Advertisment

ವರ್ಲ್ಡ್​​ಕಪ್​ ಆಡಲ್ವಾ.. ಪ್ರತಿಷ್ಠಿತ ಬಿಗ್ ​ಬ್ಯಾಷ್ ಲೀಗ್​ ಆಡೋಕೆ OK ಅಂತಾರ ಕಿಂಗ್​ ಕೊಹ್ಲಿ?

ಟೀಮ್​ ಇಂಡಿಯಾ ಪರ ಆಡ್ತಿರೋ ಆಟಗಾರರಿಗೆ ವಿದೇಶಿ ಲೀಗ್​ಗಳನ್ನ ಆಡಲು ಅವಕಾಶವಿಲ್ಲ. ನಿವೃತ್ತಿ ಘೋಷಿಸಿದ ಬಳಿಕವಷ್ಟೇ ವಿದೇಶಿ ಲೀಗ್​ ಆಡಬಹುದು ಅನ್ನೋದು ಬಿಸಿಸಿಐನ ನಿಯಮ. ಈಗ ಬಿಗ್​​ಬ್ಯಾಷ್​ ಲೀಗ್​ ಆಡಬೇಕಂದ್ರೆ, ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಬೇಕಿದೆ.

author-image
Bhimappa
VIRAT_KOHLI (1)
Advertisment

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಅಂತ್ಯ ಕಂಡರೂ ಕೊಹ್ಲಿಯ ನಿವೃತ್ತಿ ಸುದ್ದಿ ಮಾತ್ರ ಸೈಲೆಂಟ್​ ಆಗಿಲ್ಲ. ಕೊಹ್ಲಿ ರಿಟೈರ್​​ಮೆಂಟ್​ ರೂಮರ್ಸ್​ಗೆ ಇದೀಗ ಕ್ರಿಕೆಟ್​ ಆಸ್ಟ್ರೇಲಿಯಾ ಮುಖ್ಯಸ್ಥ ಟ್ವಿಸ್ಟ್​ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಬಿಗ್​ಬ್ಯಾಷ್​​ನಲ್ಲಿ ಕೊಹ್ಲಿ ಆಡಬಹುದು ಅನ್ನೋ ಹೇಳಿಕೆ ನೀಡಿ ಫ್ಯಾನ್ಸ್​ ತಲೆಗೆ ಹುಳ ಬಿಟ್ಟಿದ್ದಾರೆ. ಹಾಗಾದ್ರೆ, ಇಂಡಿಯನ್​ ಕ್ರಿಕೆಟ್​ಗೆ ಕೊಹ್ಲಿ ಗುಡ್​ ಬೈ ಹೇಳ್ತಾರಾ?. 

Advertisment

ಆಸ್ಟ್ರೇಲಿಯಾ, ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ ವಿರಾಟ್​ ಕೊಹ್ಲಿ ಪಾಲಿನ ಫೇವರಿಟ್​ ಎದುರಾಳಿ. ಆಸ್ಟ್ರೇಲಿಯಾ ಅನ್ನೋ ಹೆಸರು ಕೇಳಿದ್ರೆ, ವಿರಾಟ್ ಕೊಹ್ಲಿ ಕೆರಳಿ ಕೆಂಡವಾಗ್ತಾರೆ. ಕಾಂಗರೂಗಳ ವಿರುದ್ಧ ಅವರದ್ದೇ ಗ್ರೌಂಡ್​​ಗಳಲ್ಲಿ ವಿರಾಟ್, ವೀರಾವೇಶದ ಪ್ರದರ್ಶನ ನೀಡಿದ್ದಾರೆ. ಮೊದಲ ಪ್ರವಾಸದಿಂದ ಹಿಡಿದು ಮೊನ್ನೆ ಅಂತ್ಯವಾಗಿರೋ ಕೊನೆಯ ಪ್ರವಾಸದವರೆಗೂ ಸಾಕಷ್ಟು ಬಾರಿ ಕಾಂಗರೂಗಳನ್ನ ಕಂಗಾಲ್ ಮಾಡಿದ್ದಾರೆ. ಅದೇನೋ ಗೊತ್ತಿಲ್ಲ, ಕಾಂಗರೂ ನಾಡು ಅಂದ್ರೆ ಈ ವಿರಾಟ್​ಗೆ ಸಿಕ್ಕಾಪಟ್ಟೆ ಫೇವರಿಟ್​​. ಅಲ್ಲಿನ ಅಭಿಮಾನಿಗಳಿಗೂ ಅಷ್ಟೇ ತಮ್ಮ ದೇಶದ ಆಟಗಾರರಿಗಿಂತ ಕೊಹ್ಲಿಯೇ ಕಿಂಗ್​.

KOHLI_ROHIT_AUS

ಫ್ಯಾನ್ಸ್​ ತಲೆಗೆ ಹುಳ ಬಿಟ್ಟ ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯಸ್ಥ.!

ಕಳೆದ 2 ವಾರಗಳಿಂದ ಆಸ್ಟ್ರೇಲಿಯಾದಲ್ಲಿ ವಿರಾಟ್​ ಕೊಹ್ಲಿ ಮೇನಿತಾ ನಡೀತು. ಸುದೀರ್ಘ 7 ತಿಂಗಳ ಬಳಿಕ ಕಮ್​ಬ್ಯಾಕ್​ ಮಾಡಿದ ವಿರಾಟ್​​ ಕೊಹ್ಲಿಯನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದಿದ್ರು. ಮೊದಲ 2 ಪಂದ್ಯಗಳಲ್ಲಿ ಡಕೌಟ್​ ಆದ ಕೊಹ್ಲಿ, ಸಿಡ್ನಿಯಲ್ಲಿ ಸಿಡಿದೆದ್ರು. ಬೊಂಬಾಟ್​ ಹಾಫ್​ ಸೆಂಚುರಿ ಸಿಡಿಸಿ ರಂಜಿಸಿದ್ರು. ಕ್ಲಾಸಿಕ್​ ಆಟಕ್ಕೆ ಅಭಿಮಾನಿಗಳು ತಲೆಬಾಗಿದ್ರು.

ಸಿಡ್ನಿಯಲ್ಲಿ ನಡೆದ ಆ ಪಂದ್ಯವೇ ಕೊಹ್ಲಿ ಆಸ್ಟ್ರೇಲಿಯಾದಲ್ಲಾಡೋ ಕರಿಯರ್​ನ ಕೊನೆಯ ಪಂದ್ಯ ಹೇಳಲಾಗಿತ್ತು. ಹೀಗಾಗಿ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಭರ್ಜರಿ ಟ್ರೀಟ್​ ನೀಡಿದ್ರು ಎಂದೇ ಎಲ್ಲರೂ ವ್ಯಾಖ್ಯಾನಿಸಿದ್ರು. ಆದ್ರೀಗ ಹೊಸ ಸುದ್ದಿ ಹೊರಬಿದ್ದಿದೆ. ಕೊಹ್ಲಿ ಮತ್ತೆ ಆಸ್ಟ್ರೇಲಿಯಾದಲ್ಲಿ ಆಡಲಿದ್ದಾರೆ. ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯಸ್ಥ ಟಾಡ್​ ಗ್ರೀನ್​ಬರ್ಗ್​ ಹೊಸ ಹೇಳಿಕೆ ನೀಡಿ ಫ್ಯಾನ್ಸ್​ ತಲೆಗೆ ಹುಳ ಬಿಟ್ಟಿದ್ದಾರೆ. 

Advertisment

ಬಿಗ್​ಬ್ಯಾಷ್​​ ಲೀಗ್​ನಲ್ಲಿ ಕಿಂಗ್​ ಕೊಹ್ಲಿ ಕಣಕ್ಕೆ.!?

ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಆರ್​.ಅಶ್ವಿನ್​ ಈ ಸೀಸನ್​ನ ಬಿಗ್​ ಬ್ಯಾಷ್​ ಲೀಗ್​ ಆಡೋಕೆ ರೆಡಿಯಾಗಿದ್ದಾರೆ. ಸಿಡ್ನಿ ಸಿಕ್ಸರ್​ ಜೊತೆಗೆ ಅಶ್ವಿನ್​ ಒಪ್ಪಂದ ಮಾಡಿಕೊಂಡಿದ್ದಾರೆ. ಲೆಜೆಂಡರಿ ಆಫ್​​ ಸ್ಪಿನ್ನರ್​​ ಅಶ್ವಿನ್​ ಬಿಗ್​ಬ್ಯಾಷ್​ ಲೀಗ್​ ಆಡ್ತಿರೋದು ಫ್ಯಾನ್ಸ್​ ವಲಯದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ. ಇದೇ ವೇಳೆ ಕ್ರಿಕೆಟ್​ ಆಸ್ಟ್ರೇಲಿಯಾ ಮುಖ್ಯಸ್ಥ ಟಾಡ್​​ ಗ್ರೀನ್​ ಬರ್ಗ್​, ವಿರಾಟ್​ ಕೊಹ್ಲಿನೂ ಬಿಗ್​ ಬ್ಯಾಷ್​ ಲೀಗ್​ ಆಡ್ತಾರೆ ಅನ್ನೋ ಸುಳಿವು ನೀಡಿದ್ದಾರೆ. ಈ ಹೊಸ ಸುದ್ದಿ ಸದ್ಯ ಸೆನ್ಸೇಷನ್​ ಸೃಷ್ಟಿಸಿದೆ. 

ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡಿರುವ ಟಾಡ್​ ಗ್ರೀನ್​ ಬರ್ಗ್, ಕೊಹ್ಲಿ ಕರೆ ತರೋಕೆ ನಾವು ಓಪನ್​ ಆಗಿದ್ದೇವೆ. ಮುಂದಿನ ದಿನಗಳಲ್ಲಿ ಇದು ನಿಜವೂ ಆಗಬಹುದು ಎಂದಿದ್ದಾರೆ.  ಐಪಿಎಲ್​ ನಂತರದ ಬಿಗ್ಗೆಸ್ಟ್​ ಟಿ20 ಲೀಗ್​ ಮಾಡೋ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಕೊಹ್ಲಿ ಬಿಗ್​ಬ್ಯಾಷ್​ ಆಡೋಕೆ ಓಕೆ ಅಂದ್ರೆ ಟೂರ್ನಿಯ ಖ್ಯಾತಿ ಮತ್ತಷ್ಟು ಹೆಚ್ಚಲಿದೆ ಎಂದೂ ಕೂಡ ಹೇಳಿದ್ದಾರೆ. ಕೊಹ್ಲಿ ಕ್ರೇಜ್​ ಆಸ್ಟ್ರೇಲಿಯಾದಲ್ಲಿ ಆ ಮಟ್ಟಕ್ಕಿದೆ ಬಿಡಿ. ಏಕದಿನ ಸರಣಿ 3 ಪಂದ್ಯಗಳ ವೇಳೆ ಸ್ಟೇಡಿಯಂ ಹೌಸ್​ಫುಲ್​ ಆಗಿದ್ದು ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಇದನ್ನೂ ಓದಿ:Ind vs Aus; ಬ್ಯಾಟರ್​ಗಳಿಗೆ ಅಗ್ನಿಪರೀಕ್ಷೆ.. ಇವತ್ತಿನ T20 ಮ್ಯಾಚ್​ನಲ್ಲಿ ಯಾರ್​ ಯಾರಿಗೆ ಸಿಗುತ್ತೇ ಚಾನ್ಸ್​?

Advertisment

VIRAT_KOHLI (4)

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳ್ತಾರಾ.?

ಕೊಹ್ಲಿ ಬಿಗ್​ಬ್ಯಾಷ್​ ಆಡ್ತಾರೆ ಎಂಬ ರೂಮರ್ಸ್​ ಹಬ್ಬಿದ ಬೆನ್ನಲ್ಲೇ, ಅಭಿಮಾನಿಗಳನ್ನ ಕಾಡ್ತಿರೋ ದೊಡ್ಡ ಅನುಮಾನವಿದು. ಟೀಮ್​ ಇಂಡಿಯಾ ಪರ ಆಡ್ತಿರೋ ಆಟಗಾರರಿಗೆ ವಿದೇಶಿ ಲೀಗ್​ಗಳನ್ನ ಆಡಲು ಅವಕಾಶವಿಲ್ಲ. ನಿವೃತ್ತಿ ಘೋಷಿಸಿದ ಬಳಿಕವಷ್ಟೇ ವಿದೇಶಿ ಲೀಗ್​ ಆಡಬಹುದು ಅನ್ನೋದು ಬಿಸಿಸಿಐನ ನಿಯಮ. ಈಗ ಬಿಗ್​​ಬ್ಯಾಷ್​ ಲೀಗ್​ ಆಡಬೇಕಂದ್ರೆ, ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಬೇಕಿದೆ. ಕಳೆದ ಕೆಲ ತಿಂಗಳಿಂದ ಕೊಹ್ಲಿ ನಿವೃತ್ತಿ ರೂಮರ್ಸ್​ ಜೋರಾಗಿ ಹಬ್ಬಿದೆ. ಬಿಸಿಸಿಐ ವಲಯದಲ್ಲೂ ಸೀನಿಯರ್ಸ್​​ನ ಹೊರ ಹಾಕೋಕೆ ಹಲವು ಗೇಮ್​ಗಳು ನಡೀತಿವೆ. ಇದೀಗ ಬಿಗ್​ಬ್ಯಾಷ್​ ಆಫರ್​ ಬಂದಿರೋದ್ರಿಂದ ಕೊಹ್ಲಿ ಸರ್​​ಪ್ರೈಸ್​ ಹೆಜ್ಜೆ ಇಟ್ಟು ನಿವೃತ್ತಿ ಘೋಷಿಸಿ ಬಿಡ್ತಾರಾ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. 

ಅದೇನೆ ಇರಲಿ, 2027ರ ಏಕದಿನ ವಿಶ್ವಕಪ್​ ಆಡೋದು ವಿರಾಟ್​ ಕೊಹ್ಲಿಯ ಮೇನ್​ ಟಾರ್ಗೆಟ್​​.! ಅದಕ್ಕಾಗಿ ಕೊಹ್ಲಿ ಕಠಿಣ ಸಿದ್ಧತೆಯನ್ನ ನಡೆಸ್ತಿದ್ದಾರೆ. ಸಿಡ್ನಿಯಲ್ಲಿ ಕೊನೆಯ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ನನ್ನ ಆಟ ಮುಗಿದಿಲ್ಲ ಎಂಬ ಸಂದೇಶವನ್ನ ಸೆಲೆಕ್ಟರ್ಸ್​ಗೂ ರವಾನಿಸಿದ್ದಾರೆ. ವಾಸ್ತವ ಹೀಗಿರೋವಾಗ ಕೊಹ್ಲಿ ನಿವೃತ್ತಿ ಘೋಷಿಸಿ ಬಿಗ್​ಬ್ಯಾಷ್​ ಆಡೋದು ದೂರದ ಮಾತೇ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IND vs AUS Virat Kohli
Advertisment
Advertisment
Advertisment