/newsfirstlive-kannada/media/media_files/2025/10/31/ind_vs_aus-2-2025-10-31-07-07-08.jpg)
ಐಸಿಸಿ ಮಹಿಳಾ ವಿಶ್ವಕಪ್​ ಟೂರ್ನಿಯಲ್ಲಿ ಹರ್ಮನ್​ಪ್ರೀತ್ ಕೌರ್​ ನೇತೃತ್ವದ ಟೀಮ್ ಇಂಡಿಯಾ, ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಜೆಮಿಮಾ ರೋಡ್ರಿಗಸ್ ಸಿಡಿಲಬ್ಬರದ ಬ್ಯಾಟಿಂಗ್​ ಆಸಿಸ್​ ಕನಸನ್ನು ನುಚ್ಚುನೂರು ಮಾಡಿತು. ಈ ಮೂಲಕ 3ನೇ ಬಾರಿಗೆ ವಿಶ್ವಕಪ್​ ಫೈನಲ್​ಗೆ ಭಾರತ ತಂಡ ಎಂಟ್ರಿಕೊಟ್ಟಿದೆ.
ನವಿ ಮುಂಬೈಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ ಅಲಿಸಾ ಹೀಲಿ ಹಾಗೂ ಫೋಬೆ ಲಿಚ್‌ಫೀಲ್ಡ್ ಉತ್ತಮ ಆರಂಭವೇನು ಪಡೆಯಲಿಲ್ಲ. ನಾಯಕಿ ಹೀಲಿ ಕೇವಲ 5 ರನ್​ಗೆ ಹೊರ ನಡೆದರು. ಇವರ ಬಳಿಕ ಕ್ರೀಸ್​ಗೆ ಎಲ್ಲೀಸ್ ಪೆರ್ರಿ ಆಗಮಿಸಿದರು.
ಓಪನರ್ ಫೋಬೆ ಲಿಚ್‌ಫೀಲ್ಡ್ ಹಾಗೂ ಎಲ್ಲೀಸ್ ಪೆರ್ರಿ ಜೋಡಿಯಾಟ ಭಾರತಕ್ಕೆ ಮಾರಕವಾಯಿತು. ಏಕೆಂದರೆ ಫೋಬೆ ಲಿಚ್‌ಫೀಲ್ಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಸೆಂಚುರಿ ಸಿಡಿಸಿದರೆ, ಇತ್ತ ಪೆರ್ರಿ 77 ರನ್​ಗಳನ್ನು ಗಳಿಸಿದರು. ಇವರ ಜೊತೆಯಾಟವನ್ನು ಅಮನ್​ಜೋತ್ ಕೋರ್ ಮುರಿದರು. ಉಳಿದಂತೆ ಬೆತ್​ ಮೂನಿ 24, ಆಶ್ಲೀ ಗಾರ್ಡ್ನರ್ 63, ಕಿಮ್​ ಗ್ರತ್ 17, ಮೆಕ್​ಗ್ರತ್ 12, ಅಲಾನ್ ಕಿಂಗ್ 4, ಅನ್ನಾಬೆಲ್ ಸದರ್ಲ್ಯಾಂಡ್ 3 ರನ್​. ಈ ಎಲ್ಲರ ರನ್​ಗಳ ನೆರವಿನಿಂದ ಆಸಿಸ್​ 49.5 ಓವರ್​ಗಳಲ್ಲಿ 338 ರನ್​ಗಳ ಬೃಹತ್​ ಟಾರ್ಗೆಟ್​ ಅನ್ನು ನೀಡಿತು.
ಈ ಟಾರ್ಗೆಟ್​ನಿಂದ ಟೀಮ್ ಇಂಡಿಯಾ ಜಯ ಸಾಧಿಸುವುದು ಅನುಮಾನವೇ ಎಂದು ಮೊದಲು ಊಹಿಸಲಾಗಿತ್ತು. ಏಕೆಂದರೆ ಆರಂಭದಲ್ಲೇ ಶಫಾಲಿ 10 ರನ್​ಗೆ ಬ್ಯಾಟಿಂಗ್ ಮುಗಿಸಿದರು. ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಕೂಡ ಕೇವಲ 24 ರನ್​ ಗಳಿಸಿ ಕೀಪರ್ ಕ್ಯಾಚ್​ ಔಟ್ ಆದರು. ಆದರೆ ಶಫಾಲಿ ಬಳಿಕ ಕ್ರೀಸ್​ಗೆ ಬಂದಿದ್ದ ಜೆಮಿಮಾ ರೋಡ್ರಿಗಸ್, ನಾಯಕಿ ಹರ್ಮನ್​ಪ್ರೀತ್​ ಕೌರ್​ ಜೊತೆ ಸೇರಿ ಬಹುದೊಡ್ಡ ಇನ್ನಿಂಗ್ಸ್​ ಕಟ್ಟಿದರು.
/filters:format(webp)/newsfirstlive-kannada/media/media_files/2025/10/31/ind_vs_aus_1-1-2025-10-31-07-07-18.jpg)
ಜೆಮಿಮಾ ರೋಡ್ರಿಗಸ್ ಪಂದ್ಯದಲ್ಲಿ ಅದ್ಭುತವಾದ ಫಾರ್ಮ್​ ತೋರಿಸಿ ವರ್ಲ್ಡ್​ಕಪ್​ನಲ್ಲಿ ತಮ್ಮ ಮೊದಲ ಸೆಂಚುರಿ ಸಿಡಿಸಿದರು. ಟೀಮ್ ಇಂಡಿಯಾವನ್ನು ಗೆಲುವಿನಯೆಡೆಗೆ ತೆಗೆದುಕೊಂಡು ಹೋದರು. ಹರ್ಮನ್ ಪ್ರೀತ್ ಕೌರ್ 10 ಬೌಂಡರಿ, 2 ಸಿಕ್ಸರ್​ಗಳಿಂದ 89 ರನ್​ ಸಿಡಿಸಿದರು. ನಾಯಕಿ 89 ರನ್​ಗೆ ಔಟ್ ಆಗಿದ್ದು ಆಘಾತ ತರಿಸಿದರೂ ದೀಪ್ತಿ ಶರ್ಮಾ 24, ರಿಚಾ ಘೋಷ್ 26, ಅಮನ್‌ಜೋತ್ ಕೌರ್ 15 ರನ್​ಗಳ ಕೊಡುಗೆ ನೀಡಿದರು.
ಇನ್ನು ಕೊನೆವರೆಗೆ ಕ್ರೀಸ್​ ಕಾಯ್ದುಕೊಂಡಿದ್ದ ಜೆಮಿಯಾ 134 ಎಸೆತಗಳನ್ನು ಎದುರಿಸಿ 14 ಬೌಂಡರಿಗಳಿಂದ ಅಜೇಯ 127 ರನ್​ಗಳನ್ನು ಬಾರಿಸಿ ಟೀಮ್ ಇಂಡಿಯಾಗೆ ಐತಿಹಾಸಿಕ ಜಯ ತಂದುಕೊಟ್ಟರು. ಭಾರತ ತಂಡ 5 ವಿಕೆಟ್​ಗೆ 341 ರನ್​ಗಳ ಗಳಿಸೋ ಮೂಲಕ ಫೈನಲ್​ಗೆ ಎಂಟ್ರಿಯಾಗಿದೆ. ಈ ಬಾರಿ ವರ್ಲ್ಡ್​ಕಪ್ ಗೆಲ್ಲುವ ಫೆವರಿಟ್ ಟೀಮ್ ಎನಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


