/newsfirstlive-kannada/media/media_files/2025/09/07/shivam-dube-team-india-new-jursey-1-2025-09-07-08-06-28.jpg)
ಕ್ಯಾನ್​ಬೆರಾ T20 ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಸೂರ್ಯಕುಮಾರ್ ಯಾದವ್ ಸಾರಥ್ಯದ ಯಂಗ್ ಇಂಡಿಯಾ, ಪಂದ್ಯಕ್ಕೆ ಭರ್ಜರಿ ಸಮರಾಭ್ಯಾಸ ನಡೆಸಿಕೊಂಡಿದೆ. ಮತ್ತೊಂದೆಡೆ ಏಕದಿನ ಸರಣಿಯ ಸೋಲಿನ ಸೇಡನ್ನ, T20 ಸರಣಿಯಲ್ಲಿ ತೀರಿಸಿಕೊಳ್ಳಲು ಟೀಮ್ ಇಂಡಿಯಾ ತವಕದಲ್ಲಿದೆ. ಇಂದಿನ ಪಂದ್ಯಕ್ಕೆ ಎರಡೂ ತಂಡಗಳ ಸಿದ್ಧತೆ ಹೇಗಿದೆ?
ಹೊಡಿ ಬಡಿ ಆಟಕ್ಕೆ ಯಂಗ್ ಇಂಡಿಯಾ ರೆಡಿ, ಕ್ಯಾನ್​ಬೆರಾದ ಮನುಕ ಓವಲ್ ಮೈದಾನದಲ್ಲಿ, ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಲು ಸ್ಕೈ ಪಡೆ ಸಿದ್ಧವಾಗಿದೆ. ಇನ್ನು ಈ ಪಂದ್ಯವನ್ನ ಯಂಗ್ ಇಂಡಿಯಾ ವರ್ಸಸ್ ಎಕ್ಸ್​ಪೀರಿಯನ್ಸ್ ಆಸಿಸ್​​ ಅಂತಾನೇ ಬಿಂಬಿಸಲಾಗ್ತಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ, ಗೆಲುವಿಗಾಗಿ ಎರಡೂ ತಂಡಗಳಿಂದ, ಜಿದ್ದಾಜಿದ್ದಿ ಫೈಟ್ ನಿರೀಕ್ಷಿಸಲಾಗಿದೆ.
/filters:format(webp)/newsfirstlive-kannada/media/media_files/2025/10/14/surya_kumar_bat-2025-10-14-18-32-05.jpg)
ಟೀಮ್ ಇಂಡಿಯಾಕ್ಕೆ ಬೆಸ್ಟ್ ಬ್ಯಾಲೆನ್ಸ್- XI ಆಯ್ಕೆ ತಲೆನೋವು..!
ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಸೋತಿತ್ತು. ಆದ್ರೆ ಸರಣಿ ಸೋಲಿಗೆ ಕಾರಣ, ಟೀಮ್ ಬ್ಯಾಲೆನ್ಸ್. ಬೆಸ್ಟ್ ಬ್ಯಾಲೆನ್ಸ್ ಇಲೆವೆನ್ ಆಯ್ಕೆಯಲ್ಲಿ ಎಡವಿದ ಟೀಮ್ ಇಂಡಿಯಾ, ಆಸಿಸ್ ವಿರುದ್ಧ ಏಕದಿನ ಸರಣಿ ಸೋಲಬೇಕಾಯ್ತು. ಆದ್ರೆ T20 ಸರಣಿಯಲ್ಲಿ ಆ ತಪ್ಪು ಮಾಡೋ ಹಾಗಿಲ್ಲ. ಬಲಿಷ್ಟ ಕಾಂಗರೂಗಳನ್ನ ಬೇಟೆಯಾಡಬೇಕಾದ್ರೆ, ಬೆಸ್ಟ್ ಬ್ಯಾಲೆನ್ಸ್ ಇಲೆವೆನ್ ಕಣಕ್ಕಿಳಿಸಲೇಬೇಕು.
ಕ್ಯಾಪ್ಟನ್ ಸೂರ್ಯಕುಮಾರ್​​​​​ ಯಾದವ್​ಗೆ ರಿಯಲ್ ಟೆಸ್ಟ್..!
ಸೂರ್ಯಕುಮಾರ್ ಯಾದವ್​​ಗೆ ಆಸಿಸ್​​​ ವಿರುದ್ಧದ T20 ಸರಣಿ, ಅತ್ಯಂತ ಪ್ರಮುಖ. T20 ತಂಡದ ಸಾರಥ್ಯವಹಿಸಿಕೊಂಡ ನಂತರ ಸೂರ್ಯ, ಬ್ಯಾಟಿಂಗ್ ಮರೆತವರಂತೆ ಕಾಣುತ್ತಾರೆ. ಅದ್ರಲ್ಲೂ ಈ ವರ್ಷ ಸೂರ್ಯಕುಮಾರ್ ಯಾದವ್ ಬ್ಯಾಟ್​​​ ಫುಲ್ ಸೈಲೆಂಟ್ ಆಗಿದೆ. ಕಳಪೆ ಬ್ಯಾಟಿಂಗ್ ಸರಾಸರಿ ಹೊಂದಿರುವ ಸೂರ್ಯ, ಈ ಸರಣಿಯಲ್ಲಿ ಪರ್ಫಾಮ್ ಮಾಡಲೇಬೇಕು. ಒಂದು ವೇಳೆ ಸೂರ್ಯ ಮತ್ತೆ ಕಳಪೆ ಫಾರ್ಮ್ ಮುಂದುವರೆಸಿದ್ರೆ, ಟೀಮ್ ಮ್ಯಾನೇಜ್ಮೆಂಟ್ ನಾಯಕನ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ವೇಗಿ ಬೂಮ್ರಾ ಆಗಮನ, ಬೌಲಿಂಗ್ ಅಟ್ಯಾಕ್​​​​ಗೆ ಬಲ..!
ವಿಶ್ರಾಂತಿಯ ನಂತರ ವೇಗಿ ಜಸ್ಪ್ರೀತ್ ಬೂಮ್ರಾ, T20 ಸರಣಿಗೆ ವಾಪಸಾಗಿದ್ದಾರೆ. ಬೂಮ್ರಾ ಉಪಸ್ಥಿತಿ, ಟೀಮ್ ಇಂಡಿಯಾ ಬೌಲಿಂಗ್ ಪಡೆಯ ಶಕ್ತಿಯನ್ನ ಹೆಚ್ಚಿಸಿದೆ. ಬೂಮ್ರಾ ಎಂಟ್ರಿ, ಆಸ್ಟ್ರೇಲಿಯಾದ ಬಲಿಷ್ಟ ಬ್ಯಾಟಿಂಗ್ ಲೈನ್​ಅಪ್​​ಗೆ ನಡುಕ ಹುಟ್ಟಿಸಿದೆ. ಆಸಿಸ್​​ನ ಟಾಪ್ ಆರ್ಡರ್ ಬ್ಯಾಟರ್​ಗಳಾದ ಮಿಚ್ ಮಾರ್ಚ್, ಟ್ರಾವಿಸ್ ಹೆಡ್, ಜೋಷ್ ಇಂಗ್ಲೀಸ್​ ವರ್ಸಸ್​ ಬೂಮ್ರಾ ನಡುವೆ ಟಫ್ ಕಾಂಪಿಟೇಷನ್ ನಡೆಯಲಿದೆ.​​​​
ಆಲ್​ರೌಂಡರ್, ಸ್ಪಿನ್ನರ್​ ನಡುವೆ ಸ್ಥಾನಕ್ಕಾಗಿ ಬಿಗ್ ಫೈಟ್..!
ಆಸ್ಟ್ರೇಲಿಯನ್ ಕಂಡೀಷನ್ಸ್​ನಲ್ಲಿ ಪರ್ಫೆಕ್ಟ್ ಪ್ಲೇಯಿಂಗ್​​ ಇಲೆವೆನ್ ಆಯ್ಕೆ ಮಾಡೋದು, ಟೀಮ್ ಮ್ಯಾನೇಜ್ಮೆಂಟ್​​ಗೆ ಟಫ್ ಟಾಸ್ಕ್. ಅದ್ರಲ್ಲೂ ಕ್ಯಾನ್​ಬೆರಾದ ಲೋ ಸ್ಕೋರಿಂಗ್ ಟ್ರ್ಯಾಕ್​​ನಲ್ಲಿ, ಬೆಸ್ಟ್ ಇಲೆವೆನ್ ಕಣಕ್ಕಿಳಿಯಲೇಬೇಕು. ಒಂದೆಡೆ ಆಲ್​ರೌಂಡರ್​​​​​​​​ ಶಿವಂ ದುಬೆ ಮತ್ತು ಹರ್ಷಿತ್ ರಾಣಾ ನಡುವೆ ಸ್ಥಾನಕ್ಕಾಗಿ ಫೈಟ್ ನಡೆದ್ರೆ, ಮತ್ತೊಂದೆಡೆ ಕುಲ್​ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಇಬ್ಬರಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಲೋ ಸ್ಕೋರಿಂಗ್​ ಪಿಚ್​ನಲ್ಲಿ ಬ್ಯಾಟರ್ಸ್ ಅಬ್ಬರಿಸ್ತಾರಾ..?
ಕ್ಯಾನ್​ಬೆರಾದ ಮನುಕ ಓವಲ್ ಪಿಚ್​​​​​, ಬ್ಯಾಟ್ಸ್​ಮನ್​​ಗಳಿಗೆ ಹೆಚ್ಚು ನೆರವಾಗೋದಿಲ್ಲ. ಬಿಗ್​ಬ್ಯಾಷ್ T20 ಲೀಗ್ ಮತ್ತು ಇಂಟರ್​ನ್ಯಾಷನಲ್ T20 ಮ್ಯಾಚ್​​ಗಳಲ್ಲಿ, ಬ್ಯಾಟರ್ಸ್ ರನ್​ಗಳಿಸಲು ಪರದಾಡಿದ್ದಾರೆ. ಈ ಮೈದಾನದ ಬೌಂಡರಿಲೈನ್ ತುಂಬಾ ದೂರ ಇರೋದ್ರಿಂದ, ಬಿಗ್​ ಹಿಟ್ಟಿಂಗ್ಸ್​ ಕಷ್ಟಾನೇ..! ಜೊತೆಗೆ ಈ ಪಿಚ್ ಸ್ಪಿನ್ ಫ್ರೆಂಡ್ಲಿ ಆಗಿರೋದ್ರಿಂದ, ಸ್ಪಿರ್ಸ್​ ಪ್ರಮುಖ ಪಾತ್ರವಹಿಸಲಿದ್ದಾರೆ.
ಇದನ್ನೂ ಓದಿ: ಬಿಗ್ ಮೆಸೇಜ್​ ಕೊಟ್ಟ ಮೊಹಮ್ಮದ್​ ಶಮಿ.. ಟೀಮ್ ಇಂಡಿಯಾಗೆ ಆಯ್ಕೆ ಮಾಡ್ತಾರಾ..?
/filters:format(webp)/newsfirstlive-kannada/media/media_files/2025/09/14/kuldeep_surya-2025-09-14-21-45-37.jpg)
T20 ವಿಶ್ವಕಪ್​​ಗೂ ಮುನ್ನ ಎಕ್ಸ್​ಪೀರಿಮೆಂಟ್​​​​​​​ ಸರಣಿ..!
2026 ಫೆಬ್ರವರಿಯಲ್ಲಿ T20 ವಿಶ್ವಕಪ್ ಶುರುವಾಗಲಿದೆ. ಅಂದ್ರೆ ವಿಶ್ವಕಪ್​ಗೆ ಬಾಕಿ ಇರೋದು, ಇನ್ನು ಕೇವಲ ಮೂರೇ ಮೂರು ತಿಂಗಳು. ಹಾಗಾಗಿ ವಿಶ್ವಕಪ್​ಗೆ ಈ T20 ಸರಣಿ, ಪ್ರಿಪರೇಷನ್ ನಡೆಸಿಕೊಳ್ಳೋಕೆ ಉತ್ತಮ ಅವಕಾಶ. ಎರಡೂ ತಂಡಗಳಿಗೂ ಟೀಮ್ ಕಾಂಬಿನೇಷನ್​ನಲ್ಲಿ ಎಕ್ಸ್​ಪೀರಿಮೆಂಟ್ ನಡೆಸಿ, ಬೆಸ್ಟ್ ತಂಡವನ್ನ ಪಿಚ್ ಮಾಡೋಕೆ ಗೋಲ್ಡನ್ ಚಾನ್ಸ್ ಇದಾಗಿದೆ.
T20 ಕ್ರಿಕೆಟ್​ನ ಟಾಪ್ 2 ತಂಡಗಳು, ಕ್ಯಾನ್​ಬೆರಾದಲ್ಲಿ ಗೆಲ್ಲಲೇಬೇಕು ಅಂತ ಪಣತೊಟ್ಟಿವೆ. ಯಂಗ್ ವರ್ಸಸ್ ಎಕ್ಸ್​ಪೀರಿಯನ್ಸ್​ ತಂಡಗಳ ಬಿಗ್​ ಫೈಟ್​ನಲ್ಲಿ, ಯಾವ ತಂಡ ಗೆಲ್ಲುತ್ತೆ ಅನ್ನೋದನ್ನ ಕಾದುನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us