ಮೆಗಾ ಕುಟುಂಬಕ್ಕೆ ಸಂಭ್ರಮದ ಹಬ್ಬ: ರಾಮ್ ಚರಣ್-ಉಪಾಸನ ದಂಪತಿಗೆ ಅವಳಿ ಮಕ್ಕಳ ಜನನ

ಪಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನ ಕೊಣಿಡೇಲ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದಾರೆ. ಜನವರಿ 31ರ ಶುಕ್ರವಾರ ರಾತ್ರಿ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಉಪಾಸನ ಅವರು ಅವಳಿ ಮಕ್ಕಳಿಗೆ (ಒಬ್ಬ ಮಗ ಮತ್ತು ಒಬ್ಬ ಮಗಳು) ಜನ್ಮ ನೀಡಿದ್ದಾರೆ.

author-image
Ganesh Kerekuli
ramchanran
Advertisment

ಪಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನ ಕೊಣಿಡೇಲ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದಾರೆ. ಜನವರಿ 31ರ ಶುಕ್ರವಾರ ರಾತ್ರಿ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಉಪಾಸನ ಅವರು ಅವಳಿ ಮಕ್ಕಳಿಗೆ (ಒಬ್ಬ ಮಗ ಮತ್ತು ಒಬ್ಬ ಮಗಳು) ಜನ್ಮ ನೀಡಿದ್ದಾರೆ.

ಈ ಸುಸಂದರ್ಭವನ್ನು ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಚಿರಂಜೀವಿ ಅವರ ಹರ್ಷದ ನುಡಿಗಳು

"ರಾಮ್ ಚರಣ್ ಮತ್ತು ಉಪಾಸನ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ನಮಗೊಬ್ಬ ಮೊಮ್ಮಗ ಮತ್ತು ಮೊಮ್ಮಗಳು ಹುಟ್ಟಿದ್ದಾರೆ ಎಂದು ತಿಳಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ನಮ್ಮ ಕುಟುಂಬಕ್ಕೆ ಈ ಪುಟ್ಟ ಕಂದಮ್ಮಗಳನ್ನು ಸ್ವಾಗತಿಸುವುದು ತಾತ-ಅಜ್ಜಿಯಾಗಿ ನಮಗೆ ಹೆಮ್ಮೆಯ ವಿಷಯ. ಪ್ರತಿಯೊಬ್ಬರ ಪ್ರಾರ್ಥನೆ, ಪ್ರೀತಿ ಮತ್ತು ಆಶೀರ್ವಾದಕ್ಕೆ ನಾವು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ" ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:40s and laid off: ಬಜೆಟ್​​ನಲ್ಲಿ ಅನುಭವಿ ವೃತ್ತಿಪರರ ನಿರೀಕ್ಷೆ ಹುಸಿಯಾಗಿದ್ದೇಕೆ..? ದಾರಿ ಯಾವುದಯ್ಯ?

ರಾಮ್ ಚರಣ್ ಮತ್ತು ಉಪಾಸನ ದಂಪತಿಗೆ ಈಗಾಗಲೇ 'ಕ್ಲಿಂಕಾರ' ಎಂಬ ಪುತ್ರಿ ಇದ್ದಾಳೆ. ಈಗ 'ಮೆಗಾ ಟ್ವಿನ್ಸ್' ಆಗಮನವಾಗಿರುವುದು ಮೆಗಾ ಅಭಿಮಾನಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ದಂಪತಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಸದ್ಯ ರಾಮ್ ಚರಣ್ ಅವರು ಬುಚ್ಚಿಬಾಬು ಸನ ನಿರ್ದೇಶನದ 'ಪೆದ್ದಿ' (Peddi) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ತಂದೆಯಾದ ಸಂಭ್ರಮದಲ್ಲಿರುವ ರಾಮ್ ಚರಣ್ ಶೀಘ್ರದಲ್ಲೇ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿ: ಕೃಷಿ ಸಚಿವ N.ಚಲುವರಾಯಸ್ವಾಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ram Charan
Advertisment