newsfirstkannada.com

700 ಮಹಿಳೆಯರ ದೂರು? ಪ್ರಜ್ವಲ್ ರೇವಣ್ಣ ಕೇಸ್‌ಗೆ NCW ಬಿಗ್ ಟ್ವಿಸ್ಟ್‌; ಹೇಳಿದ್ದೇನು?

Share :

Published May 9, 2024 at 8:35pm

    700 ಮಹಿಳೆಯರು ದೂರು ದಾಖಲಿಸಿದ್ದಾರೆ ಎಂಬ ವರದಿ ಅಸಲಿಯತ್ತು ಏನು?

    ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಸ್ಪಷ್ಟನೆ

    ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲು ಒತ್ತಡ ಹಾಕಿದ್ದು ಯಾರು?

ನವದೆಹಲಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣ ದೇಶಾದ್ಯಂತ ಹಲ್‌ಚಲ್‌ ಸೃಷ್ಟಿಸಿದೆ. ಕರ್ನಾಟಕ ಮಹಿಳಾ ಆಯೋಗ ಕೊಟ್ಟ ವರದಿಯ ಆಧಾರದಲ್ಲಿ ರಾಜ್ಯ ಸರ್ಕಾರ SIT ತನಿಖೆ ಆದೇಶಿಸಿದೆ. ಸರ್ಕಾರದ ನಿರ್ಧಾರದಂತೆ ತನಿಖೆಯ ಮುಂದುವರಿದಿದೆ. ಈ ಬೆಳವಣಿಗೆಯ ಮಧ್ಯೆ ಪೆನ್‌ಡ್ರೈವ್ ಕೇಸ್‌ನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಈ ಮೊದಲು 700 ಮಹಿಳೆಯರು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗ ಇಂದು ತನ್ನ ಸ್ಪಷ್ಟನೆ ನೀಡಿದೆ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 700 ಅಲ್ಲ ಯಾವುದೇ ಒಂದು ದೂರು ಬಂದಿಲ್ಲ ಎಂದಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ NCW ಪೆನ್‌ಡ್ರೈವ್ ಪ್ರಕರಣದಲ್ಲಿ 700 ಮಹಿಳೆಯರು ದೂರು ದಾಖಲಿಸಿದ್ದಾರೆ ಎಂಬ ವರದಿಯಾಗಿದೆ. ಆದ್ರೆ ಯಾವುದೇ ದೂರು ಬಂದಿಲ್ಲ ಎಂಬ ಮಾಹಿತಿ ನೀಡಿದೆ. ಈ ಕುರಿತು ಮಾಧ್ಯಮಗಳು ನೀಡಿರುವ ವರದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ.

ಪೆನ್‌ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌!
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿಲ್ಲ ಅನ್ನೋದರ ಜೊತೆಗೆ ಪೆನ್‌ಡ್ರೈವ್ ಪ್ರಕರಣಕ್ಕೆ ಇಂದು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ ಹಾಕಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಾಪಸ್‌ ಬರೋದಕ್ಕೆ ಟೈಮ್ ಫಿಕ್ಸ್‌ ಆಯ್ತಾ? SIT ಅಧಿಕಾರಿಗಳಿಗೆ ಮಹತ್ವದ ಸುಳಿವು! 

ಪೊಲೀಸರು ಎಂದು ಹೇಳಿಕೊಂಡ ಮೂವರು ನೇರವಾಗಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡುವಂತೆ ಒತ್ತಡ ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸಿವಿಲ್​ ಡ್ರೆಸ್​ನಲ್ಲಿ ಬಂದಿದ್ದ ಮೂವರು ಪ್ರಜ್ವಲ್ ವಿರುದ್ಧ ಸುಳ್ಳು ದೂರು ಕೊಡುವಂತೆ ಒತ್ತಡ ಹಾಕಿದ್ದಾರೆ. ಬೇರೆ, ಬೇರೆ ಫೋನ್​ ನಂಬರ್​ಗಳಿಂದ ಮಹಿಳೆಯರಿಗೆ ನಿರಂತರ ಕರೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ಹಂಚಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

700 ಮಹಿಳೆಯರ ದೂರು? ಪ್ರಜ್ವಲ್ ರೇವಣ್ಣ ಕೇಸ್‌ಗೆ NCW ಬಿಗ್ ಟ್ವಿಸ್ಟ್‌; ಹೇಳಿದ್ದೇನು?

https://newsfirstlive.com/wp-content/uploads/2024/05/Prajwal-Revanna-5.jpg

Load More