Advertisment

ಸಮೀಕ್ಷೆ ಬಗ್ಗೆ ಬಿಗ್​ ಅಪ್​ಡೇಟ್​.. ಶಿಕ್ಷಕರು, ಶಾಲಾ ಮಕ್ಕಳು ಇದನ್ನೂ ಓದಲೇಬೇಕು

ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಅಕ್ಟೋಬರ್​ 4 ರಿಂದ ಸಮೀಕ್ಷೆ ಆರಂಭವಾಗಿದ್ರೆ, ರಾಜ್ಯದ ಇತರೆ ಭಾಗಗಳಲ್ಲಿ ಸೆಪ್ಟೆಂಬರ್​ 09 ರಿಂದಲೇ ಪ್ರಾರಂಭವಾಗಿದೆ. ಆದರೆ ದಸರಾ ರಜೆ ನಂತರ ಈಗ ಶಾಲೆಗಳು ಶುರುವಾಗುವುದರಿಂದ ಶಾಲೆಗಳ ವೇಳಾಪಟ್ಟಿಯನ್ನು..

author-image
Bhimappa
SCHOOL (6)
Advertisment

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯ ಈ ಸಂಬಂಧ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಬದಲಾವಣೆ ಮಾಡಿದೆ. 

Advertisment

ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಡಿಜಿಟಲ್​ ವಿಧಾನದಲ್ಲಿ ಕೈಗೊಳ್ಳುವುದು, ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಕೈಗೊಳ್ಳಲಾಗುವುದು. ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿಕೊಂಡು ಸಮೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳು, ಶಿಕ್ಷಕರು, ಇತರೆ ಸಿಬ್ಬಂದಿ ವರ್ಗಕ್ಕೆ ಸರ್ಕಾರ ಆದೇಶ ನೀಡಿದೆ. ಆದೇಶದಂತೆ ಸಮೀಕ್ಷೆ ನಡೆಸಲಾಗುತ್ತಿದೆ. 

ಇದನ್ನೂ ಓದಿ: ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಬೇಕು.. ಸಿದ್ದರಾಮಯ್ಯ ತಲೆಗೆ ಕಟ್ಟೋಕೆ ಸಾಧ್ಯವಿಲ್ಲ- MB ಪಾಟೀಲ್

DK_SHIVAKUMAR

ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಅಕ್ಟೋಬರ್​ 4 ರಿಂದ ಸಮೀಕ್ಷೆ ಆರಂಭವಾಗಿದ್ರೆ, ರಾಜ್ಯದ ಇತರೆ ಭಾಗಗಳಲ್ಲಿ ಸೆಪ್ಟೆಂಬರ್​ 09 ರಿಂದಲೇ ಪ್ರಾರಂಭವಾಗಿದೆ. ಆದರೆ ದಸರಾ ರಜೆ ನಂತರ ಈಗ ಶಾಲೆಗಳು ಶುರುವಾಗುವುದರಿಂದ ಶಾಲೆಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಧ್ಯವಾರ್ಷಿಕ ರಜಾ ದಿನಗಳ ನಂತರ ತರಗತಿಗಳು ಈ ಸಮೀಕ್ಷೆಯಿಂದ ಕುಂಠಿತವಾಗಬಾರದು ಎನ್ನುವ ಕಾರಣಕ್ಕೆ ಶಾಲೆಗಳ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ. 

Advertisment

ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿ; ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಅಕ್ಟೋಬರ್​ 8 ರಿಂದ ಅಕ್ಟೋಬರ್​ 24ರವರೆಗೆ ಶಾಲೆಗಳ ತರಗತಿಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ನಡೆಸಲಾಗುತ್ತದೆ. ಮಧ್ಯಾಹ್ನದ ನಂತರ ಶಿಕ್ಷಕರು ಸಮೀಕ್ಷೆಗೆ ತೆರಳಬೇಕು. ಅಕ್ಟೋಬರ್​ 24ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು.

ರಾಜ್ಯದ ಇತರೆ ಭಾಗಗಳಲ್ಲಿ; ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಅಕ್ಟೋಬರ್​ 8 ರಿಂದ ಅಕ್ಟೋಬರ್​ 12 ರವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ನಡೆಸಲಾಗುತ್ತದೆ. ಮಧ್ಯಾಹ್ನದ ನಂತರ ಶಿಕ್ಷಕರು ಸಮೀಕ್ಷೆಗೆ ತೆರಳಬೇಕು. ಅಕ್ಟೋಬರ್​ 12ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು.
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Backward classes socio and educational survey Caste census
Advertisment
Advertisment
Advertisment