/newsfirstlive-kannada/media/post_attachments/wp-content/uploads/2024/05/HARDIK_PANDYA-1.jpg)
ಡಿವೋರ್ಸ್​​ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​​ ಹಾರ್ದಿಕ್​ ಪಾಂಡ್ಯ ಮನೆಯಿಂದ ನತಾಶಾ ಸ್ಟಾಂಕೋವಿಕ್ ಹೊರ ನಡೆದಿದ್ದಾರೆ ಎಂದು ವರದಿಯಾಗಿದೆ.
ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟೈಮ್ಸ್ ನೌ ಮಾಡಿರೋ ವರದಿ ಪ್ರಕಾರ ನತಾಶಾ ಸ್ಟಾಂಕೋವಿಕ್ ಅವರು ಹಾರ್ದಿಕ್ ಪಾಂಡ್ಯನಿಂದ ಹೊರನಡೆದಿದ್ದಾರೆ. ಅವರು ಹಿಂತಿರುಗುತ್ತಾರೋ ಇಲ್ಲವೋ ಅನ್ನೋ ಮಾಹಿತಿ ಕೂಡ ಯಾರಿಗೂ ಇಲ್ಲ. ನನಗೆ ಇರೋ ಮಾಹಿತಿ ಪ್ರಕಾರ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಇಬ್ಬರು ಪ್ರತ್ಯೇಕವಾಗಿದ್ದಾರೆ ಎಂದು ಕುಟುಂಬದ ಆಪ್ತರು ಹೇಳಿದ್ದಾರಂತೆ.
/newsfirstlive-kannada/media/post_attachments/wp-content/uploads/2024/05/Hardik-Pandya_Team-India.jpg)
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ 2020ರಲ್ಲಿ ಮೇ 31ರಂದು ವಿವಾಹವಾದರು. ಜುಲೈ 2020ರಲ್ಲಿ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದರು. ಉದಯಪುರದಲ್ಲಿ ತಮ್ಮ 3ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಇನ್ನು, ಇಂಡಿಯನ್​ ಪ್ರೀಮಿಯರ್​ ಲೀಗ್​ ಈಗಾಗಲೇ ಮುಗಿದಿದೆ. ಜೂನ್ 2ನೇ ತಾರೀಕು 2024ರ ಐಸಿಸಿ ಟಿ20 ವಿಶ್ವಕಪ್​​​ ಶುರುವಾಗಲಿದೆ. ಹಾಗಾಗಿ ಯುಎಸ್​​ಗೆ ಹೋಗಿ ಟೀಮ್​ ಇಂಡಿಯಾ ಸೇರಿಕೊಳ್ಳಲು ಹಾರ್ದಿಕ್​ ಪಾಂಡ್ಯ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us