/newsfirstlive-kannada/media/media_files/2025/09/19/anjali-2025-09-19-12-28-12.jpg)
ರಾಜಸ್ಥಾನದ ಅಜ್ಮೀರ್ದಲ್ಲಿ ಆಘಾತಕಾರಿ ಘೋಟನೆಯೊಂದು ಬೆಳಕಿಗೆ ಬಂದಿದೆ. live-in ಪಾರ್ಟ್ನರ್ ತನ್ನ ಪ್ರೇಯಸಿಗೆ ಈಗಾಗಲೇ ನಿನ್ನ ಬಳಿಯಿರುವ ಮಗು ಇಷ್ಟವಿಲ್ಲ ಎಂದಿದ್ದಾನೆ. ಅಷ್ಟಕ್ಕೇ ಆ ಕ್ರೂರ ತಾಯಿ ಮೂರು ವರ್ಷದ ಮಗುವನ್ನು ಕೆರೆಗೆ ಎಸೆದಿದ್ದಾಳೆ.
28 ವರ್ಷದ ಅಂಜಲಿ ಮಗುವನ್ನ ಕೆರೆಗೆ ಎಸೆದ ಮಹಿಳೆ. ಉತ್ತರ ಪ್ರದೇಶದ ವಾರಣಸಿ ಮೂಲದ ಅಂಜಲಿಗೆ ಈಗಾಗಲೇ ಮದುವೆ ಆಗಿತ್ತು. ಆದರೆ ಗಂಡನಿಂದ ದೂರವಾಗಿದ್ದ ಈಕೆ, ಮಗುವಿನ ಜೊತೆ ವಾಸವಿದ್ದಳು.
ಗಂಡನಿಂದ ದೂರವಾದ ಬೆನ್ನಲ್ಲೇ ಅಲ್ಕೇಶ್ ಎಂಬಾತನ ಜೊತೆ live-in ಸಂಬಂಧದಲ್ಲಿದ್ದಳು. ತನಿಖೆ ವೇಳೆ ಆಕೆ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಅಲ್ಕೇಶ್ ಮಗುವಿನ ಬಗ್ಗೆ ಅಪಹಾಸ್ಯ ಮಾಡುತ್ತಿದ್ದನಂತೆ. ಇದರಿಂದ ನೊಂದು ಮಗುವನ್ನು ಮುಗಿಸಲು ನಿರ್ಧರಿಸಿದೆ. ಕೆರೆಗೆ ಎಸೆಯುವ ಮೊದಲು ಮಗುವಿಗೆ ಹಾಲುಣಿಸಿದೆ. ನಂತರ ಅಲ್ಲಿರುವ ಕಲ್ಲಿನ ಮೇಲೆ ಮಲಗಿಸಿದೆ. ನಂತರ ಎಸೆದುಬಿಟ್ಟೆ ಅಂತಾ ಸತ್ಯ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಏಷ್ಯಾ ಕಪ್ ಸೂಪರ್ 4ಗೆ 4 ತಂಡಗಳು ಎಂಟ್ರಿ- ಭಾರತದ ಪಂದ್ಯ ಯಾವಾಗ?
ಕಳೆದ ಬುಧವಾರ ಸಂಜೆ ವೇಳೆಗೆ ಅಂಜಲಿ ತನ್ನ ಮಗುವನ್ನ ಎತ್ತಿಕೊಂಡು ಅನಸಾಗರ ಲೇಕ್ಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿ ಕೃತ್ಯ ನಡೆಸಿದ್ದಾಳೆ. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಫೋನ್ನಲ್ಲಿ ಜೋರಾಗಿ ಕೂಗಾಡುತ್ತಿದ್ದಳು. ನಂತರ ಪೊಲೀಸರು ಏನು ಎಂದು ವಿಚಾರಿಸಿದ್ದಾರೆ. ಆಗ ಮಗು ಕಾಣೆಯಾಗಿದೆ ಎಂದು ಹೇಳಿದ್ದಾಳೆ. ಆಗ ಪೊಲೀಸರು ಸಿಸಿಟಿವಿ ಚೆಕ್ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ನವರಾತ್ರಿಗೆ ಭರ್ಜರಿ ಗುಡ್ನ್ಯೂಸ್ ನಿರೀಕ್ಷೆ.. ಮೊಸರು, ತುಪ್ಪದ ಬೆಲೆ ಇಳಿಕೆ ಸಾಧ್ಯತೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ