/newsfirstlive-kannada/media/media_files/2025/09/23/kolkata-2025-09-23-15-28-02.jpg)
ಕೊಲ್ಕತ್ತಾ: ನಗರದಉಪನಗರಗಳಲ್ಲಿ ನೆನ್ನೆಯಿಂದ ಧಾರಾಕಾರ ಮಳೆಯಾಗ್ತಿದ್ದು,ಜನರು ನಲುಗಿ ಹೋಗಿದ್ದಾರೆ. ಮಳೆಯಾರ್ಭಟಕ್ಕೆ ಈಗಾಗಲೇ 7 ಜನರು ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿ ನಗರ, ಗರಿಯಾಹತ್, ಎಕ್ಬಾಲ್ಪುರ್, ಬೆಹಾಲಾ ಮತ್ತು ಹರಿದೇವ್ಪುರ್ಗಳಲ್ಲಿ ಮಳೆಯ ಅವಾಂತರಕ್ಕೆ ಏಳು ಜನರು ಮೃತಪಟ್ಟಿದ್ದಾರೆ. ಅದರ ಪೈಕಿ ಕನಿಷ್ಠ ಮೂವರು ವಿದ್ಯುತ್​ ಅವಘಡದಿಂದ ಮೃತಪಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತವಾದ ಪರಿಣಾಮ ಕೊಲ್ಕತ್ತಾದಲ್ಲಿ ಧಾರಾಕಾರ ಮಳೆಯಾಗ್ತಿದೆ. ಇತ್ತ ಮಳೆಯಾರ್ಭಟಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ಅನೇಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಹಿನ್ನಲೆ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್ ಮೆಂಟ್‌ನಲ್ಲಿ 2 ಗಂಟೆ ಕುಳಿತು ದೆಹಲಿಗೆ ಬಂದ ಅಫ್ಘನಿಸ್ತಾನದ ಬಾಲಕ! ಮುಂದೇನಾಯ್ತು?