/newsfirstlive-kannada/media/media_files/2025/09/16/father_son-2025-09-16-22-09-56.jpg)
ಪಾಟ್ನಾ: ಸೋಷಿಯಲ್ ಮೀಡಿಯಾ ಕೆಟ್ಟದ್ದು ಮಾಡುತ್ತೆ, ಒಳ್ಳೆಯದು ಮಾಡುತ್ತದೆ. ಆದರೆ ನಾವು ಅದನ್ನು ಆಯ್ಕೆ ಮಾಡಿಕೊಳ್ಳುವ ರೀತಿ ಉತ್ತಮವಾಗಿರಬೇಕು ಅಷ್ಟೇ. ನಿತ್ಯ ಗಂಟೆಗಟ್ಟಲೇ ರೀಲ್ಸ್ ನೋಡುತ್ತಲೇ ಇರುತ್ತೇವೆ. ಆದರೆ ಅದರಿಂದ ನಾವು ಏನನ್ನು ಉಪಯೋಗ ಪಡೆಯಲ್ಲ. ಆದರೆ ಇಲ್ಲೊಂದು ಪವಾಡ ನೆಡೆದಿದ್ದು 16 ವರ್ಷಗಳ ಹಿಂದೆ ತಪ್ಪಿ ಹೋಗಿದ್ದ ತಂದೆ ಮನೆಗೆ ಬರುವಂತೆ ಮಾಡಿದೆ ಈ ಸೋಷಿಯಲ್ ಮೀಡಿಯಾ. ಅದು ಹೇಗೆ?.
ಬಿಹಾರದ ಚಂಪರಣ್ ಜಿಲ್ಲೆಯ ಮೆಹ್ವಾ ಗ್ರಾಮದ ನಿವಾಸಿ ನಾಗಿನಾ ಸಾಹ್ನಿ ಎನ್ನುವ ವ್ಯಕ್ತಿ 16 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಗಂಗಾಸಾಗರ್ ತೀರ್ಥಯಾತ್ರೆ ಕೈಗೊಂಡಿದ್ದರು. ಆದರೆ ಈ ತೀರ್ಥಯಾತ್ರೆಯಲ್ಲಿ ನಾಗಿನಾ ಸಾಹ್ನಿ ನಾಪತ್ತೆಯಾಗಿದ್ದರು. ಮನೆಗೆ ವಾಪಸ್ ಆಗಿರಲಿಲ್ಲ. ಕುಟುಂಬದವರು ಎಲ್ಲೆಲ್ಲೊ ಹುಡುಕಿದರು ಅವರ ಕುರುಹು ಏನು ಸಿಕ್ಕಿರಲಿಲ್ಲ. ಹೀಗಾಗಿ ಜೀವಂತವಾಗಿಲ್ಲ ಎಂದು ಅವರ ಮನೆಯವರು 16 ವರ್ಷಗಳ ಹಿಂದೆಯೇ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆದರೆ ಇತ್ತೀಚೆಗೆ ನಾಗಿನಾ ಸಾಹ್ನಿಯ ಮಗ ರುಡಾಲ್, ಮೊಬೈಲ್ನಲ್ಲಿ ರೀಲ್ಸ್ ನೋಡುವಾಗ ಅವರಿಗೊಂದು ಗುಜರಾತ್ ಮೂಲದ ವೃದ್ಧಾಶ್ರಮದ ವಿಡಿಯೋ ಸಿಗುತ್ತದೆ. ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿ ನೋಡಲು ತನ್ನಂತೆ ಸೇಮ್ ಟು ಸೇಮ್ ಕಾಣಿಸುತ್ತಾನೆ. ಹಾಗೇ ತನ್ನ ತಂದೆಯ ನೆನಪು ಬರುತ್ತದೆ. ಈ ಹಿಂದೆ ನಾಪತ್ತೆ ಆಗಿದ್ದ ತಂದೆ ಇವರೇ ಎನ್ನುವುದು ರುಡಾಲ್ ಕೂಡಲೇ ಖಚಿತ ಪಡಿಸಿಕೊಳ್ಳುತ್ತಾರೆ. ಹಣದ ಸಮಸ್ಯೆ ಇದ್ದರೂ ತಕ್ಷಣವೇ ರುಡಾಲ್ ಗುಜರಾತ್ಗೆ ಪ್ರಯಾಣ ಬೆಳೆಸುತ್ತಾರೆ.
ಇದನ್ನೂ ಓದಿ: RCB ಆಟಗಾರರ ಡೆಡ್ಲಿ ಬ್ಯಾಟಿಂಗ್.. ರಜತ್, ಸಾಲ್ಟ್, ಟಿಮ್ ಡೇವಿಡ್, ಬೆಥಲ್ ಸಿಡಿಲಬ್ಬರ.!
ಗುಜರಾತ್ಗೆ ತೆರಳಿದ ಮೇಲೆ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಮಗ, ಬರೋಬ್ಬರಿ ಒಂದೂವರೆ ದಶಕದ ನಂತರ ತನ್ನ ತಂದೆಯನ್ನು ಕಂಡು ದುಃಖಿತನಾಗುತ್ತಾನೆ. ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಾನೆ. ನಮ್ಮ ತಂದೆಯನ್ನು ಮತ್ತೆ ನೋಡುತ್ತೇನೆ ಎಂದುಕೊಂಡಿರಲಿಲ್ಲ. ಅಂತ್ಯಕ್ರಿಯೆ ಕೂಡ ಮಾಡಿದ್ದೇವು. ಆದರೆ ದೇವರು ನಮ್ಮ ಕೈ ಬಿಡಲಿಲ್ಲ. ನಮ್ಮ ತಂದೆಯನ್ನ ನಮಗೆ ವಾಪಸ್ ಕೊಟ್ಟಿದ್ದಾನೆ ಎಂದು ಮಗ ಕಣ್ಣೀರಿಟ್ಟಿದ್ದ. ಇದನ್ನೆಲ್ಲ ಕಂಡು ಅಲ್ಲಿದ್ದವರು ಅಚ್ಚರಿಯಾಗುತ್ತಾರೆ. ಇದು ದೇವರ ಪವಾಡ ಎಂದು ಹೇಳಿದ್ದಾರೆ.
ತಂದೆ ನಾಗಿನಾ ಸಾಹ್ನಿರನ್ನು ಕರೆದುಕೊಂಡು ಮಗ ರುಡಾಲ್, ಊಟ್ಟೂರು ತಲುಪಿದ್ದಾರೆ. 16 ವರ್ಷಗಳ ಬಳಿಕ ವಾಪಸ್ ಬಂದ ಅವರನ್ನು ನೋಡಲು ಕುಟುಂಬಸ್ಥರು, ನೆಂಟರು ಮನೆಗೆ ಬರುತ್ತಿದ್ದಾರೆ. ಗ್ರಾಮಸ್ಥರು ಕೂಡ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಅವರೆಲ್ಲ ಸಂತಸಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ