/newsfirstlive-kannada/media/media_files/2025/11/04/ap_bus_elur-2025-11-04-09-45-05.jpg)
ಅಮರಾವತಿ: ಕರ್ನೂಲ್ ಬಳಿ ಬಸ್​ ಬೆಂಕಿಯಿಂದ ಧಗಧಗಿಸಿದ ಬಳಿಕ ದೇಶದೆಲ್ಲೆಡೆ ರಸ್ತೆ ಅಪಘಾತಗಳು ಘನಘೋರವಾಗುತ್ತಿವೆ. ನಿನ್ನೆಯಷ್ಟೇ ತೆಲಂಗಾಣದಲ್ಲಿ ಬಸ್​ಗೆ, ಬೆಂಜ್ ಲಾರಿ ಡಿಕ್ಕಿಯಾಗಿ 21 ಜನ ಉಸಿರು ಚೆಲ್ಲಿದ್ದರು. ಇದರ ಬೆನ್ನಲ್ಲೇ ರಾಜಸ್ತಾನ, ಮಧ್ಯಪ್ರದೇಶದಲ್ಲಿ ಅಪಘಾತಗಳು ಸಂಭವಿಸಿದ್ದವು. ರಾತ್ರಿ ಆಂಧ್ರದಲ್ಲೇ ಜಬ್ಬರ್ ಟ್ರಾವೆಲ್ಸ್​ ಬಸ್ ಪಲ್ಟಿಯಾಗಿತ್ತು. ಇದೇ ವೇಳೆ ಆಂಧ್ರದ ಜೂಬ್ಲಿ ನಗರದ ಬಳಿ ಮತ್ತೊಂದು ಖಾಸಗಿ ಬಸ್​ ಪಲ್ಟಿಯಾಗಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ಆಂಧ್ರ ಪ್ರದೇಶದ ಎಲೂರು ಜಿಲ್ಲೆಯಿಂದ ಹೈದರಾಬಾದ್​ಗೆ ಹೋಗುತ್ತಿದ್ದ ಭಾರತಿ ಟ್ರಾವೆಲ್ಸ್​ ಬಸ್​ ಪಲ್ಟಿಯಾಗಿದೆ. ಲಿಂಗಾಪಾಲಂ ಪಂಚಾಯತಿಯ ಜೂಬ್ಲಿ ನಗರದ ಸಮೀಪದಲ್ಲಿ ಬಸ್​ ತಿರುವು ತೆಗೆದುಕೊಳ್ಳುವಾಗ ಪಲ್ಟಿಯಾಗಿದೆ. ಇದರಿಂದ ಇಬ್ಬರು ಪ್ರಯಾಣಿಕರು ಕೊನೆಯುಸಿರೆಳೆದಿದ್ದಾರೆ. ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಬಸ್ ಪಲ್ಟಿ.. ಓರ್ವ ಇನ್ನಿಲ್ಲ, 9 ಜನ ಗಂಭೀರ!
/filters:format(webp)/newsfirstlive-kannada/media/media_files/2025/11/04/ap_bus_elur_1-2025-11-04-09-45-19.jpg)
ಭಾರತಿ ಟ್ರಾವೆಲ್ಸ್​ ಬಸ್​ನಲ್ಲಿ 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಜೂಬ್ಲಿ ನಗರದ ಸಮೀಪದಲ್ಲಿ ಬಸ್​ ತಿರುವು ತೆಗೆದುಕೊಳ್ಳುವಾಗ ಪಲ್ಟಿಯಾಗಿದ್ದರಿಂದ 50 ಜನರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರಲ್ಲಿ 10 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪಲ್ಟಿಯಾಗಿದ್ದ ಬಸ್ ಅನ್ನು ಎರಡು ಕ್ರೇನ್ ಬಳಸಿ ಮೇಲೆತ್ತಲಾಗಿದ್ದು ಬಸ್​ ಮುಂಭಾಗ ನಜ್ಜುಗುಜ್ಜಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us