newsfirstkannada.com

ಚಂದ್ರನ ಮೇಲೆ ಅತಿ ದೊಡ್ಡ ಪ್ಲಾನ್ ಮಾಡಿದ ನಾಸಾ ವಿಜ್ಞಾನಿಗಳು; ಇದು ಕನಸಿನ ಮಾತು ಅಲ್ಲವೇ ಅಲ್ಲ!

Share :

Published May 14, 2024 at 5:30pm

Update May 14, 2024 at 5:44pm

  ನಾಸಾ ವಿಜ್ಞಾನಿಗಳ ಈ ಸೂಪರ್ ಪ್ಲಾನ್ ಜಾರಿ ಆಗೋದು ಯಾವಾಗ?

  ಚಂದ್ರನ ಮೇಲೆ ರೋಬೋಟಿಕ್‌ ಮೂಲಕ ರೈಲುಗಳ ಸಾರಿಗೆ ಸಂಚಾರ

  ನಾಸಾ ವಿಜ್ಞಾನಿಗಳಿಂದ ಚಂದ್ರನ ಮೇಲೆ ಹೊಸ ಮೈಲಿಗಲ್ಲು ಸೃಷ್ಟಿಸಲು ಪ್ಲಾನ್

ಚಂದ್ರನ ಮೇಲೆ ಮಹತ್ವದ ಅಧ್ಯಯನ ನಡೆಯುತ್ತಿರುವ ಕಾಲದಲ್ಲೇ ನಾಸಾ ವಿಜ್ಞಾನಿಗಳು ಹೊಸ ಮೈಲಿಗಲ್ಲು ಸೃಷ್ಟಿಸಲು ಮುಂದಾಗಿದ್ದಾರೆ. ಎಲ್ಲರಿಗಿಂತ ಮೊದಲು ಚಂದ್ರನ ಮೇಲೆ ಮೊಟ್ಟ ಮೊದಲ ರೈಲ್ವೆ ನಿಲ್ದಾಣ ಮಾಡುವ ಮೆಗಾ ಪ್ಲಾನ್ ಒಂದನ್ನ ಬಹಿರಂಗ ಪಡಿಸಿದೆ. ನಾಸಾ ವಿಜ್ಞಾನಿಗಳ ಈ ಸೂಪರ್ ಐಡಿಯಾ ವಿಜ್ಞಾನ ಲೋಕದಲ್ಲೇ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ.

ಇದನ್ನೂ ಓದಿ:  3 ವರ್ಷ 72 ಬಾರಿ ಹಾರಾಟ.. ಮಂಗಳ ಗ್ರಹದಲ್ಲಿ ‘ನಾಸಾ’ ಹೆಲಿಕಾಪ್ಟರ್‌ಗೆ ಕೊನೆಗೂ ವಿದಾಯ; ಸಾಧನೆ ಏನು? 

ಸೋಷಿಯಲ್ ಮೀಡಿಯಾದಲ್ಲಿ ನಾಸಾ ಪ್ರಕಟ ಮಾಡಿದೆ ಎನ್ನಲಾದ ಕೆಲವೊಂದು ಫೋಟೋಗಳು ವೈರಲ್ ಆಗಿದೆ. ಆ ಫೋಟೋದಲ್ಲಿ ರೋಬೋಗಳ ಮುಖಾಂತರ ಚಂದ್ರನ ಮೇಲೆ ರೈಲ್ವೆ ವ್ಯವಸ್ಥೆ ನಿರ್ಮಾಣ ಮಾಡುವ ಸಾಹಸಕ್ಕೆ ನಾಸಾ ಕೈ ಹಾಕಿದೆ ಎನ್ನಲಾಗಿದೆ. ಇದರ ಅಸಲಿಯತ್ತು ಏನು ಅಂತಾ ಹುಡುಕುತ್ತಾ ಹೋದಾಗ ಅಚ್ಚರಿಯ ಅಂಶಗಳು ಬಯಲಾಗಿದೆ.

ಹೌದು.. ನಾಸಾ (NASA) ಚಂದ್ರನ ಮೇಲೆ ಮೊದಲ ರೈಲ್ವೆ ವ್ಯವಸ್ಥೆ ನಿರ್ಮಾಣ ಮಾಡಲು ಹೊರಟಿದೆ. ಅಂದ್ರೆ ಚಂದ್ರನ ಮೇಲೆ ಹಳಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಹಳಿಗಳ ಮೇಲೆ ರೋಬೋಟ್ ರೈಲುಗಳು ಸಂಚಾರ ಮಾಡುವ ವ್ಯವಸ್ಥೆ ಮಾಡುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು.. ಇವರ ದೇಹದಲ್ಲಿ ಹಂದಿ ಕಿಡ್ನಿ ಎಷ್ಟು ದಿನ ಕೆಲಸ ಮಾಡಿತ್ತು? 

ಇದುವರೆಗೂ ನಾಸಾ ಹಲವು ಗಗನಯಾತ್ರಿಗಳನ್ನು ಚಂದ್ರನ ಮೇಲೆ ಕಳುಹಿಸಿ ಮಹತ್ವದ ಅಧ್ಯಯನ ನಡೆಸಿದೆ. ಈ ಅಧ್ಯಯನದ ಆಧಾರದಲ್ಲಿ ಚಂದ್ರನ ಅಂಗಳದಲ್ಲಿ ರೋಬೋಟ್ ರೈಲುಗಳನ್ನ ಓಡಿಸಲು ಯೋಜಿಸಿದೆ. ಇದಕ್ಕೆ Flexible Levitation on a Track (FLOAT) ಎಂದು ಕರೆಯಲಾಗಿದೆ. ಇದು ಚಂದ್ರನ ಮೇಲೆ ರೋಬೋಟಿಕ್ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಲು ಮುಂದಾಗಿದೆ.

ರೋಬೋಟಿಕ್ ತಜ್ಞರಾದ ಎಥಾನ್ ಸ್ಕೇಲರ್ ಅವರು ಚಂದ್ರನ ಮೇಲೆ ದೀರ್ಘಾವಧಿಯ ರೋಬೋಟಿಕ್ ಸಾರಿಗೆ ವ್ಯವಸ್ಥೆ ಮಾಡುವುದು ನಿರ್ಣಾಯಕವಾಗಿರುತ್ತದೆ. ಇದು ಕಾರ್ಯರೂಪಕ್ಕೆ ಬರುವುದಕ್ಕೆ ಹಲವು ಸವಾಲುಗಳನ್ನು ಹೊಂದಿದೆ. ಒಂದು ಅಂದಾಜಿನ ಪ್ರಕಾರ ಚಂದ್ರನ ಮೇಲೆ ರೋಬೋಟಿಕ್ ರೈಲ್ವೆ ಸಂಚಾರ ಮತ್ತಷ್ಟು ವರ್ಷಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. 2030ಕ್ಕೆ ಚಂದ್ರನ ಮೇಲೆ ರೋಬೋಟಿಕ್ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿರೀಕ್ಷೆ ಹೊಂದಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನ ಮೇಲೆ ಅತಿ ದೊಡ್ಡ ಪ್ಲಾನ್ ಮಾಡಿದ ನಾಸಾ ವಿಜ್ಞಾನಿಗಳು; ಇದು ಕನಸಿನ ಮಾತು ಅಲ್ಲವೇ ಅಲ್ಲ!

https://newsfirstlive.com/wp-content/uploads/2024/05/nasa-Railway-Station-2.jpg

Load More