newsfirstkannada.com

5 ನಿಮಿಷ ಲೇಟ್​ ಆಗಿದ್ದಕ್ಕೆ ದಂಡ ವಿಧಿಸಿದ ನಮ್ಮ ಮೆಟ್ರೋ; ಅಸಲಿ ಕಾರಣ ಬಿಚ್ಚಿಟ್ಟ ಯುವಕ; ಆಗಿದ್ದೇನು?

Share :

Published May 12, 2024 at 4:28pm

    ಬಿಎಂಆರ್​ಸಿಎಲ್ ರೂಲ್ಸ್​ಗಳಿಂದ ಕಂಗಾಲಾಗುತ್ತಿರೋ ಸಿಲಿಕಾನ್​ ಸಿಟಿ ಜನರು

    ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕ ಮೊಬೈಲ್​​ ಚಾರ್ಜ್ ಹಾಕಿದ್ದೇ ತಪ್ಪಾಗಿ ಬಿಡ್ತಾ!

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರಿಂದ ಆಕ್ರೋಶ

ಬೆಂಗಳೂರು: ನಿನ್ನೆ ಪ್ರಯಾಣಿಕನೊಬ್ಬ 20 ನಿಮಿಷಕ್ಕೂ ಅಧಿಕ ಕಾಲ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕಳೆದಿರೋದಕ್ಕೆ 50 ರೂಪಾಯಿ ದಂಡ ವಿಧಿಸಲಾಗಿತ್ತು. ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಅರುಣ್ ಜುಗಲಿ ಎಂಬ ಪ್ರಯಾಣಿಕ 20 ನಿಮಿಷಕ್ಕೂ ಅಧಿಕ ಕಾಲ ಮೆಟ್ರೋ ಸ್ಟೇಷನ್​ನಲ್ಲಿ ತಮ್ಮ ಪೋನ್​ಗೆ ಚಾರ್ಜ್ ಹಾಕಿಕೊಂಡಿದ್ದರು. ನಂತರ ಅದೇ ಸ್ಟೇಷನ್​ನಿಂದ ಹೊರ ಬರಲು ಪ್ರಯತ್ನಿಸುತ್ತಾರೆ. ಈ ವೇಳೆ ಪ್ರಯಾಣಿಕನ ಮೆಟ್ರೋ ಕಾರ್ಡ್​ನಿಂದ 50 ರೂಪಾಯಿ ಹೆಚ್ಚುವರಿಯಾಗಿ ಕಟ್ ಆಗುತ್ತೆ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೇ ಆತ ಸ್ಟೇಷನ್​ಲ್ಲಿ 20 ನಿಮಿಷಕ್ಕೂ ಅಧಿಕ ಕಾಲ ಕಳೆದಿರೋದಕ್ಕೆ ಪೆನಾಲ್ಟಿ ಹಾಕಲಾಗಿದೆ ಅನ್ನೋದು ಗೊತ್ತಾಗುತ್ತದೆ.

ಇದನ್ನೂ ಓದಿ: ಅನಗತ್ಯ ಮೆಟ್ರೋ ನಿಲ್ದಾಣದಲ್ಲಿ ಕಾಲ ಕಳೆದ್ರೆ ಬೀಳುತ್ತೆ ದಂಡ.. ನೀವು ಓದಲೇಬೇಕಾದ ಸ್ಟೋರಿ!

ಇದನ್ನೂ ಓದಿ: ರಾಧಾ ರಮಣ ಸೀರಿಯಲ್ ನಟಿ ಪವಿತ್ರಾ ಜಯರಾಂ ನಿಧನ; ಅಸಲಿಗೆ ಆಗಿದ್ದೇನು?

ಇನ್ನು, ಇದೇ ವಿಚಾರವಾಗಿ ದಂಡ ಕಟ್ಟಿದ್ದ ಪ್ರಯಾಣಿಕ ನ್ಯೂಸ್​​ಫಸ್ಟ್​​ಗೆ ಸಂದೇಶದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ನ್ಯೂಸ್​ಫಸ್ಟ್​​​ ಇನ್​ಸ್ಟಾಗ್ರಾಮ್​​ ವಿಡಿಯೋದಲ್ಲಿ ಕಾಮೆಂಟ್​ ಮಾಡೋ ಮೂಲಕ ತಮಗಾದ ಅನುಭವವನ್ನ ಹಂಚಿಕೊಂಡಿದ್ದಾರೆ.

ಆ ದಿನ ಏನಾಯಿತು ಎಂದರೆ, ಗುರುವಾರ ಭಾರೀ ಮಳೆಯಾಗುತ್ತಿತ್ತು. ಆದ್ದರಿಂದ ವಿಜಯನಗರ ಮೆಟ್ರೋದ ನಿರ್ಗಮನ ಸ್ಥಳದ ಹೊರಗೆ ಸುಮಾರು 300ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.

ಹಾಗೆಯೇ ನನ್ನ ಫೋನ್ ಸ್ವಿಚ್ ಆಫ್ ಆಗಿತು. ಮತ್ತು ನಿರ್ಗಮನ ಭಾಗದಲ್ಲಿ ಯಾವುದೇ ವಿದ್ಯುತ್ ಪ್ಲಗ್‌ಗಳು ಆನ್ ಆಗಿರಲಿಲ್ಲ. ಆದ್ದರಿಂದ ಮತ್ತೆ ಒಳಗೆ ಪ್ರವೇಶಿಸಲು ಮತ್ತು ಮಳೆ ನಿಲ್ಲುವವರೆಗೆ ನನ್ನ ಫೋನ್ ಅನ್ನು ಚಾರ್ಜ್ ಮಾಡಲು ಯೋಚಿಸಿದೆ. ನಾನು ಕೇವಲ 5 ನಿಮಿಷ ತಡವಾಗಿ ಹೊರ ಬಂದೆ. ಆಗ ಮೆಟ್ರೋ ಸಿಬ್ಬಂದಿ ಹೆಚ್ಚು ಕಾಲ ಇದ್ದಕ್ಕಾಗಿ 50 ರೂಗಳ ದಂಡವನ್ನು ವಿಧಿಸಿದ್ದರು. ನನ್ನ ಜೊತೆಗೆ 10ಕ್ಕೂ ಹೆಚ್ಚು ಜನರು ಈ ವಿಷಯದ ಬಗ್ಗೆ ಮಾತನಾಡಲಿಲ್ಲ. ವಿಜಯನಗರದ ಮೆಟ್ರೋ ನಿಲ್ದಾಣದಲ್ಲಿ ಗ್ರಾಹಕರಿಂದ ವಸೂಲಿ ಮಾಡಿರುವುದನ್ನು ಬಿಎಂಆರ್‌ಸಿಎಲ್‌ ಉಲ್ಲೇಖಿಸಿಲ್ಲ. ಹೀಗಾಗಿ ನಾನು ಕರೆ ಮಾಡಿ ಹಣ ವಾಪಸ್ ಕೇಳಿದೆ. ಈ ಘಟನೆಯ ನಂತರ ಅವರು ಅದೇ ಕಾರಣಕ್ಕಾಗಿ ಯಾವುದೇ ದಂಡವಿಲ್ಲದೆ ಸುಮಾರು 15 ಜನರನ್ನು ಕಳುಹಿಸಿದರು. ನನ್ನ ಅನುಮತಿಯ ಮೇರೆಗೆ ಇದನ್ನು ರೆಕಾರ್ಡ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ ಮಾಧ್ಯಮ ವರದಿಗಾರ ಸಹ ನಮ್ಮೊಂದಿಗಿದ್ದರು. ಇದು BMRCLನಿಂದ ಸಂಪೂರ್ಣ ವಂಚನೆಯಾಗಿದೆ ಅಂತ ಬರೆದಿದ್ದಾರೆ.

ಸದ್ಯ, ಇದೇ ವಿಡಿಯೋ ನೋಡಿದ ನೆಟ್ಟಿಗರು ನಾನು ಸಹ ಹೀಗೆ ದುಡ್ಡನ್ನು ಕಟ್ಟಿದ್ದೇನೆ. ಕೆಲ ಪ್ರಯಾಣಿಕರಿಗೆ ಈ ವಿಚಾರದ ಬಗ್ಗೆ ಗೊತ್ತಿದೆ. ಆದರೆ ಇನ್ನೂ ಕೆಲವರಿಗೆ ಇದರ ಬಗ್ಗೆ ಅರಿವಿಲ್ಲ. BMRCL ಕಡೆಯಿಂದ ಮತ್ತೊಂದು ಸುಲಿಗೆ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ನಿಮಿಷ ಲೇಟ್​ ಆಗಿದ್ದಕ್ಕೆ ದಂಡ ವಿಧಿಸಿದ ನಮ್ಮ ಮೆಟ್ರೋ; ಅಸಲಿ ಕಾರಣ ಬಿಚ್ಚಿಟ್ಟ ಯುವಕ; ಆಗಿದ್ದೇನು?

https://newsfirstlive.com/wp-content/uploads/2024/05/namma-metro2.jpg

Load More