newsfirstkannada.com

Hardik Pandya: ಅಬ್ಬಬ್ಬಾ! ಹಾರ್ದಿಕ್​​​ ಪಾಂಡ್ಯ ಹೆಂಡತಿ ನತಾಶಾ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

Share :

Published May 28, 2024 at 4:17pm

    ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಹಾರ್ದಿಕ್​​ ಪಾಂಡ್ಯಗೆ ಸಂಕಷ್ಟ

    ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಫುಲ್​ ಡಿಸ್ಟರ್ಬ್​ ಆದ್ರಾ ಹಾರ್ದಿಕ್​ ಪಾಂಡ್ಯ?

    ನತಾಶಾಗೆ ಹಾರ್ದಿಕ್​ ಪಾಂಡ್ಯ ಎಷ್ಟು ಕೋಟಿ ಜೀವನಾಂಶ ನೀಡಬೇಕು?

ಕಳೆದ ಎರಡು ತಿಂಗಳ ಹಿಂದೆಯಷ್ಟೇ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ಗಾಗಿ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿಯಿಂದ ರೋಹಿತ್​ ಶರ್ಮಾರನ್ನು ಕಿತ್ತು ಹಾರ್ದಿಕ್​ ಪಾಂಡ್ಯರಿಗೆ ಪಟ್ಟ ಕಟ್ಟಲಾಯ್ತು. ಅಂದಿನಿಂದಲೂ ಹಾರ್ದಿಕ್​ ಪಾಂಡ್ಯ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಐಪಿಎಲ್​ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಹಾರ್ದಿಕ್​​​ ನಿಂದನೆಗೆ ಗುರಿಯಾದ್ರು. ಈಗ ತಮ್ಮ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಯೆಸ್​​​​, ಟಿ20 ವಿಶ್ವಕಪ್​​ಗೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯಗೆ ಸಂಕಷ್ಟ ಎದುರಾಗಿದೆ. ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಇಬ್ಬರು ಬೇರೆಯಾಗಿದ್ದು, ಸದ್ಯದಲ್ಲೇ ಡಿವೋರ್ಸ್​​ ಮಾಡಿಕೊಳ್ಳಬಹುದು ಎಂದು ವರದಿಯಾಗಿದೆ.

ಏನಿದು ಘಟನೆ..?

ಸರ್ಬಿಯಾದ ಮಾಡೆಲ್ ಸ್ಟಾಂಕೋವಿಕ್ ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಎಂಬ ಹೆಸರನ್ನು ತೆಗೆದುಹಾಕಿದ್ದರು. ಇದಾದ ಬಳಿಕ ಇಬ್ಬರು ತಮ್ಮ ಫೋಟೋಗಳನ್ನು ಎಲ್ಲೂ ಶೇರ್​ ಮಾಡಿಲ್ಲ. ಅದರಲ್ಲೂ ಮಾರ್ಚ್​​ 4ನೇ ತಾರೀಕು ನತಾಶಾ ಸ್ಟಾಂಕೋವಿಕ್ ಬರ್ತಡೇ. ಅಂದು ಹಾರ್ದಿಕ್​​​​​ ಹೆಂಡತಿಗೆ ಒಂದು ಸ್ಟೇಟಸ್​ ಹಾಕಿ ವಿಶ್​ ಮಾಡಿಲ್ಲ. ಇತ್ತೀಚೆಗೆ ಈ ಬಗ್ಗೆ ಮೀಡಿಯಾದವ್ರು ಪ್ರಶ್ನೆ ಮಾಡಿದಾಗಲೂ ನತಾಶಾ ಯಾವುದೇ ರಿಯಾಕ್ಟ್​ ಮಾಡಿರಲಿಲ್ಲ.

ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಪಾಂಡ್ಯ

ಮೂಲಗಳ ಪಾಂಡ್ಯ ತಮ್ಮ ಪತ್ನಿಯಿಂದ ಡಿವೋರ್ಸ್​ ಪಡೆದ್ರೆ ಜೀವನಾಂಶ ನೀಡಬೇಕು. ಆಗ ಹೆಂಡತಿಗೆ ಜೀವನಾಂಶ ಎಂದು 70% ಆಸ್ತಿ ಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ನತಾಶಾ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತಾ?

ನತಾಶಾ ಸರ್ಬಿಯಾ ಮೂಲದ ಮಾಡೆಲ್​​. ಇವರು ಮಾಡೆಲ್​ ಆಗಿ ಆ್ಯಡ್​ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಆಸ್ತಿ ಕೂಡ 20 ಕೋಟಿಗೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಅವರ ತಂದೆ ಸಾವಿರಾರು ಕೋಟಿ ಆಸ್ತಿ ಹೊಂದಿದ್ದು, ಇದರಲ್ಲಿ ನತಾಶಾಗೂ ಪಾಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ನಿಜವಾಗಲ್ಲೂ ನತಾಶಾ ಹಾರ್ದಿಕ್​ ಪಾಂಡ್ಯ ಬಳಿ ಇರೋ ಆಸ್ತಿ ಪಡೆಯುತ್ತಾರಾ? ಅನ್ನೋದು ಚರ್ಚೆ.

ಇದನ್ನೂ ಓದಿ: ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಹಾರ್ದಿಕ್​​ ಪಾಂಡ್ಯ; ಆಗಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Hardik Pandya: ಅಬ್ಬಬ್ಬಾ! ಹಾರ್ದಿಕ್​​​ ಪಾಂಡ್ಯ ಹೆಂಡತಿ ನತಾಶಾ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

https://newsfirstlive.com/wp-content/uploads/2024/05/Hardik-Pandya-Natasha.jpg

Load More