/newsfirstlive-kannada/media/media_files/2025/09/09/pawan_kalyan-2025-09-09-16-02-50.jpg)
ಮಂಗಳೂರು: ಧರ್ಮಸ್ಥಳ ಗ್ರಾಮದ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ರಾಜ್ಯದಲ್ಲದೆ ಅಂತರಾಷ್ಟ್ರೀಯಾ ಮಟ್ಟದಲ್ಲಿ ಸದ್ದು ಮಾಡಿತ್ತು.. ಇದೀಗ ನಟ ಹಾಗೂ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಎಂಟ್ರಿಯಾಗಿದ್ದಾರೆ.
ಏನಿದು ಪ್ರಕರಣ..?
ರಾಜ್ಯರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಧರ್ಮಸ್ಥಳ ಪ್ರಕರಣಕ್ಕೆ ಇದೀಗ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ಬೆಂಬಲ ಸೂಚಿಸಿದ್ದಾರೆ. ಸೆಪ್ಟೆಂಬರ್ 11 ಗುರುವಾರ ಸಂಜೆ 5 ಗಂಟೆಗೆ ಪವನ್ ಕಲ್ಯಾಣ್ ನೇತೃತ್ವದಲ್ಲಿ ವಿಶೇಷ ಸೇವೆ ಸಲ್ಲಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕ್ಷೇತ್ರದ ಅಪಪ್ರಚಾರದ ವಿರುದ್ಧ ಪವನ್ ಕಲ್ಯಾಣ್ ಸಂಜೆ ದೇವಸ್ಥಾನದ ಮುಂಭಾಗ ವಿಶೇಷ ಆರತಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: Asia Cup; ಪ್ರತಿ ಮ್ಯಾಚ್ ಟೀಮ್ ಇಂಡಿಯಾ ಆಟಗಾರರಿಗೆ ಅತ್ಯಂತ ಮುಖ್ಯ.. ಯಾಕೆ ಗೊತ್ತಾ?
ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ದಿನನಿತ್ಯ ಎಸ್ಐಟಿ ಅಧಿಕಾರಿಗಳಿಗೆ ಮಾಸ್ಕ್ ಮ್ಯಾನ್ ಸೂಚಿಸಿದ ಜಾಗ ಅಗೆಯೋದು ಪರಿಶೀಲನೆ ನಡೆಸಿದೊ ಆಗಿತ್ತು. ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡ್ತಿರೋರ ವಿರುದ್ಧ ಪ್ರತಿಭಟನೆ ನಡೆಸಿ ತನಿಖೆಗೆ ಆಗ್ರಹಿಸಿದ್ರು. ಇದೆಲ್ಲಾ ಬೆಳವಣೆಗೆಯಿಂದ ಶವ ಹೂತ್ತಿಟ್ಟ ಆರೋಪ ಬಗ್ಗೆ ಹಿಂದಿರುವವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಸತ್ಯಾಂಶ ಹೊರಬಿದಿದ್ದೆ.
ಸದ್ಯ ಈ ಎಲ್ಲಾ ಬೆಳವಣೆಗೆ ನಡವೆ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಅಪಪ್ರಚಾರ ಮಾಡ್ತಿರೋರ ವಿರುದ್ಧ ಪವನ್ ಕಲ್ಯಾಣ್ ಧ್ವನಿ ಎತ್ತಿರೋದು ಭಾರೀ ಕುತೂಹಲಕ್ಕೆ ಎಡೆಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ