newsfirstkannada.com

ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್​​.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?

Share :

Published June 5, 2024 at 9:32am

Update June 5, 2024 at 10:47am

    ಮೊನ್ನೆ ತನಕ ‘ನಾನೊಂದು ತೀರಾ ನೀನೊಂದು ತೀರಾ’

    ಅನುಮಾನದ ಪಿಕ್ಚರನ್ನೇ ಬದಲಾಯಿಸಿದ ನತಾಶಾ ಸ್ಟಾಂಕೋವಿಕ್

    ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆ ಪೋಸ್ಟ್​ ನೋಡಿ ಫ್ಯಾನ್ಸ್​ ಶಾಕ್

ಇತ್ತೀಚೆಗೆ ಟೀಂ ಇಂಡಿಯಾದ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ವೈವಾಹಿಕ ಜೀವನದ ಕತೆ ‘ನಾನೊಂದು ತೀರಾ ನೀನೊಂದು ತೀರಾ’ ಎಂಬಂತೆ ಬಿತ್ತರವಾಗಿತ್ತು. ಸರ್ಬಿಯಾ ಪತ್ನಿ ನತಾಶಾ ಸ್ಟಾಂಕೋವಿಕ್​ಗೆ ಡಿವೋರ್ಸ್​ ನೀಡಿದ್ದಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಡಿಲೀಟ್​ ಮಾಡಿದ್ದರು. ಇದನ್ನು ಗಮನಿಸಿದ್ದ ಫ್ಯಾನ್ಸ್​ ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್​ ಬಿದ್ದಿದೆ ಅಂದುಕೊಂಡಿದ್ದರು. ಆದರೀಗ ಫ್ಯಾನ್ಸ್​ ಅಂದುಕೊಂಡಿರುವುದು ಸುಳ್ಳಾಗಿದೆ. ನತಾಶಾ ಸ್ಟಾಂಕೋವಿಕ್​ ಹಾರ್ದಿಕ್​ ಜೊತೆಗಿನ ವಿವಾಹದ ಫೋಟೋವನ್ನು ಇನ್​ಸ್ಟಾದಲ್ಲಿ ಮತ್ತೆ ಹಂಚಿಕೊಂಡಿದ್ದಾರೆ. ಆ ಮೂಲಕ ಹಳೆಯ ಬ್ರೇಕಿಂಗ್​ ಸ್ಟೋರಿಗೆ ಹೊಸ ಶಾಕಿಂಗ್​ ಸಂದೇಶ ಕೊಟ್ಟಿದ್ದಾರೆ.

ಸೆರ್ಬೀಯಾದ ಚೆಲುವೆಗೆ ಪಾಂಡ್ಯ ಬೋಲ್ಡ್​

ನತಾಶಾ ಸ್ಟಾಂಕೋವಿಕ್​ ಭಾರತದವಳು ಅಲ್ಲ, ಸೆರ್ಬೀಯಾದವಳು. ಹಾರ್ದಿಕ್​ ಪಾಂಡ್ಯಗೆ ಆಕೆ 2018ರಲ್ಲಿ ಸಿಕ್ಕಳು. ಮುಂಬೈ ನೈಟ್​ಕ್ಲಬ್​ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು. ಪರಿಚಯ ಸ್ನೇಹವಾಗಿ ಹಾರ್ದಿಕ್​ ಮತ್ತು ನತಾಶಾ ನಡುವಿನ ಒಡನಾಟ ಜಾಸ್ತಿಯಾಯಿತು. ಮಾತ್ರವಲ್ಲದೆ ಅನೇಕರು ಇವರಿಬ್ಬರ ಓಡಾಟದ ಬಗ್ಗೆ ಅನುಮಾನವು ಹುಟ್ಟುಕೊಂಡಿತು. ಕೊನೆಗೆ 2019ರಲ್ಲಿ ಹಾರ್ದಿಕ್​ ತನ್ನ ಇನ್​ಸ್ಟಾದಲ್ಲಿ ‘ಬೆಸ್ಟ್​ ಫ್ರೆಂಡ್​’ ಎಂದು ಕರೆಯುವ ಮೂಲಕ ಇಬ್ಬರ ಸ್ನೇಹವನ್ನು ಎತ್ತಿತೋರಿಸಿದರು.

ಇದನ್ನೂ ಓದಿ: Aadhaar ಅಪ್ಡೇಟ್​ ಮಾಡಿಲ್ವಾ? ಆನ್​ಲೈನ್​ನಲ್ಲಿ ಉಚಿತವಾಗಿ ಮಾಡ್ಬೋದು! ಹೇಗೆ ಗೊತ್ತಾ?

2020ರಲ್ಲಿ ಹಾರ್ದಿಕ್​ ಆಕೆಗೆ ಪ್ರಪೋಸ್​​ ಮಾಡಬೇಕು ಎಂದು ಬಯಸಿದ್ದರು. ಅದರಂತೆಯೇ ಜನವರಿ 1 ರಂದು ಹಾರ್ದಿಕ್​ ಆಕೆಯನ್ನು ಪ್ರಪೋಸ್​ ಮಾಡಿದರು. ಬಳಿಕ ಇಬ್ಬರು ನಡುವಿನ ಸ್ನೇಹ ಪ್ರೀತಿಗೆ ತಿರುಗಿರುವ ವಿಚಾರ ಎಲ್ಲೆಡೆ ಹಬ್ಬಿತು. ಬಳಿಕ ಅದೇ ವರ್ಷ ಮೇ ತಿಂಗಳಿನಲ್ಲಿ ನತಾಶಾ ಗರ್ಭಿಣಿಯಾದಳು. ನಂತರ ಈ ಜೋಡಿ ಅಗಸ್ತ್ಯ ಎಂಬ ಮುಂದಾದ ಮಗನನ್ನು ಜುಲೈ ತಿಂಗಳಿನಲ್ಲಿ ಬರಮಾಡಿಕೊಂಡರು. ಮಗನ ಜನನದ ಬಳಿಕ ಹಾರ್ದಿಕ್​ ಮತ್ತು ನತಾಶಾ ಇಬ್ಬರು ಸಾಂಪ್ರದಾಯಿಕವಾಗಿ ವಿವಾಹವಾಗಲು ಬಯಸುತ್ತಾರೆ. ಫೆಬ್ರವರಿ 14, 2023ರಂದು ಉಯದಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುತ್ತಾರೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಈ ಜೋಡಿ ವಿವಾಹವಾಗುತ್ತಾರೆ.

ಇದನ್ನೂ ಓದಿ: ಕಂಗ್ರಾಜುಲೇಷನ್ ನರೇಂದ್ರ ಮೋದಿ.. ಫಲಿತಾಂಶದ ಬೆನ್ನಲ್ಲೇ ಶುಭಾಶಯ ತಿಳಿಸಿದ ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ

ಇತ್ತೀಚೆಗೆ ಪಾಂಡ್ಯ ಮತ್ತು ನತಾಶಾ ನಡುವಿನ ಓಡನಾಟ ಕಣ್ಣಿಗೆ ಕಾಣಿಸದೆ ಇರುವುದನ್ನು ಫ್ಯಾನ್ಸ್​ ತಪ್ಪಾಗಿ ತಿಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇವರ ಕುರಿತಾಗಿ ಡಿವೋರ್ಸ್​ ಸುದ್ದಿ ಹರಿದಾಡಿದೆ. ಸದ್ಯ ಈ ಜೋಡಿ ಆ ಎಲ್ಲಾ ಉಹಾಪೋಹಗಳಿಗೆ ಕದ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್​​.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?

https://newsfirstlive.com/wp-content/uploads/2024/05/Hardik-Pandya_Team-India.jpg

Load More