/newsfirstlive-kannada/media/post_attachments/wp-content/uploads/2025/07/VOTER_ID_1.jpg)
ಪಾಟ್ನಾ: ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಹಾಗೂ 11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ನವೆಂಬರ್ 14 ರಂದು ಫಲಿತಾಂಶ ಹೊರ ಬೀಳಲಿದೆ ಎಂದು ತಿಳಿಸಲಾಗಿದೆ.
ಮತದಾರರ ಪಟ್ಟಿಯ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (ಎಸ್​​ಐಆರ್​) ನಂತರ ಜನರು ಮತದಾನ ಮಾಡಲಿದ್ದಾರೆ. ಈಗಾಗಲೇ ಬಿಹಾರದಲ್ಲಿ ಎಸ್​​ಐಆರ್ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ದೇಶದ ಬೇರೆ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಶುದ್ಧಿಕರಣದ ಹಾದಿ ತೋರಿಸುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಹೇಳಿದ್ದಾರೆ.
ಈ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗದ 17 ಉಪಕ್ರಮಗಳು ದೇಶಾದ್ಯಂತ ಜಾರಿಗೆ ಬರಲಿವೆ.
- ಬೂತ್ ಮಟ್ಟದ ಏಜೆಂಟ್​ಗಳಿಗೆ ತರಬೇತಿ: ಆರ್​ಪಿ ಕಾಯ್ದೆ 1950ರ ಅಡಿಯಲ್ಲಿ ಮೇಲ್ಮನವಿ, ನಿಬಂಧನೆಗಳು ಸೇರಿದಂತೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಬೆಂಬಲಿಸುವ ವಿವಿಧ ಅಂಶಗಳಲ್ಲಿ ಬೂತ್ ಮಟ್ಟದ ಏಜೆಂಟ್‌ಗಳಿಗೆ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳಿಂದ ನೇಮಕಗೊಂಡವರಿಂದ (ಬಿಎಲ್‌ಎ) ತರಬೇತಿ ನೀಡಲಾಗಿದೆ.
- ಬೂತ್​ ಮಟ್ಟದ ಅಧಿಕಾರಿಗಳಿಗೆ ತರಬೇತಿ: ಬಿಹಾರ ಸೇರಿದಂತೆ ದೇಶದ್ಯಾಂತ 7 ಸಾವಿರಕ್ಕೂ ಹೆಚ್ಚು ಬಿಎಲ್​ಒಗಳು ಮತ್ತು ಬಿಎಲ್​ಒ ಮೇಲ್ವಿಚಾರಕರಿಗೆ ದೆಹಲಿಯ ಐಐಐಡಿಇಎಂನಲ್ಲಿ ತರಬೇತಿ ನೀಡಲಾಗಿದೆ.
- ಪೊಲೀಸರಿಗೆ ತರಬೇತಿ: ಚುನಾವಣೆಯ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಸಿದ್ಧತೆಯನ್ನು ಬಲಪಡಿಸಲು ಬಿಹಾರದ ಪೊಲೀಸರಿಗೆ ವಿಶೇಷ ತರಬೇತಿ ನಡೆಸಲಾಗಿದೆ.
- ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ: ಯಾವುದೇ ಅರ್ಹ ಮತದಾರರನ್ನ ಹೊರಗಿಡದಂತೆ, ಅನರ್ಹ ವ್ಯಕ್ತಿಗೆ ಅವಕಾಶ ಕೊಟ್ಟಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಿಹಾರದಲ್ಲಿ ವೋಟರ್​ ಲಿಸ್ಟ್​ ಶುದ್ಧೀಕರಣ ಮಾಡಲಾಗಿದೆ. ಇದೇ ನಿಯಮ ಇಡೀ ಭಾರತದಲ್ಲಿ ಜಾರಿ ಆಗುತ್ತದೆ.
- ಅಧಿಕಾರಿಗಳಿಗ ಹೆಚ್ಚಿದ ಸಂಭಾವನೆ: ಬಿಎಲ್‌ಒಗಳ ಸಂಭಾವನೆ ಡಬಲ್ ಮಾಡಲಾಗಿದೆ. ಬಿಎಲ್‌ಒ ಮೇಲ್ವಿಚಾರಕರು, ಮತದಾನ/ಎಣಿಕೆ ಸಿಬ್ಬಂದಿ, ಸಿಎಪಿಎಫ್, ಮೇಲ್ವಿಚಾರಣಾ ತಂಡಗಳು ಹಾಗೂ ಸೂಕ್ಷ್ಮ ವೀಕ್ಷಕರ ಸಂಬಳ ಹೆಚ್ಚು ಮಾಡಲಾಗಿದೆ. ಮೊದಲ ಬಾರಿಗೆ ಇಆರ್‌ಒಗಳು ಮತ್ತು ಎಇಆರ್‌ಒಗಳಿಗೆ ಗೌರವಧನ ನೀಡಲಾಗುತ್ತಿದೆ.
- EPIC ಉಚಿತ ವಿತರಣೆ: ಮತದಾರರ ಪಟ್ಟಿಯ ನವೀಕರಣದ 15 ದಿನಗಳಲ್ಲಿ EPIC ವಿತರಣೆ ಖಚಿತಪಡಿಸಿಕೊಳ್ಳಲು, ಹೊಸ ಎಸ್​ಒಪಿ ಜಾರಿ ಆಗಿದೆ. ವಿತರಣೆಯ ಪ್ರತಿ ಹಂತದಿಂದ ಆರಂಭಿಸಿ, ಎಸ್‌ಎಂಎಸ್ ಅಧಿಸೂಚನೆವರೆಗೆ EPICನ ವಿತರಣೆ ಉಚಿತ.
- ಬಿಎಲ್‌ಒಗಳಿಗೆ ಫೋಟೋ ಗುರುತಿನ ಚೀಟಿಗಳು: ಕ್ಷೇತ್ರ ಮಟ್ಟದ ಪಾರದರ್ಶಕತೆ ಹಾಗೂ ಸಾರ್ವಜನಿಕ ನಂಬಿಕೆ ಉಳಿಸಲು, ಬಿಎಲ್‌ಒಗಳಿಗೆ ಪ್ರಮಾಣಿತ ಗುರುತಿನ ಚೀಟಿಗಳನ್ನ ವಿತರಿಸಲಾಗಿದೆ.
- ಮತದಾನ ಕೇಂದ್ರಗಳಲ್ಲಿ ಮೊಬೈಲ್ ಠೇವಣಿ (Deposit): ಮತದಾರರು ಮೊಬೈಲ್ ಫೋನ್‌ಗಳನ್ನು ಠೇವಣಿ ಮಾಡಲು ಮತಗಟ್ಟೆಗಳ ಹೊರಗೆ ಕೌಂಟರ್‌ಗಳನ್ನು ಸ್ಥಾಪನೆ ಮಾಡಲಾಗಿದೆ.
- ಸ್ಪಷ್ಟ ಮತದಾರರ ಮಾಹಿತಿ ಸ್ಲಿಪ್ (ವಿಐಎಸ್​): ಮತದಾರರ ಪರಿಶೀಲನೆಯನ್ನು ಸುಲಭಗೊಳಿಸಲು ಸರಣಿ ಮತ್ತು ಭಾಗ ಸಂಖ್ಯೆಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದೆ. ಇದು ಎಲ್ಲಾ ಚುನಾವಣೆಗಳಿಗೂ ಅನ್ವಯ.
- ಒನ್-ಸ್ಟಾಪ್ ಡಿಜಿಟಲ್ ಪ್ಲಾಟ್‌ಫಾರ್ಮ್: ECINet ಅಪ್ಲಿಕೇಶನ್‌ನಲ್ಲಿ ನೈಜ-ಸಮಯದ ಮತದಾರರ ಮತದಾನದ ನವೀಕರಣಗಳು ಸೇರಿದಂತೆ ಹಲವು ಪ್ರಮುಖ ಸೇವೆ ಪರಿಚಯ. ಅಂದಾಜು ಮತದಾನದ ಪ್ರವೃತ್ತಿಗಳ ನವೀಕರಣದಲ್ಲಿನ ಸಮಯದ ವಿಳಂಬವನ್ನು ಕಡಿಮೆ ಮಾಡಲು, ಮತದಾನದ ದಿನದಂದು ಎರಡು ಗಂಟೆಗೆ ಒಮ್ಮೆ ECINET ಅಪ್ಲಿಕೇಶನ್‌ನಲ್ಲಿ ಮತದಾನದ ಡೇಟಾವನ್ನು ಅಪ್‌ಲೋಡ್ ಮಾಡಲು ಕೇಂದ್ರ ಚುನಾವಣಾ ಆಯೋಗ ಸಿದ್ಧವಾಗಿದೆ.
- ಮತದಾನ ಕೇಂದ್ರದ ಮಿತಿ 1,200: ಎತ್ತರದ ವಸತಿ ಸಂಕೀರ್ಣಗಳು ಹಾಗೂ ಸಮಾಜದಲ್ಲಿ ಜನದಟ್ಟಣೆ ಕಡಿಮೆಯಾಗುವುದು. ಕಡಿಮೆ ಸರತಿ ಸಾಲುಗಳು ಮತ್ತು ಹೆಚ್ಚುವರಿ ಬೂತ್‌ಗಳನ್ನು ಖಚಿತಪಡಿಸುವುದು. ಕೇವಲ 1,200 ಮತದಾರರಿಗೆ ಮಾತ್ರ ಮತದಾನ ಮಾಡುವ ಅವಕಾಶ ಇದೆ.
- ಮತಗಟ್ಟೆಯಿಂದ 100 ಮೀಟರ್ ಹೊರಗೆ ಅಭ್ಯರ್ಥಿಗಳ ಬೂತ್‌ಗಳಿಗೆ ಅವಕಾಶ: ಮತದಾರರಿಗೆ ಅನಧಿಕೃತ ಗುರುತಿನ ಚೀಟಿಗಳನ್ನು ನೀಡಲು, ಮತದಾನದ ದಿನದಂದು ಅಭ್ಯರ್ಥಿಗಳು ಯಾವುದೇ ಮತಗಟ್ಟೆಯಿಂದ 100 ಮೀಟರ್‌ಗಳ ಹೊರಗೆ ಬೂತ್‌ಗಳನ್ನು ಸ್ಥಾಪಿಸಲು ಅವಕಾಶ.
- ಮತಗಟ್ಟೆಗಳಲ್ಲಿ ಶೇ.100 ರಷ್ಟು ವೆಬ್‌ಕಾಸ್ಟಿಂಗ್: ಮತದಾನ ಪ್ರಕ್ರಿಯೆಯ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮೇಲ್ವಿಚಾರಣೆ ಇರುತ್ತದೆ.
- ಇವಿಎಂ ಮತಪತ್ರದ ಮಾರ್ಗಸೂಚಿಗಳ ಪರಿಷ್ಕರಣೆ: ಇವಿಎಂ ಮತಪತ್ರಗಳನ್ನು ಹೆಚ್ಚು ಓದಲು ಸಾಧ್ಯವಾಗುವಂತೆ ಮಾಡಲು, ಚುನಾವಣಾ ಆಯೋಗ ಮಾರ್ಗಸೂಚಿ ಪರಿಷ್ಕರಿಸಿದೆ. ಇವಿಎಂಗಳು ಅಭ್ಯರ್ಥಿಗಳ ಫೋಟೋ ಹೊಂದಿರಬೇಕು ಎಂಬ ನಿಯಮ ಜಾರಿಗೆ ತಂದಿದೆ.
- ಕಡ್ಡಾಯ ವಿವಿಪಿಎಟಿ ಎಣಿಕೆ: ಫಾರ್ಮ್ 17 ಸಿ ಮತ್ತು ಇವಿಎಂ ಡೇಟಾ ನಡುವಿನ ಹೊಂದಾಣಿಕೆ ಪ್ರತಿಯೊಂದು ಪ್ರಕರಣ ಪರಿಶೀಲಿಸಲು ವಿವಿಪಿಎಟಿ ಸ್ಲಿಪ್ ಎಣಿಕೆ ಜಾರಿ ಮಾಡಲಾಗಿದೆ.
- ಅಂಚೆ ಮತಪತ್ರಗಳ ಎಣಿಕೆ: ಇವಿಎಂ/ವಿವಿಪಿಎಟಿಗಳ ಅಂತಿಮ (ಎರಡನೇ ಕೊನೆ) ಸುತ್ತಿನ ಎಣಿಕೆಯನ್ನು, ಅಂಚೆ ಮತಪತ್ರಗಳ ಎಣಿಕೆ ಬಳಿಕ ಕೈಗೊಳ್ಳಲಾಗುತ್ತದೆ.
- ಡಿಜಿಟಲ್ ಇಂಡೇಕ್ಸ್​ ಕಾರ್ಡ್‌ಗಳು ಮತ್ತು ವರದಿಗಳು: ಎಲ್ಲಾ ಪಾಲುದಾರರಿಗೆ ಕ್ಷೇತ್ರ ಮಟ್ಟದಲ್ಲಿ ಚುನಾವಣೆಗೆ ಸಂಬಂಧಿಸಿದ ದತ್ತಾಂಶದ ಪ್ರವೇಶವನ್ನು ಉತ್ತೇಜಿಸಲು ತಂತ್ರಜ್ಞಾನ-ಚಾಲಿತ ವ್ಯವಸ್ಥೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ