newsfirstkannada.com

ಪ್ರಜ್ವಲ್ ರೇವಣ್ಣ ವಾಪಸ್‌ ಬರೋದಕ್ಕೆ ಟೈಮ್ ಫಿಕ್ಸ್‌ ಆಯ್ತಾ? SIT ಅಧಿಕಾರಿಗಳಿಗೆ ಮಹತ್ವದ ಸುಳಿವು!

Share :

Published May 9, 2024 at 2:32pm

Update May 9, 2024 at 2:33pm

    ಇಂದು ಬೆಳಗ್ಗೆಯಿಂದ 10ಕ್ಕೂ ಹೆಚ್ಚು ವಿಮಾನಗಳ ಲಿಸ್ಟ್ ಪರಿಶೀಲಿಸಿದ SIT

    ಮಧ್ಯರಾತ್ರಿವರೆಗೂ ಬೆಂಗಳೂರಿಗೆ 30ಕ್ಕೂ ಅಧಿಕ ಹೆಚ್ಚು ವಿಮಾನಗಳು ಆಗಮನ

    ಎರಡು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿರುವ ಪ್ರಜ್ವಲ್ ರೇವಣ್ಣ

ಚಿಕ್ಕಬಳ್ಳಾಪುರ: ಹಾಸನದಲ್ಲಿ ಪೆನ್‌ಡ್ರೈವ್‌ ಹಾಗೂ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ SIT ತನಿಖೆ ಚುರುಕಾಗಿದೆ. ವಿದೇಶದಲ್ಲಿರುವ ಆರೋಪಿ ಪ್ರಜ್ವಲ್ ರೇವಣ್ಣ ಅವರು ಶೀಘ್ರವೇ ಭಾರತಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ. ಈ ಸುಳಿವಿನ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ SIT ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸುವ ಪ್ರತಿಯೊಂದು ವಿಮಾನ ಹಾಗೂ ಪ್ಯಾಸೆಂಜರ್‌ ಲಿಸ್ಟ್‌ ಅನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಇಂದು ಪೊಲೀಸರು ಹಾಗೂ ಎಸ್‌ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಕೆಐಎಬಿಗೆ ಬರ್ತಿರುವ ವಿಮಾನಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: VIDEO: ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ; HDK ಖಡಕ್ ಸವಾಲು 

ಇಂದು ಮಧ್ಯಾಹ್ನದವರೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಿಂಗಾಪುರ, ದುಬೈ, ದೋಹಾ ಸೇರಿದಂತೆ ಹಲವು ದೇಶಗಳಿಂದ ವಿಮಾನಗಳು ಆಗಮಿಸಿವೆ. ಬೆಳಗ್ಗೆಯಿಂದ 10ಕ್ಕೂ ಹೆಚ್ಚು ವಿಮಾನಗಳ ಲಿಸ್ಟ್ ಪರಿಶೀಲನೆ ಮಾಡಿದ್ದಾರೆ. ಸಂಜೆಯಿಂದ ಮಧ್ಯರಾತ್ರಿವರೆಗೂ ಬೆಂಗಳೂರಿಗೆ ಬರಲಿರುವ 30ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಮಾನಗಳು ಆಗಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೇ 15ಕ್ಕೆ ಬೆಂಗಳೂರಿಗೆ ವಾಪಸ್‌?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ 15ಕ್ಕೆ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಜ್ವಲ್‌ ಆಗಮಿಸಲಿದ್ದಾರೆ ಎನ್ನಲಾಗಿದೆ. ಮೇ 15ರ ಮಧ್ಯರಾತ್ರಿ 12:30ಕ್ಕೆ ಜರ್ಮನಿಯಿಂದ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

ಪೆನ್‌ಡ್ರೈವ್‌ ಪ್ರಕರಣದ ನಂತರ ಪ್ರಜ್ವಲ್ ರೇವಣ್ಣ ಅವರು ಎರಡು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಇದೀಗ ಮತ್ತೆ ಟಿಕೆಟ್ ಬುಕ್ ಆದ ಹಿನ್ನೆಲೆಯಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಎಸ್.ಐ.ಟಿಗೆ ಸುಳಿವು ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ವಿಮಾನ ನಿಲ್ದಾಣಕ್ಕೆ ಬರ್ತಿದ್ದಂತೆ ಎಸ್.ಐ.ಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ವಾಪಸ್‌ ಬರೋದಕ್ಕೆ ಟೈಮ್ ಫಿಕ್ಸ್‌ ಆಯ್ತಾ? SIT ಅಧಿಕಾರಿಗಳಿಗೆ ಮಹತ್ವದ ಸುಳಿವು!

https://newsfirstlive.com/wp-content/uploads/2024/05/prajwal-revanna6-1.jpg

Load More