/newsfirstlive-kannada/media/media_files/2025/10/28/delhi_acid-2025-10-28-06-50-43.jpg)
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭಾನುವಾರ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದ್ದ ಆಸಿಡ್​​ ಅಟ್ಯಾಕ್​​ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಷ್ಟ್ರ ರಾಜಧಾನಿಯ ಮಹಿಳೆಯರು, ಯುವತಿಯರ ಸೇಫ್ಟಿ ಬಗ್ಗೆ ಪ್ರಶ್ನೆಯನ್ನು ಮೂಡಿಸಿತ್ತು. ಈ ಘಟನೆಗೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆದ್ರೀಗ ಈ ಕೇಸ್​ಗೆ ಬಿಗ್​ಟ್ವಿಸ್ಟ್​ ಸಿಕ್ಕಿದ್ದು, ಆಸಿಡ್​ ದಾಳಿಗೆ ಒಳಗಾಗಿದ್ದಾಳೆ ಎನ್ನಲಾದ ಯುವತಿಯ ತಂದೆಯನ್ನೇ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/10/28/delhi_acid_2-2025-10-28-06-50-54.jpg)
ತನಗೆ ಪರಿಚಯವಿರುವ ವ್ಯಕ್ತಿಯೊಬ್ಬ ತನ್ನಿಬ್ಬರು ಸ್ನೇಹಿತರನ್ನು ಕರೆದುಕೊಂಡು ಆಕೆಯ ಮೇಲೆ ಆ್ಯಸಿಡ್ ಎರಚಿ ಹೋಗಿದ್ದ ಎಂದು ಜಿತೇಂದ್ರ ಎಂಬಾತನ ವಿರುದ್ಧ ಯುವತಿ ಆರೋಪ ಮಾಡಿದ್ದಳು. ಅದರ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದ್ರೆ ಘಟನೆ ನಡೆದ 24 ಗಂಟೆಯಲ್ಲೇ ಇದೊಂದು ಸುಳ್ಳು ಆಸಿಡ್​ ಅಟ್ಯಾಕ್​ ಅನ್ನೋದು ಬೆಳಕಿಗೆ ಬಂದಿದೆ. ಯುವತಿ ಮೇಲೆ ಎರಚಿರೋದು ಆಸಿಡ್​ ಅಲ್ಲ. ಅದು ಟಾಯ್ಲೆಟ್​ ಕ್ಲೀನರ್​ ಅನ್ನೋದು ಗೊತ್ತಾಗಿದೆ.
ಆರೋಪಿಯ ಪತ್ನಿ ಮೇಲೆ ಕಣ್ಣು ಹಾಕಿದ್ದ ಯುವತಿಯ ತಂದೆ
ಆ ತನಿಖೆಯ ಸಂದರ್ಭದಲ್ಲಿ ಆಕೆಯು ನೀಡಿದ್ದ ಹೇಳಿಕೆಯೂ ಆಕೆಯ ಪರಿಸ್ಥಿತಿಯೂ ಹೋಲಿಕೆ ಇರಲಿಲ್ಲ ಘಟನೆ ನಡೆದ ಸ್ಥಳದ ಸಿಸಿಟಿವಿ ಇತ್ಯಾದಿಗಳನ್ನು ಪರಿಶೀಲಿಸಿದಾಗ ಯಾವ ವ್ಯಕ್ತಿಯ ಮೇಲೆ ಆಪಾದನೆ ಮಾಡಿದ್ದೋ ಆ ವ್ಯಕ್ತಿಯು ಆ ಸ್ಥಳಕ್ಕೆ ಬಂದಿಲ್ಲದಿರುವುದು ತಿಳಿದುಬಂದಿದೆ. ಬಳಿಕ ಯುವತಿಯನ್ನು ವಿಚಾರಿಸಿದಾಗ ಅಸಲಿ ವಿಷ್ಯ ಬೆಳಕಿಗೆ ಬಂದಿದೆ.
- ಆಸಿಡ್​ ದಾಳಿ ನಡೆಸಿದ್ದಾನೆ ಎನ್ನಲಾದ ವ್ಯಕ್ತಿಯ ಪತ್ನಿ ಮೇಲೆ ಕಣ್ಣು
- ಆಕೆಯನ್ನು ಒಲಿಸಿಕೊಳ್ಳಲು ನಿತ್ಯ ಕಾಟ ಕೊಡುತ್ತಿದ್ದ ಯುವತಿ ತಂದೆ
- ಹೀಗಾಗಿ ಯುವತಿಯ ತಂದೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು
- ದೂರು ನೀಡಿದ್ದ ವಿಷ್ಯಗೊತ್ತಾಗಿ ಎಸ್ಕೇಪ್​ ಆಗಿದ್ದ ಯುವತಿಯ ತಂದೆ
- ಮಹಿಳೆಯ ಗಂಡನನ್ನು ಯಾವುದಾದ್ರೂ ಕೇಸ್​ನಲ್ಲಿ ಸಿಲಿಕಿಸಲು ಪ್ಲಾನ್​
- ತಂದೆಯ ಪ್ಲಾನ್​ಗೆ ಸಾಥ್​ ನೀಡಿದ್ದ ಸಂತ್ರಸ್ತ ಯುವತಿ, ಆತನ ಮಗ
- ಆಸಿಡ್​ ದಾಳಿಯ ವ್ಯೂಹ ಎಣೆದು ಮಹಿಳೆಯ ಪತಿ ವಿರುದ್ಧ ಆರೋಪ
/filters:format(webp)/newsfirstlive-kannada/media/media_files/2025/10/28/delhi_acid_1-2025-10-28-06-51-05.jpg)
ಇದಿಷ್ಟೂ ಗೊತ್ತಾದ ಮೇಲೆ ತನಿಖೆಯನ್ನು ತೀವ್ರವಾಗಿಸಿದ ಪೊಲೀಸರು, ಕಡೆಗೂ ಎಸ್ಕೇಪ್ ಆಗಿದ್ದ ಯುವತಿಯ ತಂದೆಯನ್ನು ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ. ಅತ್ತ, ಆ್ಯಸಿಡ್ ದಾಳಿ ಹೇಳಿಕೆ ನೀಡಿದ್ದ ಯುವತಿ ಹಾಗೂ ಆಕೆಯ ತಂದೆಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us