newsfirstkannada.com

ಖ್ಯಾತ ನಾಸಾ ಗಗನಯಾತ್ರಿ ದುರಂತ ಅಂತ್ಯ.. ನೋಡ ನೋಡುತ್ತಿದ್ದಂತೆಯೇ ನೆರಕ್ಕುರುಳಿದ ಫ್ಲೈಟ್, ಹೊತ್ತಿಕೊಳ್ತು ಬೆಂಕಿ

Share :

Published June 9, 2024 at 9:55am

Update June 9, 2024 at 10:00am

    ಆಕಾಶದಿಂದ ವೇಗವಾಗಿ ನೆಲಕ್ಕುರುಳಿದ ವಿಮಾನ

    ವಿಮಾನ ಅಪಘಾತದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ನೀರಿಗೆ ಬಿದ್ದರು ಹೊತ್ತಿಕೊಳ್ತು ಬೆಂಕಿ, ನಾಸಾ ಗಗನಯಾತ್ರಿ ಸಾವು

ಖ್ಯಾತ ನಾಸಾ ಗಗನಯಾತ್ರಿ, ಅಪೊಲೊ 8 ಸಿಬ್ಬಂದಿಯಾದ ವಿಲಿಯಂ ಆಂಡರ್ಸ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.​ ವಾಷಿಂ​​ಗ್​ನಲ್ಲಿ ಈ ಅವಘಡ ಸಂಭವಿಸಿದ್ದು, ಆಕಾಶದಿಂದ ನೆಲಕ್ಕಪ್ಪಳಿಸಿದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ನಾಸಾ ಗಗನಯಾತ್ರಿ ಸಾವನ್ನಪ್ಪಿದ್ದಾರೆ.

ಸ್ಯಾನ್​​ ಜುವಾನ್​ ಕೌಂಟಿಯ ಶೆರಿಫ್​ ಕಚೇರಿಯು ಈ ಘಟನೆಯ ಬಗ್ಗೆ ಹೇಳಿಕೊಂಡಿದೆ. ಜೀನ್ಸ್​ ದ್ವೀಪದ ಕರಾವಳಿಯಲ್ಲಿ ವಿಮಾನವೊಂದು ಪತನಗೊಂಡಿದೆ ಎಂದು ತಿಳಿಸಿದೆ. 70 ವರ್ಷದ ಹಳೆಯ ಮಾದರಿಯ  ವಿಮಾನ ಉತ್ತರದಿಂದ ದಕ್ಷಿಣ ಕಡೆಗೆ ಹಾರುತ್ತಿತ್ತು. ಜೋನ್ಸ್​ ದ್ವೀಪದ ಉತ್ತರ ತುದಿಯ ಬಳಿ ಇದ್ದಕ್ಕಿದ್ದಂತೆಯೇ ನೆಲಕ್ಕೆ ಅಪ್ಪಳಿಸಿದೆ. ನೇರವಾಗಿ ಆಕಾಶದಿಂದ ನೀರಿಗೆ ಬಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: VIDEO: ಪಿಜ್ಜಾ ತಿನ್ನುವುದರಲ್ಲೇ ಮಗ್ನಳಾಗಿದ್ದ ಮಹಿಳೆ.. ಸರ​ ಕಸಿದು ಪರಾರಿಯಾದ ಖತರ್ನಾಕ್​ ಕಳ್ಳ

ವಿಮಾನದ ಒಳಗೆ ಇದ್ದ 90 ವರ್ಷ ವಯಸ್ಸಿನ ವಿಲಿಯಂ ಆಂಡರ್ಸ್ ಬೆಂಕಿ ಕಾಣಿಸಿಕೊಂಡು, ಮುಳುಗಿದೆ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾರೆ.

ಹಾಂಗ್​ಕಾಂಗ್​ನಲ್ಲಿ ಜನನ

ವಿಲಿಯಂ ಆಂಡರ್ಸ್​ ಅಕ್ಟೋಬರ್​ 17, 1933ರಲ್ಲಿ ಜನಿಸಿದರು. ಹಾಂಗ್​ಕಾಂಗ್​ನಲ್ಲಿ ಜನಿಸಿದ ಇವರು, 1955ರಲ್ಲಿ ಯುನೈಟೆಡ್​​ ಸ್ಟೇಟ್ಸ್​ ನೇವಲ್​ ಅಕಾಡೆಮಿಯಿಂದ ಪದವಿ ಪಡೆದರು. ಬಳಿಕ ಯುಎಸ್​ ಏರ್​ಪೋರ್ಟ್​ನಲ್ಲಿ ಕೆಲಸ ಮಾಡಿದರು.

ಇದನ್ನೂ ಓದಿ: 389 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ.. ರಾತ್ರಿ 12 ಗಂಟೆಗೆ ಟೇಕಾಫ್ ಆದ ಬೋಯಿಂಗ್​ 777ನಲ್ಲಿ ದೊಡ್ಡ ಅವಘಡ

1964ರಲ್ಲಿ ನಾಸಾದ ಗಗನಯಾತ್ರಿಯಾಗಿ ಆಯ್ಕೆಗೊಂಡರು. 1966ರಲ್ಲಿ ಜೆಮಿನಿ 11 ಮಿಷನ್​ ಮತ್ತು 1969ರಲ್ಲಿ ಐಕಾನಿಕ್​ ಅಪೊಲೊ 11 ಬ್ಯಾಕಪ್​ ಪೈಲಟ್​ ಆಗಿ ಕೆಲಸ ಮಾಡಿದರು. 6 ಸಾವಿರ ಗಂಟೆಗಳ ಹಾರಾಟದ ಪರಣತಿಯನ್ನು ಹೊಂದಿದ ಹೆಗ್ಗಳಿಕೆ ಇವರಿಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ನಾಸಾ ಗಗನಯಾತ್ರಿ ದುರಂತ ಅಂತ್ಯ.. ನೋಡ ನೋಡುತ್ತಿದ್ದಂತೆಯೇ ನೆರಕ್ಕುರುಳಿದ ಫ್ಲೈಟ್, ಹೊತ್ತಿಕೊಳ್ತು ಬೆಂಕಿ

https://newsfirstlive.com/wp-content/uploads/2024/06/William-Anders.jpg

Load More