Ajit Pawar Death News Live: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮಹಾರಾಷ್ಟ್ರದಿಂದ ಕೆಟ್ಟ ಸುದ್ದಿಯೊಂದು ಹೊರಬಂದಿದೆ. ಎನ್‌ಸಿಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸ್ತಿದ್ದ ವಿಮಾನ ಮಹಾರಾಷ್ಟ್ರದ ಬಾರಾಮತಿಯಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ 6 ಪ್ರಯಾಣಿಕರಿದ್ದರು, ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

author-image
Ganesh Kerekuli
Updated On
New Update
Ajit Pawar (3)
Advertisment

ಮಹಾರಾಷ್ಟ್ರದಿಂದ ಕೆಟ್ಟ  ಸುದ್ದಿಯೊಂದು ಹೊರಬಂದಿದೆ. ಎನ್‌ಸಿಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸ್ತಿದ್ದ ವಿಮಾನ ಮಹಾರಾಷ್ಟ್ರದ ಬಾರಾಮತಿಯಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ 6 ಪ್ರಯಾಣಿಕರಿದ್ದರು, ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಮಾನ ಅಪಘಾತಕ್ಕೆ ಸಂಬಂಧಿಸಿದ ಲೈವ್​ ಅಪ್​ಡೇಟ್ಸ್ ಇಲ್ಲಿದೆ.. 

ಇದನ್ನೂ ಓದಿ:Breaking News: ಮಹಾರಾಷ್ಟ್ರ DCM ಅಜಿತ್ ಪವರ್ ಪ್ರಯಾಣಿಸ್ತಿದ್ದ ವಿಮಾನ ಪತನ; ಹೆಚ್ಚಿದ ಆತಂಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

  • Jan 28, 2026 11:45 IST

    ಸಂಜಯ ಗಾಂಧಿ, ಮಾಧವ್ ರಾವ್ ಸಿಂಧಿಯಾ, ವೈಎಸ್‌ಆರ್‌... ಹೆಲಿಕಾಪ್ಟರ್, ವಿಮಾನ ದುರಂತದಲ್ಲಿ ಸಾವಿಗೀಡಾದ ರಾಜಕೀಯ ನಾಯಕರು

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಿರಿಯ ಎನ್‌ಸಿಪಿ ನಾಯಕನ ನಿಧನವನ್ನು ಔಪಚಾರಿಕವಾಗಿ ದೃಢಪಡಿಸಿದೆ. ಸಂಜಯ ಗಾಂಧಿ, ಮಾಧವ್ ರಾವ್ ಸಿಂಧಿಯಾ, ವೈಎಸ್‌ಆರ್‌... ಹೆಲಿಕಾಪ್ಟರ್, ವಿಮಾನ ದುರಂತದಲ್ಲಿ ಸಾವಿಗೀಡಾದ ರಾಜಕೀಯ ನಾಯಕರು



  • Jan 28, 2026 11:45 IST

    ಅಪಘಾತ ಘಟನೆಯ ವಿವರ ಹಾಗೂ ಅಜಿತ್ ಪವಾರ್ ರಾಜಕೀಯ ಹಿನ್ನಲೆ

    Ajit Pawar (3)

    ಅಪಘಾತ ನಡೆದಿದ್ದೇಗೆ?


    ಬೆಳಿಗ್ಗೆ ಸುಮಾರು 8:45 ಕ್ಕೆ, ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನ ಅಪಘಾತ.
    ಸಾವು-ನೋವು: ವಿಮಾನದಲ್ಲಿದ್ದ ಅಜಿತ್ ಪವಾರ್ ಸೇರಿದಂತೆ ಐದೂ ಮಂದಿ (ಅಂಗರಕ್ಷಕ, ಸಹಾಯಕ ಮತ್ತು ಇಬ್ಬರು ಪೈಲಟ್‌ಗಳು) ಸ್ಥಳದಲ್ಲೇ ದುರ್ಮರಣ.
    ರನ್‌ವೇ ತಲುಪುವ 100 ಅಡಿಗಳ ಮೊದಲೇ ವಿಮಾನವು ಕೆಳಗೆ ಬಿದ್ದು ಸ್ಫೋಟಗೊಂಡಿದೆ ಎಂದ ಪ್ರತ್ಯಕ್ಷದರ್ಶಿ

    ಅಜಿತ್ ಪವಾರ್ ರಾಜಕೀಯ ಹಿನ್ನೆಲೆ


    ನಿಧನರಾದ ಸಮಯದಲ್ಲಿ ಅವರು ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಮಹಾರಾಷ್ಟ್ರದ 8ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
    ಅವರು ಮಹಾಯುತಿ ಮೈತ್ರಿಕೂಟದ ಭಾಗವಾಗಿದ್ದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (NCP) ಬಣದ ಮುಖ್ಯಸ್ಥರಾಗಿದ್ದರು.
    "ದಾದಾ" ಎಂದೇ ಜನಪ್ರಿಯರಾಗಿದ್ದ ಅವರು, ಮಹಾರಾಷ್ಟ್ರದ ಇತಿಹಾಸದಲ್ಲಿ ಆರು ಬಾರಿ ಉಪಮುಖ್ಯಮಂತ್ರಿಯಾದ ದಾಖಲೆ ಹೊಂದಿದ್ದಾರೆ.
    ಕುಟುಂಬ: ಹಿರಿಯ ನಾಯಕ ಶರದ್ ಪವಾರ್ ಅವರ ಸೋದರ ಸಂಬಂಧಿಯಾಗಿದ್ದ ಇವರಿಗೆ ಪತ್ನಿ ಸುನೇತ್ರಾ ಪವಾರ್ ಮತ್ತು ಇಬ್ಬರು ಪುತ್ರರಿದ್ದಾರೆ.



  • Jan 28, 2026 11:27 IST

    ವಿಮಾನ ಅಪಘಾತಕ್ಕೆ ದಟ್ಟ ಮಂಜು,  ಕುಸಿದ  ಗೋಚರತೆ ಕಾರಣವೇ?

    ಪುಣೆ ಜಿಲ್ಲೆ ಮತ್ತು ಬಾರಾಮತಿ ಪ್ರದೇಶದಲ್ಲಿ ಭಾರೀ ಮಂಜಿನಿಂದಾಗಿ ಕುಸಿದ ಗೋಚರತೆ ಮಟ್ಟವು( low visibility level)  ಅಪಘಾತಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ಸೂಚಿಸಿವೆ. ದಟ್ಟವಾದ ಮಂಜು ವಿಮಾನವು ತನ್ನ ಹಾದಿಯನ್ನು ಕಾಯ್ದುಕೊಳ್ಳಲು ಅಡ್ಡಿಯಾಗಿದೆ ಎಂದು ನಂಬಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ವಿಮಾನವು ನಿಯಂತ್ರಣ ಕಳೆದುಕೊಂಡು ಬಂಡೆಗೆ ಡಿಕ್ಕಿ ಹೊಡೆದಿದ್ದು, ದುರಂತಕ್ಕೆ ಕಾರಣವಾಯಿತು.



  • Jan 28, 2026 11:09 IST

    6 ಬಾರಿ DCM.. ರೋಚಕ ತಿರುವುಗಳಿಂದ ಕೂಡಿತ್ತು ಅಜಿತ್ ಪವಾರ್ ರಾಜಕೀಯ ಜೀವನ..!

    ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರಾದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರು ಬುಧವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಪ್ರಯತ್ನದ ವೇಳೆ ಈ ದುರಂತ ಸಂಭವಿಸಿದ್ದು, ಮಹಾರಾಷ್ಟ್ರದ ರಾಜಕೀಯದ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಂಡಂತಾಗಿದೆ. ಅವರ ರಾಜಕೀಯ ಜರ್ನಿ ಹೇಗಿತ್ತು ಎಂದು ತಿಳಿದಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ: 6 ಬಾರಿ DCM.. ರೋಚಕ ತಿರುವುಗಳಿಂದ ಕೂಡಿತ್ತು ಅಜಿತ್ ಪವಾರ್ ರಾಜಕೀಯ ಜೀವನ..!



  • Jan 28, 2026 10:53 IST

    ದುಃಖ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ

    ಡಿಸಿಎಂ ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ಅವರು ಸಂತಾಪ ಸೂಚಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಧೈರ್ಯ ಮತ್ತು ಶಕ್ತಿಯನ್ನ ನೀಡುವಂತೆ ಮೋದಿ ಪ್ರಾರ್ಥಿಸಿದ್ದಾರೆ.



  • Jan 28, 2026 10:42 IST

    ಹೆಚ್​ಡಿ ಕುಮಾರಸ್ವಾಮಿ ಸಂತಾಪ

    ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಮಹಾರಾಷ್ಟ್ರ ಡಿಸಿಎಂ, ಪ್ರಮುಖ ರಾಜಕಾರಣಿ ಅವ್ರ ನಿಧನ ಆಘಾತ ಆಗಿದೆ. ಬೆಳಗ್ಗೆ ಬಾರಾಮತಿ ಹೋಗುವಾಗ ಅಪಘಾತ ಆಗಿದೆ. ಸಹಕಾರ ಮತ್ತು ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರ ಅವರ ಸಾವು ಇವತ್ತು ಎಲ್ಲರಿಗೂ ಆಘಾತವನ್ನು ಉಂಟು ಮಾಡಿದ ಮಹಾರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟ ಆಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಬರಿಸುವ ಶಕ್ತಿ ಸಿಗಲಿ ಅಂತಾ  ಪ್ರಾರ್ಥಿಸುತ್ತೇನೆ ಎಂದಿದ್ದಾರೆ. 



  • Jan 28, 2026 10:39 IST

    ವಿಐಪಿಗಳ ಪ್ರಯಾಣಕ್ಕೆ ಹೆಸರುವಾಸಿ ಲಿಯರ್ ಜೆಟ್ 45

    ಅಜಿತ್ ಪವಾರ್ ವಿಐಪಿ ವಿಮಾನ ಲಿಯರ್ ಜೆಟ್ 45ನಲ್ಲಿ ಪ್ರಯಾಣಿಸುತ್ತಿದ್ದರು. ಜಗತ್ತಿನ ಐಷಾರಾಮಿ ಮತ್ತು ವೇಗದ ಪ್ರಯಾಣಕ್ಕೆ ಲಿಯರ್ ಜೆಟ್ 45 (Learjet 45) ವಿಮಾನ ಹೆಸರುವಾಸಿ. ಇದು ಕೇವಲ ವಿಮಾನವಲ್ಲ, ಕಾರ್ಪೊರೇಟ್ ಜಗತ್ತು ಮತ್ತು ವಿಐಪಿಗಳ ಅತ್ಯಾಧುನಿಕ ಜೀವನಶೈಲಿಯ ಭಾಗವಾಗಿದೆ. ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಅಜಿತ್ ಪವರ್ ನಿಧನ.. ದುರಂತಕ್ಕೆ ಒಳಗಾದ ‘ಲಿಯರ್ ಜೆಟ್​’ನ ಸಾಮರ್ಥ್ಯ ಏನು..?



  • Jan 28, 2026 10:18 IST

    ಅಜಿತ್ ಪವಾರ್ ಸಾವಿನ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಮೊದಲ ಹೇಳಿಕೆ

    ವಿಮಾನ ಅಪಘಾತದ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನ್ನ ಮೊದಲ ಹೇಳಿಕೆ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸಂಪರ್ಕಿಸಿ ಬಾರಾಮತಿ ವಿಮಾನ ಅಪಘಾತದ ಬಗ್ಗೆ ಮಾಹಿತಿ ಮತ್ತು ದುರಂತದ ಅಪ್​ಡೇಟ್ಸ್ ಪಡೆದರು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.



  • Jan 28, 2026 10:15 IST

    ಪೀಸ್ ಪೀಸ್ ಆದ ವಿಮಾನ: ರಕ್ತಸಿಕ್ತ ದೃಶ್ಯ

    ಘಟನಾ ಸ್ಥಳದಿಂದ ಹೊರಬಂದಿರುವ ವಿಡಿಯೋಗಳು ಎದೆನಡುಗಿಸುವಂತಿವೆ. ವಿಮಾನವು ನಜ್ಜುಗುಜ್ಜಾಗಿ ಹರಿದು ಹಂಚಿಹೋಗಿದೆ. ಸುತ್ತಲೂ ದಟ್ಟವಾದ ಹೊಗೆ ಆವರಿಸಿದ್ದು, ವಿಮಾನದಲ್ಲಿದ್ದವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನದಲ್ಲಿ ಅಜಿತ್ ಪವಾರ್ ಸೇರಿದಂತೆ ಒಟ್ಟು 6 ಜನರಿದ್ದರು. 



  • Jan 28, 2026 09:59 IST

    ಪುಣೆ ಗ್ರಾಮೀಣ ಎಸ್ಪಿ ಸಂದೀಪ್ ಸಿಂಗ್ ಹೇಳಿದ್ದೇನು..?

    ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂದೀಪ್ ಸಿಂಗ್ ಅವರ ಪ್ರಕಾರ, ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.  ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ತಿಳಿಸಿದ್ದಾರೆ. 



  • Jan 28, 2026 09:58 IST

    ಮೂರು ಮೃತದೇಹಗಳು ಪತ್ತೆ – ಗ್ರಾಮೀಣ ಎಸ್ಪಿ

    ಈ ಅಪಘಾತದಲ್ಲಿ ಇದುವರೆಗೆ 3 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಬಾರಾಮತಿ ಗ್ರಾಮೀಣ ಎಸ್‌ಪಿ ತಿಳಿಸಿದ್ದಾರೆ. 



  • Jan 28, 2026 09:57 IST

    ದೆಹಲಿಯಿಂದ ಬಾರಾಮತಿಗೆ ತೆರಳುತ್ತಿರುವ ಪವಾರ್ ಕುಟುಂಬ

    ಸುಪ್ರಿಯಾ ಸುಳೆ, ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ದೆಹಲಿಯಿಂದ ಬಾರಾಮತಿಗೆ ತೆರಳಲಿದ್ದಾರೆ. ನಿರ್ಗಮಿಸುವ ಮೊದಲು, ಮೂವರು ನಾಯಕರು ಪ್ರಸ್ತುತ ಶರದ್ ಪವಾರ್ ಅವರ ನಿವಾಸದಲ್ಲಿ ಒಟ್ಟಿಗೆ ಇದ್ದಾರೆ. 



  • Jan 28, 2026 09:57 IST

    ಅಜಿತ್ ಪವಾರ್ ನಿಧನ

    ಅಜಿತ್ ಪವಾರ್ ನಿಧನರಾಗಿದ್ದಾರೆ ಎಂದು ಡಿಜಿಸಿಎ ಘೋಷಿಸಿದೆ.



  • Jan 28, 2026 09:56 IST

    ವಿಮಾನ ದುರಂತ



plane crash Ajit Pawar
Advertisment