Advertisment

ಮಹಿಳೆಯಿಂದ ಖಾರದ ಪುಡಿ ಎರಚಿ, ಚಿನ್ನಾಭರಣ ದರೋಡೆಗೆ ಯತ್ನ.. ಹಿಗ್ಗಾಮುಗ್ಗ ಥಳಿಸಿದ ಸಿಬ್ಬಂದಿ..!

ಗ್ರಾಹಕರ ವೇಷದಲ್ಲಿ ಮಹಿಳೆಯೊಬ್ಬರು ಮುಸುಕು  ಧರಿಸಿಕೊಂಡು ಬಂದಿದ್ದಾಳೆ. ಈ ವೇಳೆ ಅಂಗಡಿಯಲ್ಲಿದ್ದ ಸಿಬ್ಬಂದಿ ಜೊತೆ ಚಿನ್ನಾಭರಣಗಳ ಬಗ್ಗೆ ವಿಚಾರಿಸುತ್ತ ಸಡನ್ ಆಗಿ ತಾನು ತಂದಂತಹ ಖಾರದ ಪುಡಿಯನ್ನು ಆತನ ಮೇಲೆ ಎರಚಿದ್ದಾಳೆ.

author-image
Bhimappa
Gujarat_women_Stole_gold_failed_New
Advertisment

ಗಾಂಧಿನಗರ: ಖಾರದ ಪುಡಿ ಎರಚಿ ದರೋಡೆ ಮಾಡಲು ಯತ್ನಿಸಿದ್ದ ಮಹಿಳೆಯೊಬ್ಬರಿಗೆ ಚಿನ್ನದ ಅಂಗಡಿ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದಂತ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆಯು ಗುಜರಾತ್​ನ ಅಹಮದಾಬಾದ್​ನ ರಾನಿಪ್ ಎನ್ನುವ ಪ್ರದೇಶದಲ್ಲಿ ನಡೆದಿದೆ. 

Advertisment

ಜ್ಯೂವೆಲರಿ ಶಾಪ್​ಗೆ ಆಭರಣಗಳನ್ನು ಖರೀದಿಸಲು ಗ್ರಾಹಕರ ವೇಷದಲ್ಲಿ ಮಹಿಳೆಯೊಬ್ಬರು ಮುಸುಕು  ಧರಿಸಿಕೊಂಡು ಬಂದಿದ್ದಾಳೆ. ಈ ವೇಳೆ ಅಂಗಡಿಯಲ್ಲಿದ್ದ ಸಿಬ್ಬಂದಿ ಜೊತೆ ಚಿನ್ನಾಭರಣಗಳ ಬಗ್ಗೆ ವಿಚಾರಿಸುತ್ತ ಸಡನ್ ಆಗಿ ತಾನು ತಂದಂತಹ ಖಾರದ ಪುಡಿಯನ್ನು ಆತನ ಮೇಲೆ ಎರಚಿದ್ದಾಳೆ. ಆದರೆ ಸಿಬ್ಬಂದಿ ಕಣ್ಣಿಗೆ ಬೀಳದಂತೆ ತಕ್ಷಣ ತಪ್ಪಿಸಿಕೊಂಡಿರುವುದು ವಿಡಿಯೋದಿಂದ ಗೊತ್ತಾಗುತ್ತದೆ. 

ಇದನ್ನೂ ಓದಿ: ಮಾಲಿಯ ಕೊಬ್ರಿಯಲ್ಲಿ 5 ಭಾರತೀಯ ಉದ್ಯೋಗಿಗಳು ಕಿಡ್ನಾಪ್.. ಮುಸುಕು ಧರಿಸಿದವರಿಂದ ಕೃತ್ಯ!

Gujarat_women_Stole_gold_failed

ಇದರಿಂದ ಕುಪಿತನಾದ ಚಿನ್ನದಂಗಡಿ ಸಿಬ್ಬಂದಿ ಮಹಿಳೆನ ಹಿಡಿದು ಹೊಡೆದು, ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಬಾರಿಸಿದ್ದಾನೆ. ಕೇವಲ 16 ಸೆಕೆಂಡ್​ನಲ್ಲಿ 17 ಬಾರಿ ಹೊಡೆದಿದ್ದಾನೆ. ಅಲ್ಲದೇ ಕಾಲಿನಲ್ಲಿ ಒದ್ದು ಬಾಗಿಲಿನಿಂದ ಹೊರ ಹಾಕಿದ್ದಾನೆ. ಆದರೆ ಆ ಮಹಿಳೆ ಯಾರು ಎಂಬುದು ಗುರುತು ಪತ್ತೆ ಆಗಿಲ್ಲ ಎನ್ನಲಾಗಿದೆ. 

Advertisment

ಸದ್ಯ ಈ ಸಂಬಂಧ ಪೊಲೀಸರು ಆ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ. ಸಿಸಿಟಿವಿಯಲ್ಲಿನ ದೃಶ್ಯಗಳನ್ನು ಆಧರಿಸಿ ಮಹಿಳೆ ಯಾರು, ಯಾಕೆ ದರೋಡೆಗೆ ಯತ್ನಿಸಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದು ಬರಲಿದೆ. ರಾನಿಪ್ ಠಾಣೆಯ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಳು ಎಂದು ಹೇಳಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

gujarath Gold
Advertisment
Advertisment
Advertisment