/newsfirstlive-kannada/media/media_files/2025/08/08/huma_qureshi-2025-08-08-11-45-48.jpg)
ನವದೆಹಲಿ: ಬೈಕ್ ಪಾರ್ಕಿಂಗ್ ಗಲಾಟೆಯಲ್ಲಿ ಹಿಂದಿ ಸಿನಿಮಾದ ಖ್ಯಾತ ನಟಿ ಹುಮಾ ಖುರೇಷಿ ಅವರ ಸೋದರ ಸಂಬಂಧಿಯನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಜೀವ ತೆಗೆದಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ದೆಹಲಿ ನಗರದ ನಿಜಾಮುದ್ದೀನ್ ಏರಿಯಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಹಿಂದಿ ಸಿನಿಮಾದ ನಟಿ ಹುಮಾ ಖುರೇಷಿ ಅವರ ಸೋದರ ಸಂಬಂಧಿ ಆಸಿಫ್ ಖುರೇಷಿ ಜೀವ ಕಳೆದುಕೊಂಡವರು. ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಚೂಪಾದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:21 ವರ್ಷದ ಯುವತಿ ಮೇಲೆ ಗುಂಡಿನ ದಾಳಿ.. ಆಸ್ಪತ್ರೆಯಲ್ಲಿ ನರಳಿ ನರಳಿ ಜೀವ ಬಿಟ್ಟ ವಿದ್ಯಾರ್ಥಿನಿ!
ಗುರುವಾರ ರಾತ್ರಿ (ಆ.7)ಯಂದು ರಾತ್ರಿ 10 ಗಂಟೆ ಸುಮಾರಿಗೆ ಆಸಿಫ್ ಖುರೇಷಿ ಮನೆ ಬಳಿ ಇಬ್ಬರು ಆರೋಪಿಗಳು ಬೈಕ್ ಪಾರ್ಕಿಂಗ್ ಮಾಡಿದ್ದರು. ಈ ಸಂಬಂಧ ಬೈಕ್ ಆ ಪಕ್ಕಕ್ಕೆ ನಿಲ್ಲಿಸಿ ಎಂದು ಅವರಿಗೆ ಖುರೇಷಿ ಹೇಳಿದ್ದಾರೆ. ಇದರಿಂದ ಕೋಪಿತರಾದ ದುಷ್ಕರ್ಮಿಗಳು ಖುರೇಷಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ.
ವಾಗ್ವಾದ ನಡುವೆ ಒಬ್ಬ ಆರೋಪಿ ಹೋಗಿ ಚೂಪಾದ ಆಯುಧ ತಂದು ಆಸಿಫ್ ಖುರೇಷಿಗೆ ಇರಿದಿದ್ದಾನೆ. ತಕ್ಷಣ ಆಸಿಫ್ ಪತ್ನಿ ಶಾಹೀನ್ ಕಿರುಚಿಕೊಂಡು ತನ್ನ ಸೋದರ ಮಾವನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಆಸಿಫ್ ಖುರೇಷಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಗಾಯಾಳುವನ್ನು ಕೈಲಾಸದ ಪೂರ್ವದಲ್ಲಿರುವ ನ್ಯಾಷನಲ್ ಹಾರ್ಟ್ ಇನ್ಸ್ಟಿಟಿಟ್ಯೂಟ್ಗೆ ಸಾಗಿಸಲಾಗಿತ್ತು. ಆದರೆ ಒಂದೂವರೆ ಗಂಟೆ ಮೊದಲೇ ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ