ಬಾಹ್ಯಾಕಾಶದಲ್ಲಿ ಕೇಳಿಬಂದ ಕರ್ಕಶ ಶಬ್ಧ ಏನದು ಗೊತ್ತಾ?
ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದ ಶಬ್ಧ ಎಲ್ಲಿಂದ ಬಂತು
ಕೊನೆಗೂ ಆ ನಿಗೂಢತೆಯನ್ನು ಪತ್ತೆ ಹಚ್ಚಿ ಸರಿಪಡಿಸಿದ ನಾಸಾ
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿ 2 ತಿಂಗಳು ಕಳೆದಿವೆ. ತಾಂತ್ರಿಕ ಸಮಸ್ಯೆಯಿಂದಾಗಿ ಇಬ್ಬರು ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ನಾಸಾ ದಿನಾಲು ಅವರನ್ನು ಸಂಪರ್ಕಿಸುತ್ತಿದೆ. ಭೂಮಿಗೆ ಕರೆತರಲು ಪ್ರಯತ್ನಿಸುತ್ತಿದೆ.
ಹೀಗೆ ನಾಸಾ ಬಾಹ್ಯಾಕಾಶದಲ್ಲಿ ಬಾಕಿಯಾಗಿರುವ ಗಗನಯಾತ್ರಿಗಳನ್ನು ಸಂಪರ್ಕಿಸಿದಾಗ ಕರ್ಕಶ ಶಬ್ಧವೊಂದು ಕೇಳಿಬಂದಿದೆ. ಇದು ಭೂಮಿ ಮೇಲಿರುವ ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಆದರೀಗ ಆ ಶಬ್ಧವನ್ನು ನಾಸಾ ಪತ್ತೆಹಚ್ಚಿ ಸರಿಪಡಿಸಿದೆ.
ಬಾಹ್ಯಾಕಾಶದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬೋಯಿಂಗ್ ಸ್ಟಾರ್ಲೈನರ್ ಬಾಕಿಯಾಗಿದೆ. ಸುನೀತಾ ವಿಲಯಮ್ಸ್ ಮತ್ತು ಬುಚ್ ವಿಲ್ಮೋರ್ ಅಲ್ಲೇ ಉಳಿದುಕೊಂಡಿದ್ದಾರೆ. ಅವರ ಜೊತೆಗೆ ನಾಸಾ ಸಂಪರ್ಕಿಸಿದಾಗ ನಿಗೂಢ ಶಬ್ಧವೊಂದು ಕೇಳಿಬಂದಿದೆ. ಇದು ಕಳವಳ ಹುಟ್ಟಿಸಿದ್ದಲ್ಲದೆ, ಭಯದ ವಾತಾವರಣವನ್ನು ನಿರ್ಮಿಸಿತ್ತು. ಆದರೀಗ ಆತಂಕಕ್ಕೆ ದೂಡಿದ್ದ ಆ ಶಬ್ಧವನ್ನು ನಾಸಾ ಸರಿಪಡಿಸಿದೆ.
ಇದನ್ನೂ ಓದಿ: ದಾರಿ ಬಿಡಿ ದಾರಿ ಬಿಡಿ.. ಇಂದು ರಸ್ತೆಗಿಳಿಯಲಿದೆ ಹೊಸ ಜಾವಾ 42.. ಆಕರ್ಷಕ ಲುಕ್ ಜೊತೆಗೆ ವೈಶಿಷ್ಟ್ಯ ಹೇಗಿದೆ ಗೊತ್ತಾ?
ಬಾಹ್ಯಾಕಾಶ ನಿಲ್ದಾಣ ಮತ್ತು ಸ್ಟಾರ್ಲೈನರ್ ನಡುವಿನ ಆಡಿಯೋ ಕಾನ್ಫಿಗರೇಶನ್ನಿಂದ ಈ ಶಬ್ಧ ಉಂಟಾಗಿದೆ. ಸದ್ಯ ಈ ಸಮಸ್ಯೆಯನ್ನು ಸರಿದೂಗಿಸಿರುವ ನಾಸಾ ಅಂತಹ ಪ್ರತಿಕ್ರಿಯೆಯು ಸಾಮಾನ್ಯವಾಗಿದೆ ಎಂದಿದೆ. ಬಾಹ್ಯಾಕಾಶ ನೌಕೆ ಅಥವಾ ಅದರೊಳಗಿನ ಕಾರ್ಯಚರಣೆಗೆ ಯಾವುದೇ ಅಪಾಯವಾಗುವುದಿಲ್ಲ ಎಂದಿದೆ.
ಇದನ್ನೂ ಓದಿ: ಮದ್ವೆ ಆದ ಮೇಲೆ ಕಂಡಿಲ್ಲ ಅಂದ್ರೆ ಹೀಗೆಲ್ಲಾ ಕೇಳೋದಾ? ದೀಪಿಕಾ ದಾಸ್ ಕೊಟ್ಟ ಗುಡ್‌ನ್ಯೂಸ್ ಏನು? VIDEO
ಮಾಜಿ ಗಗನಯಾತ್ರಿ ಕ್ರಿಸ್ ಹ್ಯಾಡ್ಫೀಲ್ಡ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು. ‘ಬಾಹ್ಯಾಕಾಶ ನೌಕೆಯಲ್ಲಿ ಕೇಳಿಬರುವ ಶಬ್ಧಗಳಲ್ಲಿ ಇದು ಒಂದಾಗಿದೆ. ಈ ಶಬ್ಧವು ಅಸಾಮಾನ್ಯವಾಗಿದೆ. ಬಾಹ್ಯಾಕಾಶ ಉತ್ಸಾಹಿಗಳಿಗೆ ಮಾತ್ರ ಈ ಶಬ್ಧ ಆಸಕ್ತಿಯನ್ನು ಹುಟ್ಟಿಹಾಕುವಂತೆ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.
ಜೂನ್ 5ರಂದು ಹೊರಟ ಸ್ಟಾರ್ಲೈನರ್ 7 ದಿನಗಳ ಬಳಿಕ ವಾಪಾಸ್ ಆಗಬೇಕಿತ್ತು. ಆದರೆ ಕ್ಯಾಪ್ಸುಲ್ ಸಮಸ್ಯೆಯಿಂದ ಬಾಕಿಯಾಗಿದೆ. ಸದ್ಯ ನಾಸಾ ಎಲಾನ್ ಮಸ್ಕ್ನ ಸ್ಪೇಸ್ ಎಕ್ಸ್ ಮೂಲಕ ಅವರನ್ನು ಕರೆತರಲು ಪ್ರಯತ್ನಿಸುತ್ತಿದೆ. 2025ರ ವೇಳೆ ಇಬ್ಬರು ಭೂಮಿಗೆ ಬರುವ ನಿರೀಕ್ಷೆಯಿದೆ. ಸದ್ಯ ಇಬ್ಬರು ಗಗನಯಾತ್ರಿಗಳು ಸುರಕ್ಷಿತವಾಗಿ ಹಿಂತಿರುಗಿ ಬರಲು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ದಿನನಿತ್ಯ ನಾಸಾ ಕೊಡುವ ಮಾಹಿತಿಗಾಗಿ ಕುತೂಹಲತೆಯಿಂದ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ