/newsfirstlive-kannada/media/media_files/2025/10/01/mallamma_bbk12-2025-10-01-09-00-54.jpg)
ಬಿಗ್ ಬಾಸ್​ ಗ್ರ್ಯಾಂಡ್​ ಆಗಿ ಓಪನ್ ಆಗಿದ್ದೇ ಆಗಿದ್ದು ಉತ್ತರ ಕರ್ನಾಟಕದ ಮಲ್ಲಮ್ಮ ದೊಡ್ಮನೆಯಲ್ಲಿ ಏನು ಮಾಡುತ್ತಾರೆ ಎಂಬುದು ಬಿಗ್​ ಬಾಸ್​ಗೆ ತಲೆ ಕೆಟ್ಟು ಹೋಗಿದೆ. ಬಿಗ್​ ಬಾಸ್​ ಕೆಲವು ಪದಗಳನ್ನ ಇಂಗ್ಲಿಷ್​ನಲ್ಲಿ ಹೇಳಿದರೂ, ಕನ್ನಡದಲ್ಲಿ ಬಿಡಿಬಿಡಿಯಾಗಿ ಹೇಳಿದರೂ ಮಲ್ಲಮ್ಮನ ಉತ್ತರ ಮಾತ್ರ ಬಿಗ್ ಬಾಸ್​ಗೆ​ ಶಾಕ್​ ಮೇಲೆ ಶಾಕ್ ಕೊಡುತ್ತಿದೆ. ಅಂಥಹದ್ದೆ ಒಂದು ಸಂಗತಿ ಮನೆಯಲ್ಲಿ ನಡೆದಿದೆ.
ಮಲ್ಲಮ್ಮ ಅವರನ್ನು ಬಿಗ್​ ಬಾಸ್​ ಕಾನ್ಫೆರೆನ್ಸ್​ ರೂಮ್​ಗೆ ಕರೆಸಿಕೊಂಡರು. ಒಳಗೆ ಬಂದ ಮಲ್ಲಮ್ಮ ಕೈಮುಗಿಯುತ್ತ ನಮಸ್ತೆ ಸರ್ ಎನ್ನುತ್ತ ನೇರ ಹೋಗಿ ದೊಡ್ಡ ಸೋಫಾ ಮೇಲೆ ಕುಳಿತರು. ಕುಳಿತ್ತಿದ್ದೇ ತಡ ಮಲ್ಲಮ್ಮ ಕಣ್ಣು ಮುಚ್ಚಿ, ದೇವರಿಗೆ ಕೈಮುಗಿದು ಕುಳಿತು ಬಿಟ್ಟರು. ಇದನ್ನು ಗಮನಿಸಿದ ಬಿಗ್​ ಬಾಸ್​ ಮಲ್ಲಮ್ಮ.. ಎಂದು ಕೂಗಿದರು.
ಇದನ್ನೂ ಓದಿ: ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!
ಇದಕ್ಕೆ ಮಲ್ಲಮ್ಮಗೆ ಏನು ಹೇಳಬೇಕು ಎಂದು ಗೊತ್ತಾಗದೇ ಹ್ಹೂರೀ ಸರ್​.. ಓಕೆ ಸರ್ ಎಂದು ಎರಡನ್ನು ಒಟ್ಟೊಟ್ಟಿಗೆ ಹೇಳಿಬಿಟ್ಟರು. ಆಗ ಬಿಗ್ ಬಾಸ್ ಏನಾದರೂ ಮಾತನಾಡಿ ಎಂದರು. ಅದಕ್ಕೆ ಮಲ್ಲಮ್ಮ ಬಿಳಿ ಹೊಲ, ಕರಿ ಬೀಜ ಬಿತ್ತವ ಬಲು ಜಾಣ ಅಂತ ಒಡಗತಿ ಹೇಳಿದ್ದಾರೆ. ಇದಕ್ಕೆ ಬಿಗ್ ಬಾಸ್​ ಹತ್ತಿ ಎಂದು ಉತ್ತರ ಕೊಟ್ಟರು. ಆದರೆ ಮಲ್ಲಮ್ಮ ಉತ್ತರ ಸರಿ ಇಲ್ಲ ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಬಿಗ್​ ಬಾಸ್​ಗೆ ಮಾತನಾಡುವುದಕ್ಕೆ, ಉತ್ತರ ಕೊಡುವುದಕ್ಕೆ ಯೋಚನೆ ಮಾಡುವ ಹಾಗೇ ಮಾಡಿ ಬಿಟ್ಟರಿ ಅಂತ ಹೇಳುತ್ತಿದ್ದಂತೆ ಮಲ್ಲಮ್ಮ ಮುಖದಲ್ಲಿ ನಗು ಮೂಡಿತ್ತು. ಮನೆಯಲ್ಲಿ ಈಗಾಗಲೇ ಮೆಲ್ಲಗೆ ಜಗಳ ಶುರುವಾಗಿದ್ದು ಜಂಟಿಗಳು ಹಗ್ಗ ಕಟ್ಟಿಕೊಂಡು ಇರದಿದ್ದಕ್ಕೆ ಒಂಟಿಗಳಿಗೆ ಬಿಗ್ ಬಾಸ್ ಶಿಕ್ಷೆ ವಿಧಿಸಿದ್ದರು. ಇನ್ನು ಇವತ್ತು ಏನೇನು ನಡೆದಿದೆ ಎಂದು ರಾತ್ರಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ