ಟಿ 20 ವಿಶ್ವಕಪ್ ಆಟಗಾರರ ತೋಳಿನಲ್ಲಿ ಕನ್ನಡ ಡಿಂಡಿಮವ.. ನಂದಿನಿ ಪ್ರಾಯೋಜಕತ್ವ ಪಡೆದ 2 ತಂಡಗಳು ಯಾವ್ಯಾವುದು?

author-image
Ganesh
Updated On
ಟಿ 20 ವಿಶ್ವಕಪ್ ಆಟಗಾರರ ತೋಳಿನಲ್ಲಿ ಕನ್ನಡ ಡಿಂಡಿಮವ.. ನಂದಿನಿ ಪ್ರಾಯೋಜಕತ್ವ ಪಡೆದ 2 ತಂಡಗಳು ಯಾವ್ಯಾವುದು?
Advertisment
  • ನಂದಿನಿ ಲೋಗೋ ಹೊಂದಿರುವ ಜೆರ್ಸಿ ಅನಾವರಣ
  • ಕೆಎಂಎಫ್​ ಪ್ರಾಯೋಜಕತ್ವ ಪಡೆದ 2 ತಂಡಗಳು ಯಾವ್ಯಾವುದು?
  • ಜೂನ್ 2 ರಿಂದ ಟಿ20 ವಿಶ್ವಕಪ್​​ ಆರಂಭ ಆಗಲಿದೆ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಎಮ್​ಫ್​ (ಕರ್ನಾಟಕ ಹಾಲು ಮಹಾಮಂಡಳಿ) ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್ ತಂಡಕ್ಕೆ ಪ್ರಾಯೋಕತ್ವ ನೀಡಿದೆ.

ನಂದಿನಿ ಲೋಗೋ ಹೊಂದಿರುವ ಜೆರ್ಸಿಯಲ್ಲಿ ಈ ಎರಡೂ ತಂಡಗಳ ಆಟಗಾರರು ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು, ವಿಶೇಷ ಅಂದ್ರೆ ಸ್ಕಾಂಟ್ಲೆಂಡ್ ತಂಡದ ಆಟಗಾರರ ತೋಳಿನಲ್ಲಿ ಕನ್ನಡದಲ್ಲೇ ನಂದಿನಿ ಲೋಗೊ ಇರಲಿದೆ.

ಇದನ್ನೂ ಓದಿ:4 ದಿನ ಮೊದಲೇ ಮಾನ್ಸೂನ್ ಎಂಟ್ರಿ.. ಯಾವಾಗಿಂದ ಮುಂಗಾರು ಮಳೆ ಆರಂಭ..? ಮಹತ್ವದ ಮಾಹಿತಿ..!

publive-image

ಇದು ಕನ್ನಡಿಗರಲ್ಲಿ ಸಂಭ್ರಮ ಹೆಚ್ಚಿಸುವಂತೆ ಮಾಡಿದೆ. ಜೆರ್ಸಿ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಸ್ಕಾಟ್ಲೆಂಡ್‌ ಕ್ರಿಕೆಟ್ ಮಂಡಳಿ, ನಮ್ಮ ತಂಡ ಮತ್ತು ಬೆಂಬಲಿಗರಿಗೆ ಟಿ20 ವಿಶ್ವಕಪ್‌ನಲ್ಲಿ ನಂದಿನಿಯೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದೆ. ಸ್ಕಾಟ್ಲೆಂಡ್ ತಂಡದ ಜೆರ್ಸಿಯಲ್ಲಿ ‘ನಂದಿನಿ’ ಬ್ರಾಂಡ್​ ಲೋಗೋ ಅನಾವರಣ ಆಗಿದೆ.

ಇದನ್ನೂ ಓದಿ: CSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?

ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್​ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್​ಸಿಬಿಗೆ ವರದಾನ ಆಗುತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment