/newsfirstlive-kannada/media/post_attachments/wp-content/uploads/2024/06/William-Anders.jpg)
ಖ್ಯಾತ ನಾಸಾ ಗಗನಯಾತ್ರಿ, ಅಪೊಲೊ 8 ಸಿಬ್ಬಂದಿಯಾದ ವಿಲಿಯಂ ಆಂಡರ್ಸ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.​ ವಾಷಿಂ​​ಗ್​ನಲ್ಲಿ ಈ ಅವಘಡ ಸಂಭವಿಸಿದ್ದು, ಆಕಾಶದಿಂದ ನೆಲಕ್ಕಪ್ಪಳಿಸಿದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ನಾಸಾ ಗಗನಯಾತ್ರಿ ಸಾವನ್ನಪ್ಪಿದ್ದಾರೆ.
ಸ್ಯಾನ್​​ ಜುವಾನ್​ ಕೌಂಟಿಯ ಶೆರಿಫ್​ ಕಚೇರಿಯು ಈ ಘಟನೆಯ ಬಗ್ಗೆ ಹೇಳಿಕೊಂಡಿದೆ. ಜೀನ್ಸ್​ ದ್ವೀಪದ ಕರಾವಳಿಯಲ್ಲಿ ವಿಮಾನವೊಂದು ಪತನಗೊಂಡಿದೆ ಎಂದು ತಿಳಿಸಿದೆ. 70 ವರ್ಷದ ಹಳೆಯ ಮಾದರಿಯ ವಿಮಾನ ಉತ್ತರದಿಂದ ದಕ್ಷಿಣ ಕಡೆಗೆ ಹಾರುತ್ತಿತ್ತು. ಜೋನ್ಸ್​ ದ್ವೀಪದ ಉತ್ತರ ತುದಿಯ ಬಳಿ ಇದ್ದಕ್ಕಿದ್ದಂತೆಯೇ ನೆಲಕ್ಕೆ ಅಪ್ಪಳಿಸಿದೆ. ನೇರವಾಗಿ ಆಕಾಶದಿಂದ ನೀರಿಗೆ ಬಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವಿಮಾನದ ಒಳಗೆ ಇದ್ದ 90 ವರ್ಷ ವಯಸ್ಸಿನ ವಿಲಿಯಂ ಆಂಡರ್ಸ್ ಬೆಂಕಿ ಕಾಣಿಸಿಕೊಂಡು, ಮುಳುಗಿದೆ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾರೆ.
William Anders was 90 years old doing tricks in 70 year old plane. He went out like a fucking king! ?
pic.twitter.com/N5imE8sfU6— Mac Arthur (@DoctorMacArthur)
William Anders was 90 years old doing tricks in 70 year old plane. He went out like a fucking king! 🫡
pic.twitter.com/N5imE8sfU6— Mac Arthur (@DoctorMacArthur) June 8, 2024
">June 8, 2024
ಹಾಂಗ್​ಕಾಂಗ್​ನಲ್ಲಿ ಜನನ
ವಿಲಿಯಂ ಆಂಡರ್ಸ್​ ಅಕ್ಟೋಬರ್​ 17, 1933ರಲ್ಲಿ ಜನಿಸಿದರು. ಹಾಂಗ್​ಕಾಂಗ್​ನಲ್ಲಿ ಜನಿಸಿದ ಇವರು, 1955ರಲ್ಲಿ ಯುನೈಟೆಡ್​​ ಸ್ಟೇಟ್ಸ್​ ನೇವಲ್​ ಅಕಾಡೆಮಿಯಿಂದ ಪದವಿ ಪಡೆದರು. ಬಳಿಕ ಯುಎಸ್​ ಏರ್​ಪೋರ್ಟ್​ನಲ್ಲಿ ಕೆಲಸ ಮಾಡಿದರು.
ಇದನ್ನೂ ಓದಿ: 389 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ.. ರಾತ್ರಿ 12 ಗಂಟೆಗೆ ಟೇಕಾಫ್ ಆದ ಬೋಯಿಂಗ್​ 777ನಲ್ಲಿ ದೊಡ್ಡ ಅವಘಡ
1964ರಲ್ಲಿ ನಾಸಾದ ಗಗನಯಾತ್ರಿಯಾಗಿ ಆಯ್ಕೆಗೊಂಡರು. 1966ರಲ್ಲಿ ಜೆಮಿನಿ 11 ಮಿಷನ್​ ಮತ್ತು 1969ರಲ್ಲಿ ಐಕಾನಿಕ್​ ಅಪೊಲೊ 11 ಬ್ಯಾಕಪ್​ ಪೈಲಟ್​ ಆಗಿ ಕೆಲಸ ಮಾಡಿದರು. 6 ಸಾವಿರ ಗಂಟೆಗಳ ಹಾರಾಟದ ಪರಣತಿಯನ್ನು ಹೊಂದಿದ ಹೆಗ್ಗಳಿಕೆ ಇವರಿಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us