newsfirstkannada.com

ಹೋಳಿ ಹಬ್ಬದಲ್ಲಿ ಮಿಂದೆದ್ದ ರಶ್ಮಿಕಾ ಮಂದಣ್ಣ; ಜೊತೆಯಲ್ಲಿದ್ದವರು ಯಾರು ಗೊತ್ತಾ?

Share :

Published March 25, 2024 at 4:34pm

Update March 25, 2024 at 4:35pm

    ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರೋ ಕೊಡಗಿನ ಬೆಡಗಿ ರಶ್ಮಿಕಾ

    ನಮ್ಮೆಲ್ಲರಿಗೂ ಕೆಲಸದ ನಡುವೆಯೇ ಹೋಳಿ ಎಂದು ಬರೆದುಕೊಂಡ ಕ್ರಶ್​

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ನಟಿ ಫೋಟೋ

ಒಬ್ಬರಿಗೊಬ್ಬರು ಬಣ್ಣಗಳನ್ನ ಎರಚುತ್ತಾ ಸಂಭ್ರಮಿಸೋ ಹಬ್ಬವೇ ಹೋಳಿ ಹಬ್ಬ. ಈ ಹೋಳಿ ಹಬ್ಬವನ್ನು ಪ್ರತಿಯೊಬ್ಬರು ಖುಷಿಯಾಗಿ ಆಚರಣೆ ಮಾಡುತ್ತಾರೆ. ಇದೀಗ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಕೂಡ ಹೋಳಿ ಹಬ್ಬವನ್ನು ಬಹಳ ಸಡಗರದಿಂದ ಆಚರಣೆ ಮಾಡಿದ್ದಾರೆ.

ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ  ಒಂದಲ್ಲಾ ಒಂದು ವಿಚಾರಕ್ಕೆ​ ಸಖತ್​ ಸುದ್ದಿಯಲ್ಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್​ ಆಗಿರೋ ನಟಿ ಆಗಾಗ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರೋ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.

ಇದನ್ನೂ ಓದಿ: ಪುಷ್ಪಾ ಅಲ್ಲ ಇವ್ರು ಫೈಯರ್‌.. ಸಖತ್‌ ಹಾಟ್​ & ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಬೃಂದಾವನ ಬ್ಯೂಟಿ!

ಹೌದು, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿರೋ ನಟಿ ರಶ್ಮಿಕಾ ಮಂದಣ್ಣ ಬಿಡುವು ಮಾಡಿಕೊಂಡು ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಅದೂ ಕೂಡ ಶೂಟಿಂಗ್ ಸೆಟ್​ನಲ್ಲೇ ಹೋಳಿ ಆಚರಿಸಿದ್ದಾರೆ. ಹೋಳಿ ಹಬ್ಬದಂದು ಕ್ಲಿಕ್ಕಿಸಿಕೊಂಡಿರೋ ಸುಂದರ ಫೋಟೋವೊಂದನ್ನು ನಟಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಐದು ಜನರು ಜೊತೆ ಫೋಟೋ ತೆಗೆಸಿಕೊಂಡು ಶೇರ್ ಮಾಡಿದ್ದಾರೆ. ಆ ಐದು ಜನರು ಕೂಡ ಶೂಟಿಂಗ್ ಸೆಟ್​ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಫೋಟೋವನ್ನು ಶೇರ್​ ಮಾಡಿಕೊಳ್ಳುವುದರ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ‘‘ಈ ಬಾರಿ ನಮ್ಮೆಲ್ಲರಿಗೂ ಕೆಲಸದ ನಡುವೆಯೇ ಹೋಳಿ. ಆದರೆ ನೀವೆಲ್ಲರೂ ಸುರಕ್ಷಿತವಾಗಿ ಹೋಳಿ ಆಡುತ್ತಾ ಎಂಜಾಯ್​ ಮಾಡುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಇಲ್ಲಿಂದ ನಾವು ನಿಮಗೆ ಹೋಳಿ ಹಬ್ಬದ ಶುಭಾಶಯ ತಿಳಿಸುತ್ತೇವೆ’’ ಬರೆದುಕೊಂಡಿದ್ದಾರೆ. ಇನ್ನು, ಈ ಫೋಟೋ ನೋಡಿದ ಅಭಿಮಾನಿಗಳು ಹೋಳಿ ಹಬ್ಬದ ಶುಭಾಯಯಗಳು ಕ್ರಶ್​​ ಅಂತಾ ಕಮೆಂಟ್​ ಮಾಡುವ ಮೂಲಕ ರಶ್ಮಿಕಾಗೆ ವಿಶ್​ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಮತ್ತು ಅನಿಮಲ್ ಸಿನಿಮಾಗಳು ದೊಡ್ಡ ಖ್ಯಾತಿ ತಂದು ಕೊಟ್ಟಿತ್ತು. ಸದ್ಯ ನಟಿ ಪುಷ್ಪ 2, ರೇನ್​ ಬೋ, ದಿ ಗರ್ಲ್​ಫ್ರೆಂಡ್​, ಚಾವ್ವಾ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪುಷ್ಪ 2 ಸಿನಿಮಾ ಆಗಸ್ಟ್​ 15ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೋಳಿ ಹಬ್ಬದಲ್ಲಿ ಮಿಂದೆದ್ದ ರಶ್ಮಿಕಾ ಮಂದಣ್ಣ; ಜೊತೆಯಲ್ಲಿದ್ದವರು ಯಾರು ಗೊತ್ತಾ?

https://newsfirstlive.com/wp-content/uploads/2024/03/rashmika-mandanna-2.jpg

Load More