/newsfirstlive-kannada/media/media_files/2025/09/23/police-2025-09-23-16-04-42.jpg)
ಅಹಮದಾಬಾದ್: ತಾನು ಪ್ರೀತಿಯಿಂದ ಸಾಕಿದ್ದ ಶ್ವಾನದಿಂದ ಪೊಲೀಸ್​ ಅಧಿಕಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಶ್ವಾನದ ಉಗುರು ತಗುಲಿದ ಪರಿಣಾಮ, ಪೊಲೀಸ್​ ಅಧಿಕಾರಿ ರೇಬಿಸ್​ ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್​ನ ಅಹಮದಾಬಾದ್‌ನಲ್ಲಿನ ಕೆಡಿ ಆಸ್ಪತ್ರೆಯಲ್ಲಿ ನಡೆದಿದೆ.
ಅಸಲಿಗೆ ಆಗಿದ್ದೇನು?
ಅಹಮಾಬಾದ್​ನ ಸಿಟಿ ಕಂಟ್ರೋಲ್​ ರೂಮ್​ನಲ್ಲಿ ಪೊಲೀಸ್​ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪ್ರೀತಿಯಿಂದ ಸಾಕಿದ್ದ ಜರ್ಮನ್ ಶೆಫರ್ಡ್ ಶ್ವಾನವನ್ನ ದಿನಾಲೂ ವಾಕಿಂಗ್​ ಕರೆದುಕೊಂಡು ಹೋಗುತ್ತಿದ್ದರು. ಅದರಂತೆ ಒಂದು ದಿನ ಜರ್ಮನ್ ಶೆಫರ್ಡ್ ನಾಯಿಯ ಉಗುರು ಪೊಲೀಸ್ ಇನ್ಸ್‌ಪೆಕ್ಟರ್ ಕೈಯನ್ನ ಪರಚಿದೆ.
ಆದರೆ ಇದರಿಂದ ಏನು ಆಗಲ್ಲ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ವನರಾಜ್ ಮಂಜರಿಯಾ ಸುಮ್ಮನೆ ಇದ್ದರು. ಯಾವುದೇ ಡಾಕ್ಟರ್​ಗಳ ಸಂಪರ್ಕ ಮಾಡಿರಲಿಲ್ಲ. ಆದರೆ ದಿನ ಕಳೆದಂತೆ ಅವರ ವರ್ತನೆ ಬದಲಾವಣೆ ಆಗುತ್ತ ಸಾಗಿತು. ಹೀಗಾಗಿ ಅವರನ್ನು ಅಹಮದಾಬಾದ್‌ನಲ್ಲಿರುವ ಕೆಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆವಾಗಲೇ ರೇಬಿಸ್ ಬಂದಿರುವುದು ತಿಳಿಸಲಾಗಿತ್ತು.​
ಅದಾಗ್ಯೂ ಅವರಿಗೆ ಚಿಕಿತ್ಸೆ ಕೊಡಿಸಲಾಗ್ತಿತ್ತು. ಆದ್ರೆ ದುರಾದೃಷ್ಟವಶಾತ್​ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಾನು ಪ್ರೀತಿಯಿಂದ ಸಾಕಿದ್ದ ಶ್ವಾನದಿಂದಲೇ ಪೊಲೀಸ್​ ಇನ್ಸ್​ಪೆಕ್ಟರ್​ ಪ್ರಾಣ ಕಳೆದುಕೊಂಡಿದ್ದಾರೆ. ರೇಬಿಸ್​ ದೇಹದಲ್ಲಿರುವ ನರಮಂಡಲಕ್ಕೆ ಹಾನಿ ಮಾಡುವುದರಿಂದ ಯಾರೇ ಆಗಲಿ ಬೇಗ ಪ್ರಾಣ ಕಳೆದುಕೊಳ್ಳುತ್ತಾರೆ. ಈವರೆಗೂ ರೇಬಿಸ್​ಗೆ ಸರಿಯಾದ ಚಿಕಿತ್ಸೆ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಒಂದು ಮೊಬೈಲ್ ನಂಬರ್​ಗೆ ಎಷ್ಟು ಆಧಾರ್​ ಕಾರ್ಡ್ ಲಿಂಕ್ ಮಾಡಬಹುದು?