Advertisment

ಬಿಗ್ ಮೆಸೇಜ್​ ಕೊಟ್ಟ ಮೊಹಮ್ಮದ್​ ಶಮಿ.. ಟೀಮ್ ಇಂಡಿಯಾಗೆ ಆಯ್ಕೆ ಮಾಡ್ತಾರಾ..?

ಮೊಹಮ್ಮದ್ ಶಮಿ ಅತ್ಯುತ್ತಮ ಫಾರ್ಮ್​ನಲ್ಲಿ ಬೌಲಿಂಗ್ ಮಾಡಿದ್ದಾರೆ. ಬಂಗಾಳ ಪರ ಬಿರುಸಿನ ಬೌಲಿಂಗ್ ಪ್ರದರ್ಶನ ಮಾಡಿರುವ ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವರು ಎರಡು ಇನ್ನಿಂಗ್ಸ್​ನಲ್ಲೂ ಅದ್ಭುತವಾಗಿ ಗಮನ ಸೆಳೆದಿದ್ದಾರೆ.

author-image
Bhimappa
’ಜೈ ಶ್ರೀರಾಮ್​ ಎಂದು ಸಾವಿರ ಸಲ ಹೇಳಲಿ; ಅದರಲ್ಲಿ ತಪ್ಪೇನು?’- ಭಾರತೀಯರ ಮನಗೆದ್ದ ಶಮಿ
Advertisment

ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡದಿದ್ದಕ್ಕೆ ಇತ್ತೀಚೆಗೆ ಬೌಲರ್ ಮೊಹಮ್ಮದಿ ಶಮಿ ಅವರು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದರು. ಅಜಿತ್ ಅಗರ್ಕರ್, ಹೆಡ್​ ಕೋಚ್​ ಗೌತಮ್ ಗಂಭೀರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಾನು ಫಿಟ್ ಆಗಿದ್ದರೂ ತಂಡಕ್ಕೆ ಪರಿಗಣನೆ ಮಾಡಿಲ್ಲ ಎಂದು ಹೇಳಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ನಾನು ಫಿಟ್​ ಆಗಿದ್ದೇನೆ ಅಂತ ಮೊಹಮ್ಮದ್ ಶಮಿ ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ. 

Advertisment

ಬಂಗಾಳ ಹಾಗೂ ಗುಜರಾತ್ ನಡುವಿನ ರಣಜಿ ಟ್ರೋಫಿ ಪಂದ್ಯ ನಿನ್ನೆ ಮುಗಿದಿದ್ದು ಮೊಹಮ್ಮದ್ ಶಮಿ ಅತ್ಯುತ್ತಮ ಫಾರ್ಮ್​ನಲ್ಲಿ ಬೌಲಿಂಗ್ ಮಾಡಿದ್ದಾರೆ. ಬಂಗಾಳ ಪರ ಬಿರುಸಿನ ಬೌಲಿಂಗ್ ಪ್ರದರ್ಶನ ಮಾಡಿರುವ ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವರು ಎರಡು ಇನ್ನಿಂಗ್ಸ್​ನಲ್ಲೂ ಅದ್ಭುತವಾಗಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಗುಜರಾತ್​ ಅನ್ನು ಸೋಲಿಸಿ, ಬಂಗಾಳದ ಗೆಲುವಿಗೂ ಪ್ರಮುಖ ಪಾತ್ರ ವಹಿಸಿದ್ದಾರೆ. 

ಬಂಗಾಳ ಪರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡಿರುವ ಮೊಹಮ್ಮದ ಶಮಿ ಅವರು 18.3 ಓವರ್​ಗಳನ್ನು ಬೌಲ್ ಮಾಡಿದ್ದಾರೆ. ಇದರಲ್ಲಿ 6 ಓವರ್​ ಮೆಡಿನ್ ಮಾಡಿ, 44 ರನ್​ಗಳನ್ನು ನೀಡಿದ್ದು ಅತ್ಯಮೂಲ್ಯವಾದ 3 ವಿಕೆಟ್​ಗಳನ್ನು ಕಬಳಿಸಿದ್ದಾರೆ. 2.37 ಎಕನಾಮಿಯಲ್ಲಿ ಶಮಿ ಬೌಲಿಂಗ್ ಮಾಡಿದ್ದಾರೆ. 

ಇದನ್ನೂ ಓದಿ:Ind vs Aus T20; ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಅಂದ್ರೆ ಆಸ್ಟ್ರೇಲಿಯಾಗೆ ಭಯ..!

Advertisment

Ajit_Agarkar

ಇನ್ನು 2ನೇ ಇನ್ನಿಂಗ್ಸ್​ನಲ್ಲಿ ಇನ್ನು ಹೆಚ್ಚಿನ ಪರಾಕ್ರಮ ಮೆರೆದ ಶಮಿ, ಗುಜರಾತ್ ಬ್ಯಾಟರ್​ಗಳಿಗೆ ಆಡಲು ಬಿಡಲೇ ಇಲ್ಲ ಎನ್ನಬಹುದು. ಏಕೆಂದರೆ ಇನ್ನಿಂಗ್ಸ್​ನಲ್ಲಿ 10 ಓವರ್ ಬೌಲಿಂಗ್ ಮಾಡಿ 1 ಓವರ್​ ಮೆಡಿನ್ ಮಾಡಿದ್ದಾರೆ. 38 ರನ್​ಗಳನ್ನು ನೀಡಿ 5 ವಿಕೆಟ್​ಗಳನ್ನು ಉರುಳಿಸಿದ್ದಾರೆ. 3.80 ಎಕನಾಮಿಯಲ್ಲಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.     

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರು ಮೊಹಮ್ಮದ್ ಶಮಿ ಫಿಟ್​ ಆಗಿದ್ರೆ ತಂಡಕ್ಕೆ ಆಯ್ಕೆ ಆಗುತ್ತಿದ್ದರು ಎಂದು ಟಕ್ಕರ್ ಕೊಟ್ಟಿದ್ದರು. ಆದರೆ ಈಗ ಮೊಹಮ್ಮದ್ ಶಮಿ ರಣಜಿ ಟ್ರೋಫಿಯಲ್ಲಿ ಅಮೋಘವಾದ ಬೌಲಿಂಗ್ ಮಾಡಿ, 2 ಇನ್ನಿಂಗ್ಸ್​ ಸೇರಿ 8 ವಿಕೆಟ್ ಪಡೆದು ಬಿಸಿಸಿಐಗೆ ಬಿಗ್ ಮೆಸೇಜ್ ಕೊಟ್ಟಿದ್ದಾರೆ.   

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Mohammed Shami IND vs AUS
Advertisment
Advertisment
Advertisment