Advertisment

‘ನಾವು ಕೊಡೋದೇ ಇಷ್ಟು ರೀ..’ ಬಿಜೆಪಿಗೆ ಎಷ್ಟು ಖಾತೆ? ನಿತೀಶ್​​, ನಾಯ್ಡುಗೆ ಸಿಗುವ ಮಂತ್ರಿ ಸ್ಥಾನ ಎಷ್ಟು..?

author-image
Ganesh
Updated On
ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?
Advertisment
  • ಪವರ್‌ಫುಲ್ ಖಾತೆಗಳ ಮೇಲೆ ಮಿತ್ರಪಕ್ಷಗಳ ಕಣ್ಣು
  • ಮಿತ್ರರ ಬೇಡಿಕೆಗೆ ಸೊಪ್ಪು ಹಾಕದಿರಲು ‘ಕಮಲ’ ಸಜ್ಜು
  • ನಾಳೆ ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ

ಲೋಕಸಭೆ ಎಲೆಕ್ಷನ್​​​ನಲ್ಲಿ ಭರ್ಜರಿ ಜಯ ದಾಖಲಿಸಿದ ಎನ್​​ಡಿಎ, ಮತ್ತೊಮ್ಮೆ ಸಿಂಹಾಸನ ಏರಲಿದೆ.. ಮೋದಿಯನ್ನ ಸರ್ಕಾರ ರಚನೆಗೆ ರಾಷ್ಟ್ರಪತಿ ಆಹ್ವಾನಿಸಿದ್ದು, ಪ್ರಧಾನಿ ಪಟ್ಟಕ್ಕೇರಿ ಹ್ಯಾಟ್ರಿಕ್​​​​ ಸಾಧನೆ ಹೆಜ್ಜೆ ಗುರುತು ಮೂಡಿಸಲಿದ್ದಾರೆ. ಪ್ರಧಾನಿಯಾಗಿ ಸತತ 3ನೇ ಬಾರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.. ನಾಳೆ ಭಾನುವಾರ ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

Advertisment

ಇತ್ತ ಎನ್‌ಡಿಎ ಒಕ್ಕೂಟದಲ್ಲಿ ಮಂತ್ರಿಗಿರಿ ಹಂಚೋದೆ ಕಮಲ ಪಾಳಯಕ್ಕೆ ಸವಾಲಾಗಿದೆ. ಎಲ್ಲಾ ಪಕ್ಷಗಳು ಕ್ಯಾಬಿನೆಟ್‌ನಲ್ಲಿ ಪಾರುಪತ್ಯ ಮೆರೆಯಲು ಸಜ್ಜಾಗಿವೆೆ. 81 ಕ್ಯಾಬಿನೆಟ್‌ ಹುದ್ದೆಗಳಲ್ಲಿ ಕಿಂಗ್‌ ಮೇಕರ್ಸ್‌ ಟಿಡಿಪಿ ಮತ್ತು ಜೆಡಿಯು ಪ್ರಬಲ ಖಾತೆ ಮೇಲೆ ಕಣ್ಣಿಟ್ಟಿವೆ. ಆದ್ರೆ, ಬಿಜೆಪಿ ಮಾತ್ರ ನಾವ್ ಕೊಡೋದೆ ಇಷ್ಟು ಅಂತ ಕಡ್ಡಿಮುರಿದಂತೆ ಹೇಳಲು ನಿರ್ಧರಿಸಿದೆಯಂತೆ.

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

ಬಿಜೆಪಿ ಬಳಿ ಯಾವೆಲ್ಲಾ ಖಾತೆ?

  1. ಗೃಹ ಖಾತೆ
  2. ಹಣಕಾಸು ಖಾತೆ
  3. ರಕ್ಷಣಾ ಖಾತೆ
  4. ವಿದೇಶಾಂಗ ಖಾತೆ
  5. ರೇಲ್ವೇ ಖಾತೆ
  6. ರಸ್ತೆ-ಹೆದ್ದಾರಿ ಖಾತೆ
  7. ಕಾನೂನು, ಐಟಿ ಖಾತೆ
  8. ಶಿಕ್ಷಣ ಖಾತೆ
  9. ಲೋಕಸಭಾ ಸ್ಪೀಕರ್
Advertisment

ಇವಿಷ್ಟು ಸಚಿವ ಸಂಪುಟದ ಪ್ರಬಲ ಖಾತೆಗಳನ್ನ ಹೊರತುಪಡಿಸಿ ಇನ್ನುಳಿದ ಸಂಪುಟ ದರ್ಜೆಯ ಸ್ಥಾನಮಾನ, ಮತ್ತು ರಾಜ್ಯ ಖಾತೆಗಳನ್ನ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಚಂದ್ರಬಾಬು ನಾಯ್ಡು ಪಕ್ಷ ಮತ್ತು ನಿತೀಶ್ ಕುಮಾರ್‌ಗೆ 4:1 ರಂತೆ ಸಚಿವ ಸ್ಥಾನ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

publive-image

ಟಿಡಿಪಿಗೆ ಯಾವ ಖಾತೆ?

  1. ಕ್ಯಾಬಿನೆಟ್‌ ಸಚಿವ ಸ್ಥಾನ (ನಾಗರಿಕ ವಿಮಾನಯಾನ)
  2. ರಾಜ್ಯ ಖಾತೆ (ಉಕ್ಕು ಖಾತೆ)
  3. ಡೆಪ್ಯುಟಿ ಸ್ಪೀಕರ್‌
Advertisment

ಜೆಡಿಯುಗೆ ಎಷ್ಟು ಖಾತೆ?

  1. ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ
  2. ರಾಜ್ಯ ಖಾತೆ ಸಚಿವ ಸ್ಥಾನ

ಶಿವಸೇನಾ (ಏಕನಾಥ್ ಶಿಂಧೆ)

  1. ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ
  2. ರಾಜ್ಯ ಖಾತೆಯ ಸಚಿವ ಸ್ಥಾನ

ಎಲ್‌ಜೆಪಿ ಎಷ್ಟು ಖಾತೆ

  1. ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ
  2. ರಾಜ್ಯ ಖಾತೆಯ ಸಚಿವ ಸ್ಥಾನ

ಜೆಡಿಎಸ್‌ಗೆ ಯಾವ ಖಾತೆ?
ಇನ್ನುಳಿದಂತೆ ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿಗೆ 1 ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ, 1 ರಾಜ್ಯ ಖಾತೆಯ ಸಚಿವ ಸ್ಥಾನ, ಹೆಚ್‌. ಡಿ. ಕುಮಾರಸ್ವಾಮಿಯವರ ಜೆಡಿಎಸ್‌ಗೆ 1 ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಅಂದ್ರೆ ಕೃಷಿ ಖಾತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?

publive-image

ಇನ್ನುಳಿದಂತೆ ಜನಸೇನಾ, ಆರ್.ಎಲ್.ಡಿ ಪಕ್ಷಗಳಿಗೆ ತಲಾ ಒಂದು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಅಥವಾ ಸ್ವತಂತ್ರ ಖಾತೆಯ ಹೊಣೆಗಾರಿಕೆ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.. ಇನ್ನುಳಿದ ಮಿತ್ರಪಕ್ಷಗಳಾದ ಹಿಂದೂಸ್ತಾನ್ ಅವಾಮ್ ಮೋರ್ಚಾ, ಅಪ್ನಾದಳಗೆ ತಲಾ ಒಂದು ರಾಜ್ಯ ಖಾತೆಯ ಸಚಿವ ಸ್ಥಾನ ನೀಡಲು ಕೇಸರಿ ಪಡೆ ಒಪ್ಪಿಗೆ ನೀಡಲು ಮುಂದಾಗಿದೆ ಅಂತ ತಿಳಿದುಬಂದಿದೆ. ಮೋದಿಯೇನೋ ಈ ರೀತಿ ಖಾತೆ ಹಂಚೋಕೆ ಪ್ಲಾನ್ ಮಾಡಿದ್ದಾರೆ. ಆದ್ರೆ ಮಿತ್ರಪಕ್ಷಗಳು ಸಡನ್ ಆಗಿ ಒಪ್ಪಿಬಿಡ್ತಾರಾ? ಮುಂದೆ ಏನೇನ್ ಹೈಡ್ರಾಮಾಗಳು ನಡೆಯುತ್ತೋ ನೋಡ್ಬೇಕು.

Advertisment

ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment