/newsfirstlive-kannada/media/media_files/2026/01/28/ajit-pawar-4-2026-01-28-10-10-33.jpg)
ಮಹಾರಾಷ್ಟ್ರದ ರಾಜಕಾರಣದಲ್ಲಿ ಇಂದು ಅತ್ಯಂತ ಆಘಾತಕಾರಿ ಮತ್ತು ಕರಾಳ ಘಟನೆಯೊಂದು ಸಂಭವಿಸಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿಯಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಸಂಭವಿಸಿದ ಈ ದುರಂತದಲ್ಲಿ ವಿಮಾನವು ಪೀಸ್ ಪೀಸ್ ಆಗಿದ್ದು, ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸಿದೆ.
ಏನಿದು ಘಟನೆ?
ಇಂದು ಬಾರಾಮತಿಯಲ್ಲಿ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಅವರ 5-6 ಪ್ರಮುಖ ಸಭೆಗಳಿದ್ದವು. ಈ ಸಭೆಗಳಲ್ಲಿ ಭಾಗವಹಿಸಲು ಅವರು ಎಂದಿನಂತೆ ಇಂದು ಬೆಳಿಗ್ಗೆ ವಿಮಾನದ ಮೂಲಕ ಹೊರಟಿದ್ದರು. ಆದರೆ, ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹೊತ್ತಿಗೆ ವಿಮಾನವು ನಿಯಂತ್ರಣ ತಪ್ಪಿ ಪತನಗೊಂಡಿದೆ.
ಪೀಸ್ ಪೀಸ್ ಆದ ವಿಮಾನ: ರಕ್ತಸಿಕ್ತ ದೃಶ್ಯ
ಘಟನಾ ಸ್ಥಳದಿಂದ ಹೊರಬಂದಿರುವ ವಿಡಿಯೋಗಳು ಎದೆನಡುಗಿಸುವಂತಿವೆ. ವಿಮಾನವು ನಜ್ಜುಗುಜ್ಜಾಗಿ ಹರಿದು ಹಂಚಿಹೋಗಿದೆ. ಸುತ್ತಲೂ ದಟ್ಟವಾದ ಹೊಗೆ ಆವರಿಸಿದ್ದು, ವಿಮಾನದಲ್ಲಿದ್ದವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನದಲ್ಲಿ ಅಜಿತ್ ಪವಾರ್ ಸೇರಿದಂತೆ ಒಟ್ಟು 6 ಜನರಿದ್ದರು.
ಇದನ್ನೂ ಓದಿ:Breaking News: ಮಹಾರಾಷ್ಟ್ರ DCM ಅಜಿತ್ ಪವರ್ ಪ್ರಯಾಣಿಸ್ತಿದ್ದ ವಿಮಾನ ಪತನ; ಹೆಚ್ಚಿದ ಆತಂಕ
/filters:format(webp)/newsfirstlive-kannada/media/media_files/2026/01/28/ajit-pawar-3-2026-01-28-09-52-29.jpg)
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ಮೂಲಗಳ ಪ್ರಕಾರ, ಅಪಘಾತದ ತೀವ್ರತೆಗೆ ವಿಮಾನದಲ್ಲಿದ್ದವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಸುದ್ದಿ ಹರಿದಾಡುತ್ತಿದೆ. ತಮ್ಮ ನೆಚ್ಚಿನ 'ಅಜಿತ್ ದಾದಾ' ಇನ್ನಿಲ್ಲ ಎಂಬ ಸುದ್ದಿ ಕೇಳಿ ಬಾರಾಮತಿಯ ಜನತೆ ಕಣ್ಣೀರಲ್ಲಿ ಮುಳುಗಿದ್ದಾರೆ.
ಬಾರಾಮತಿಯಲ್ಲಿ ಶೋಕ ಸಾಗರ
ಅಜಿತ್ ಪವಾರ್ ಅವರು ಬಾರಾಮತಿ ಕ್ಷೇತ್ರದ ಶಾಸಕರಾಗಿ ಅಲ್ಲಿನ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಂದು ಅವರು ತಮ್ಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಾವಿರಾರು ಜನ ಕಾಯುತ್ತಿದ್ದರು. ಆದರೆ ವಿಮಾನ ನಿಲ್ದಾಣ ತಲುಪುವ ಮೊದಲೇ ಸಂಭವಿಸಿದ ಈ ವಿಧಿಲೀಲೆ ಇಡೀ ಮಹಾರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಹೆಚ್ಚಿನ ಮಾಹಿತಿಗಾಗಿ ವೈದ್ಯರ ಮತ್ತು ಅಧಿಕೃತ ಮೂಲಗಳ ವರದಿಗಾಗಿ ಕಾಯಲಾಗುತ್ತಿದೆ.
ಇದನ್ನೂ ಓದಿ:Ajit Pawar Death News Live: ವಿಮಾನ ಅಪಘಾತದಲ್ಲಿ ಒಟ್ಟು 6 ಮಂದಿ ದುರಂತ ಅಂತ್ಯ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us