ್ಥಾನ. ನಾಗರ ಪಂಚಮಿ ಮುನ್ನಾದಿನ ಇವರ ಹಿತ್ತಲಿನ ಇದೇ ಸ್ಥಳದಲ್ಲಿ ದೊಡ್ಡ ನಾಗರಹಾವೊಂದು ಕಂಡಿತ್ತು. ತುಂಬಾ ದಿನಗಳಿಂದ ಓಡಾಡಿಕೊಂಡಿದ್ದ ಈ ಹಾವು ಕಂಡ ತಕ್ಷಣವೇ ಅದನ್ನು ಹೊಡೆದು ಕೊಂದಿದ್ದಾರೆ. ಅದಾದ ಒಂದು ವಾರದಲ್ಲಿ ಈ ಮನೆಯ 11 ವರ್ಷದ ಪೂಜಾ ಎಂಬ ಬಾಲಕಿಗೆ ಇದೇ ಹಿತ್ತಲಿನಲ್ಲಿ ನಾಗರಹಾವು ಕಾಣೋಕೆ ಶುರುವಾಗಿದೆ. ಆಕೆಗೆ ಮಾತ್ರವಲ್ಲ. ಅಕ್ಕಪಕ್ಕದ ಮನೆಗಳ ಮಕ್ಕಳಿಗೆ ಆ ಹಾವು ಕಂಡಿದೆ. ಆಗ ಇದು ಅಂದು ಕೊಂದಿರೋ ನಾಗರ ಹಾವಿನ ಪತ್ನಿ ಅಂತೆ, ಗಂಡನನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಬಂದಿದೆ. ನೀವು ದೇವಸ್ಥಾನ ಕಟ್ಟಿ ಎಂದು ಬಾಲಕಿ ಹೇಳಿದ್ದಾಳೆ. ಆಗ ಬಾಲಕಿ ಮೂಲಕವೇ ನಾಗದೇವತೆ ಹೇಳಿಸಿದ್ದಾಳೆಂದು ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಿಸಿದರು. ಅದೇ ದೇವಸ್ಥಾನದಲ್ಲಿ ಈಗ ನಾಗರಿಗೆ ಪೂಜೆ ನಡೆಯುತ್ತಿದೆ. ಆದ್ರೂ ಸರ್ಪ ಕಾಣಿಸಿಕೊಳ್ಳುವುದು ಮಾತ್ರ ನಿಂತಿಲ್ಲ.

ಸೇಡಾ? ಇಲವೇ ಜೊತೆಗಿರೋ ಹಾವು ನೋಡಲು ಬರುತ್ತಾ?

ನಡೆದುಕೊಂಡು ಹೋಗುತ್ತ ಇರುವಾಗ ದಾರಿಯಲ್ಲಿ ಹಾವು ಕಾಣೋದು ಇರ್ಲಿ, ಜೊತೆಗಿದ್ದವ್ರು ಹಾವು ಅಂತಾ ಒಂದು ಕ್ಷಣ ಕೂಗಿದ್ರೂ ಸಾಕು ಮೈ ನಡುಗಿ ಹೋಗುತ್ತೆ. ಯಾಕಂದ್ರೆ, ಮನುಷ್ಯರಿಗೆ ಹಾವುಗಳು ಅಂದ್ರೆ ಅಷ್ಟೊಂದು ಭಯ, ಭೀತಿ. ಅದ್ರಲ್ಲಿಯೂ ಮಕ್ಕಳಿಗೆ ಗಳಗಿ ಹುಲಕೊಪ್ಪ ಗ್ರಾಮದ ಮಕ್ಕಳಿಗೆ ಪದೇ ಪದೇ ಕಾಣಿಸಿಕೊಳ್ತಿರೋದ್ರಿಂದ ಪೋಷಕರು ಭಯ ಭೀತರಾಗಿದ್ದಾರೆ. ಆದ್ರೆ, ಇಲ್ಲಿರೋ ಪ್ರಶ್ನೆ ದೊಡ್ಡವರಿಗೆ ಕಾಣಿಸಿಕೊಳ್ಳದ ಹಾವು ಮಕ್ಕಳಿಗೆ ಮಾತ್ರ ಪದೇ ಪದೆ ಕಾಣಿಸಿಕೊಳ್ತಾ ಇರೋದು ಏಕೆ? ಅದ್ಕೆ ಜ್ಯೋತಿಷಿಗಳು ಏನ್‌ ಹೇಳ್ತಾರೆ ಕೇಳಿ.

ಅರ್ಚರು ಹೇಳೋ ಮಾತನ್ನು ಅಲ್ಲಗೆಳೆಯೋ ಹಾಗೂ ಇಲ್ಲ. ದೊಡ್ಡವರಿಗೆ ಕಾಣಿಸ್ಕೊಂಡ್ರೆ ಹೋಗ್ಲಿ ಬಿಡು ಅಂತಾ ನೆಗ್ಲೆಟ್‌ ಮಾಡಿ ಬಿಡ್ತಾರೆ. ಆದ್ರೆ ಮಕ್ಕಳಿಗೆ ಕಾಣಿಸ್ಕೊಂಡ್ರೆ ಹಿರಿಯರು ಭಯ ಬೀಳ್ತಾರೆ ಅನ್ನೋದ್‌ ಗೊತ್ತು. ಹೀಗಾಗಿ ಹಾವು ಮಕ್ಕಳಿಗೆ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೇ ಒಂದು ಹಾವನ್ನು ಸಾಯಿಸಿದ್ದಕ್ಕೆ ಮತ್ತೊಂದು ಹಾವು ಸೇಡು ತೀರಿಸಿಕೊಳ್ಳುತ್ತಿದೆಯೋ? ಇಲ್ಲವೇ ಜೊತೆಗಿರೋ ಹಾವು ಎಲ್ಲಿ ಹೋಯ್ತು ಅಂತಾ ಹುಡುಕಾಡ್ತಾ ಇದೆಯೋ? ಅನ್ನೋ ಪ್ರಶ್ನೆ ಇದೆ.

ಸರ್ಪದ ದಹನ ಕ್ರಿಯೆ ಸರಿಯಾಗಿ ಆಗಿಲ್ವಾ?

ಮನುಷ್ಯರಿಗೆ ಸರ್ಪದೋಷ ಅನ್ನೋದ್‌ ನಾನಾ ರೀತಿಯಲ್ಲಿ ಬರುತ್ತೆ. ಸರ್ಪವನ್ನು ಹತ್ಯೆ ಮಾಡಿದ್ರೆ, ಅದಕ್ಕೆ ಏನಾದ್ರೂ ಕಿರುಕುಳ ಕೊಟ್ಟರೇ, ಇಲ್ಲವೇ ನಾಗನ ನಡೆ ಇರುವಲ್ಲಿ ಗಲೀಜು ಮಾಡಿದ್ರೂ ಸರ್ಪದೋಷ ಬರುತ್ತೆ ಅಂತಾ ಜ್ಯೋತಿಷಿಗಳು ಹೇಳ್ತಾರೆ. ಅದ್ರಲ್ಲಿಯೂ ಸರ್ಪದ ಹತ್ಯೆ ಮಾಡಿದ್ರೆ ದೋಷ ಬಂದೇ ಬರುತ್ತೆ ಅಂತಾ ಹೇಳಲಾಗುತ್ತಿದೆ. ಇನ್ನು ಅದ್ಕೆ ಪರಿಹಾರ ಮಾರ್ಗ ಇಲ್ವಾ ಕೇಳಿದ್ರೆ ಖಂಡಿತ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರ ಮಾರ್ಗವಿದೆ. ಆದ್ರೆ, ಅದನ್ನು ಕ್ರಮಬದ್ಧವಾಗಿ ಮಾಡ್ಬೇಕು. ದೇವಸ್ಥಾನ ಕಟ್ಟಿಸಿದ್ವಿ, ಪೂಜೆ ಮಾಡಿದ್ವಿ ಅಂದ್ರೆ ಪರಿಹಾರ ಆಗಲ್ಲ ಅನ್ನೋ ಮಾತುಗಳನ್ನು ಅರ್ಚಕರು ಹೇಳ್ತಾರೆ.

ಇದನ್ನೂ ಓದಿ:ಗಂಡು ಸರ್ಪ ಕೊಂದಿದ್ದಕ್ಕೆ ಸೇಡು.. ನಾಗದೇವತೆಯೇ ಪ್ರತ್ಯಕ್ಷವಾಗಿ ಗುಡಿ ಕಟ್ಟಿಸಲು ಬಾಲಕಿಗೆ ಹೇಳಿತ್ತಾ?

publive-image

ತಿಳಿಯದೇ ಮಾಡಿರೋ ತಪ್ಪಿಗೆ ಬೇರೆ ಪರಿಹಾರದ ಮಾರ್ಗಗಳು ಇರ್ತಾವೆ. ಆದ್ರೆ ತಿಳಿದು ತಿಳಿದು ಮಾಡೋ ತಪ್ಪುಗಳಿಗೆ ಸುಲಭದಲ್ಲಿ ಪರಿಹಾರ ಮಾರ್ಗಗಳು ಸಿಗೋದಿಲ್ಲ. ಈಗಾಗೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪರಿಹಾರವನ್ನು ಮಾಡಿಸ್ಕೊಂಡು ಬಂದಿದ್ದಾರೆ. ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಹಾಗಾದ್ರೆ, ತಪ್ಪಾಗಿರೋದು ಎಲ್ಲಿ? ಇದ್ಕೆ ಇರೋ ಪರಿಹಾರ ಮಾರ್ಗವೇನು?

ಸರ್ಪ ತನ್ನ ಜೊತೆಗಿರೋ ಹಾವಿನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬರ್ತಾ ಇದೆಯೋ? ಇಲ್ಲವೇ ಜೊತೆಗಿರೋ ಹಾವನ್ನು ಹುಡುಕುತ್ತಾ ಬರ್ತಾ ಇದೆಯೋ ಗೊತ್ತಿಲ್ಲ. ಆದಷ್ಟು ಬೇಗ ಪರಿಹಾರದ ಮಾರ್ಗ ಸಿಗುವಂತಾಗಲಿ ಅಂತಾ ಆಶಿಸೋಣ. ಹಾಗೇ ಸರ್ಪಗಳು ಕಂಡಾಗ ಹತ್ಯೆ ಮಾಡಬೇಡಿ, ದೇವರು ಅಂತಾ ನಿಮ್ಮಲ್ಲಿ ನಂಬಿಕೆ ಇಲ್ಲದೇ ಇದ್ರೂ ಅದು ಒಂದು ಜೀವಿ ಅನ್ನೋ ಮಾನವೀಯತೆ ತೋರಿಸಬೇಕು ಎನ್ನುವುದು ನಮ್ಮ ಮನವಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment