newsfirstkannada.com

Breaking: ದಾಭೋಲ್ಕರ್ ಹತ್ಯೆ ಕೇಸ್.. ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಕೇಸ್​ನಿಂದಲೇ ಖುಲಾಸೆ..!

Share :

Published May 10, 2024 at 11:56am

Update May 10, 2024 at 11:58am

    ಪುಣೆ ವಿಶೇಷ ಕೋರ್ಟ್​ನಿಂದ ಮಹತ್ವದ ತೀರ್ಪು

    ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟ

    2013ರ ಆಗಸ್ಟ್ 20ರಂದು ದಾಭೋಲ್ಕರ್ ಹತ್ಯೆ ಆಗಿತ್ತು

ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ (Narendra Dabholkar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯವು 11 ವರ್ಷಗಳ ನಂತರ ತೀರ್ಪು ಪ್ರಕಟಿಸಿದೆ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಮೂವರು ನಿರಪರಾಧಿಗಳು ಮತ್ತು ಇಬ್ಬರು ತಪ್ಪಿತಸ್ಥರು ಎಂದು ಕೋರ್ಟ್​ ಹೇಳಿದೆ.

ಕೋರ್ಟ್ ಹೇಳಿದ್ದೇನು..?
ಈ ಪ್ರಕರಣದಲ್ಲಿ ಆರೋಪಿ ವೀರೇಂದ್ರ ಸಿಂಗ್ ತಾವ್ಡೆ ವಿರುದ್ಧ ಪಿತೂರಿ ಆರೋಪ ಹೊರಿಸಲಾಗಿತ್ತು. ಆದರೆ ಸರ್ಕಾರದ ಕಡೆಯಿಂದ ಸಾಕ್ಷ್ಯಾಧಾರಗಳನ್ನು ಮಂಡಿಸಲು ಸಾಧ್ಯವಾಗದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. ಜೊತೆಗೆ ಪುನಾಲೇಕರ್ ಮತ್ತು ಭಾವೆ ವಿರುದ್ಧದ ಆರೋಪಗಳು ಸಾಬೀತಾಗದ ಕಾರಣ ಅವರನ್ನೂ ಖುಲಾಸೆಗೊಳಿಸಲಾಗುತ್ತಿದೆ. ಕಲಾಸ್ಕರ್ ಮತ್ತು ಅಂದುರೆ ವಿರುದ್ಧ ದಾಭೋಲ್ಕರ್ ಹತ್ಯೆಯ ಆರೋಪ ಸಾಬೀತಾಗಿದೆ. ಆದ್ದರಿಂದ ಇಬ್ಬರಿಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ:KL ರಾಹುಲ್​ ಕ್ಯಾಪ್ಟನ್ಸಿಗೆ ಕೊಕ್ ನೀಡುವ ಬಗ್ಗೆ ಮೌನ ಮುರಿದ LSG ಮ್ಯಾನೇಜ್ಮೆಂಟ್..!

2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ವಾಕಿಂಗ್ ಹೋಗುತ್ತಿದ್ದಾಗ ದಾಭೋಲ್ಕರ್ (67) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಐವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಪಿತೂರಿ), 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ದಾಭೋಲ್ಕರ್ ಹತ್ಯೆ ಕೇಸ್.. ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಕೇಸ್​ನಿಂದಲೇ ಖುಲಾಸೆ..!

https://newsfirstlive.com/wp-content/uploads/2024/05/Narendra-Dabholkar.jpg

Load More