/newsfirstlive-kannada/media/media_files/2025/11/04/tn_bus_accident-1-2025-11-04-10-21-25.jpg)
ಹೈದರಾಬಾದ್​: ತೆಲುಗು ಭಾಷೆಯ ರಾಜ್ಯಗಳಲ್ಲಿ ಬಸ್​ ಅಪಘಾತಗಳು ಹೆಚ್ಚುತ್ತಿದ್ದು ಕರ್ನೂಲ್ ಬಳಿ ಬಸ್​ಗೆ ಬೆಂಕಿ ಹೊತ್ತಿದ ಬಳಿಕ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಇಂದು ಬೆಳಗಿನ ಜಾವ ತೆಲಂಗಾಣ ಸರ್ಕಾರಿ ಬಸ್​ವೊಂದು ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದ್ದರಿಂದ ಟ್ರಾಲಿ ಮುಗುಚಿ ಬಿದ್ದಿದೆ. 15 ಜನರಿಗೆ ಗಾಯಗಳು ಆಗಿವೆ.
ತೆಲಂಗಾಣದ ಕರೀಂನಗರದ ಜಿಲ್ಲೆಯ ತಿಮ್ಮಪುರ ಮಂಡಲದ ರೇಣುಗುಂಟಾ ಬ್ರಿಡ್ಜ್​ ಬಳಿ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸರ್ಕಾರದ ಟಿಎಸ್​ಆರ್​ಟಿಸಿ ಬಸ್ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಈ ಬಸ್ ಮೆಟ್​ಪಲ್ಲಿ ಡಿಪೋದಿಂದ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೈದರಾಬಾದ್​ನಿಂದ ಕರೀಂನಗರಕ್ಕೆ ತೆರಳುತ್ತಿತ್ತು. ಇದೇ ವೇಳೆ ರೇಣುಗುಂಟಾ ಬ್ರಿಡ್ಜ್​ ಬಳಿ ಟ್ರ್ಯಾಕ್ಟರ್​ಗೆ ಗುದ್ದಿದೆ ಎಂದು ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/11/04/tn_bus_tractor-2025-11-04-10-21-37.jpg)
ಈ ಘಟನೆಯಲ್ಲಿ ಒಟ್ಟು 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಬಸ್​ ಪ್ರಯಾಣಿಕರು ಹಾಗೂ ಟ್ರ್ಯಾಕ್ಟರ್​ ಡ್ರೈವರ್​ ಕೂಡ ಸೇರಿದ್ದಾರೆ. ಟಿಎಸ್​ಆರ್​ಟಿಸಿ ಬಸ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್​ ನೆಲಕ್ಕೆ ಉರುಳಿದ್ದು ಟ್ರಾಲಿಯಲ್ಲಿದ್ದ ಭತ್ತದ ಚೀಲಗಳು ಎಲ್ಲ ಚೆಲ್ಲಾಪಿಲ್ಲಿಯಾಗಿವೆ. ಟ್ರಾಲಿ ಅಂತೂ ಉಲ್ಟಾ ಬಿದ್ದಿದೆ.
ಘಟನಾ ಸ್ಥಳಕ್ಕೆ ಎಲ್​ಎಂಡಿ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಜನರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೆಲುಗು ಭಾಷೆಯ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ 5 ಬಸ್​ ಅಪಘಾತಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಅಲ್ಲಿನ ರಸ್ತೆಗಳು, ಸರ್ಕಾರ, ಹಳೆಯ ಬಸ್​ಗಳು ಸೇರಿ ಇತರೆ ಕಾರಣಗಳು ಇರಬಹುದು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us