/newsfirstlive-kannada/media/media_files/2025/10/01/up_old_man-2025-10-01-10-22-12.jpg)
ಲಕ್ನೋ: 75 ವರ್ಷದ ವೃದ್ಧನೊಬ್ಬ 35 ವಯಸ್ಸಿನ ಮಹಿಳೆಯನ್ನು ಮದುವೆಯಾಗಿ ಮೊದಲ ರಾತ್ರಿಗೂ ಮೊದಲೇ ಜೀವ ಕಳೆದುಕೊಂಡಿದ್ದಾನೆ. ಈ ಘಟನೆಯು ಉತ್ತರ ಪ್ರದೇಶದ ಜೌನ್ಪುರ್​ ಜಿಲ್ಲೆಯ ಕುಚ್ಮುಚ್​ ಗ್ರಾಮದಲ್ಲಿ ನಡೆದಿದೆ.
ಕುಚ್ಮುಚ್​ ಗ್ರಾಮದ ಸಂಗ್ರೂರಮ್ (75) ಉಸಿರು ಚೆಲ್ಲಿದ ವೃದ್ಧ. ಸಂಗ್ರೂರಮ್ ತನ್ನ ವಯಸ್ಸಿಗಿಂತ ಅರ್ಧ ವಯಸ್ಸು ಕಡಿಮೆ ಇರುವ ಮಹಿಳೆ ಮಾಂಭಾವತಿ (35) ಯನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದನು. ಒಂದು ವರ್ಷದ ಹಿಂದೆ ಮೊದಲ ಹೆಂಡತಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಜಲಾಲ್ ಪುರದ ಮಾಂಭಾವತಿನ ಮದುವೆಯಾದನು ಎಂದು ಹೇಳಲಾಗಿದೆ.
ಮನೆಯವರು ಬೇಡ ಎಂದರು ವೃದ್ಧ ಮೊನ್ನೆ ಸೋಮವಾರ ಸೆಪ್ಟೆಂಬರ್ 29 ರಂದು​ ರಿಜಿಸ್ಟರ್ ಮ್ಯಾರೇಜ್ ಆಗಿದ್ದನು. ಬಳಿಕ ದೇವಾಲಯವೊಂದರಲ್ಲಿ ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹವಾದರು. ಮದುವೆ ಬಗ್ಗೆ ಮಹಿಳೆಯನ್ನು ಕೇಳಿದಾಗ, ಅವರು ಮನೆ ಹಾಗೂ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಮದುವೆಯ ರಾತ್ರಿ ಹೇಳಿದ್ದನು ಎಂದು ಹೇಳಿದ್ದಳು. ಆದರೆ ಬೆಳಗ್ಗೆ ಎದ್ದಾಗ ವೃದ್ಧನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಎನ್ನಲಾಗಿದೆ.
ಹೀಗಾಗಿ ಕೂಡಲೇ ಆತನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ವೃದ್ಧನ ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದ್ದಕ್ಕಿದ್ದಾಗೆ ಸಂಗ್ರೂರಮ್ ಮೃತಪಟ್ಟಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದ್ದು ಕೆಲವರು ಸಾಮಾನ್ಯ ಸಾವು ಎಂದರೆ, ಇನ್ನು ಕೆಲವರು ಅನುಮಾನ ವ್ಯಕ್ತಪಡಿಸಿ ಪೊಲೀಸ್​ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ