/newsfirstlive-kannada/media/media_files/2025/10/31/mumbai_man-2025-10-31-07-48-19.jpg)
ಮುಂಬೈ: 20 ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದರಂತೆ ಪುಣೆ ಮೂಲದ ಆರೋಪಿಯು ಪೊಲೀಸರ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ಡಾಕುಮೆಂಟರಿ ನಿರ್ಮಾಪಕ ರೋಹಿತ್ ಆರ್ಯ (45) ಗುಂಡೇಟಿಗೆ ಬಲಿ. ವೆಬ್​ ಸೀರಿಸ್ ಮಾಡುವುದಾಗಿ ಹೇಳಿ 12 ರಿಂದ 15 ವರ್ಷದ 17 ಶಾಲಾ ಮಕ್ಕಳನ್ನು, 75 ವರ್ಷದ ವೃದ್ಧೆ ಹಾಗೂ ಇಬ್ಬರೂ ಸಿಬ್ಬಂದಿಗಳನ್ನು ಪೊವಾಯಿಯ ರೆಕಾರ್ಡಿಂಗ್​ ಸ್ಟುಡಿಯೋದಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದನು. ಇದರಿಂದ ಇಡೀ ಮುಂಬೈ ನಗರವೇ ಬೆಚ್ಚಿ ಬಿದ್ದಿತ್ತು. ಕ್ಷಣಾರ್ಧದಲ್ಲೇ ಈ ಸುದ್ದಿ ಎಲ್ಲೆಡೆ ಹಬ್ಬಿತ್ತು.
/filters:format(webp)/newsfirstlive-kannada/media/media_files/2025/10/30/mumbai-child-hostage-2025-10-30-16-43-47.jpg)
ಮಕ್ಕಳನ್ನು ರಕ್ಷಣೆ ಮಾಡುವಾಗ ಪೊಲೀಸ್ ಕಮೊಂಡೋ ತಂಡ ರೆಕಾರ್ಡಿಂಗ್​ ಸ್ಟುಡಿಯೋವನ್ನು ಪ್ರವೇಶಿಸಿತ್ತು. ಈ ವೇಳೆ ಆರೋಪಿಯು ಏರ್​ಗನ್​ನಿಂದ ಗುಂಡು ಹಾರಿಸಿದ್ದನು. ಹೀಗಾಗಿ ಮಕ್ಕಳ ರಕ್ಷಣೆ ಹಾಗೂ ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿ ರೋಹಿತ್ ಆರ್ಯ ಮೇಲೆ ಫೈರಿಂಗ್ ಮಾಡಿದ್ದರು. ಗುಂಡುಗಳು ಅವನ ಎದೆ ಭಾಗಕ್ಕೆ ತಗುಲಿದ್ದವು ಎನ್ನಲಾಗಿದೆ. ತಕ್ಷಣ ಆರೋಪಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಆದರೂ ಚಿಕಿತ್ಸೆ ಫಲಿಸದೇ ಜೀವ ಹೋಗಿದೆ ಎಂದು ಹೇಳಲಾಗಿದೆ.
ಆರೋಪಿಯು ಮೊದಲು 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದನು. ಬಳಿಕ 80 ವಿದ್ಯಾರ್ಥಿಗಳನ್ನು ಹೊರಗೆ ಹೋಗಲು ಬಿಟ್ಟಿದ್ದಾನೆ. ಬಳಿಕ ಸಿಬ್ಬಂದಿ ಸೇರಿ 17 ರಿಂದ 20 ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿದ್ದ. ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದನು. ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆ ಆಲರ್ಟ್ ಆದ ಪೊಲೀಸರು ಱಪಿಡ್ ರೆಸ್ಪಾನ್ಸ್ ಟೀಮ್ ಅನ್ನು ನಿಯೋಜಿಸಿದ್ದರು. ಈ ವೇಳೆ ಕಾರ್ಯಾಚರಣೆ ವೇಳೆ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿತ್ತು. ಎಲ್ಲ ಮಕ್ಕಳು, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


