/newsfirstlive-kannada/media/media_files/2026/01/28/ajit-pawar-6-2026-01-28-11-07-09.jpg)
ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರಾದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರು ಬುಧವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಪ್ರಯತ್ನದ ವೇಳೆ ಈ ದುರಂತ ಸಂಭವಿಸಿದ್ದು, ಮಹಾರಾಷ್ಟ್ರದ ರಾಜಕೀಯದ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಂಡಂತಾಗಿದೆ.
ಬಾಲ್ಯ ಮತ್ತು ರಾಜಕೀಯ ಪ್ರವೇಶ
ಜುಲೈ 22, 1959 ರಂದು ಅಹಮದ್‌ನಗರ ಜಿಲ್ಲೆಯ ದೇವ್ಲಾಲಿ ಪ್ರವರಾದಲ್ಲಿ ಅಜಿತ್ ಪವಾರ್ ಜನಿಸಿದರು. ಇವರ ಕುಟಂಬ ಸಾರ್ವಜನಿಕ ಜೀವನದ ಜೊತೆ ನಂಟು ಹೊಂದಿತ್ತು. ಅವರಿಗೆ 18 ವರ್ಷವಿದ್ದಾಗ ತಂದೆ ಅನಂತರಾವ್ ಪವಾರ್ ನಿಧನರಾದರು. ತಮ್ಮ ಚಿಕ್ಕಪ್ಪ ಶರದ್ ಪವಾರ್ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಕಾಲಿಟ್ಟ ಅಜಿತ್, 1982 ರಲ್ಲಿ ‘ಸಕ್ಕರೆ ಸಹಕಾರಿ ಸಂಘ’ದ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದರು. ಪಶ್ಚಿಮ ಮಹಾರಾಷ್ಟ್ರದ ಸಹಕಾರಿ ಸಂಸ್ಥೆಗಳು, ಹಾಲು ಒಕ್ಕೂಟಗಳು ಮತ್ತು ಬ್ಯಾಂಕುಗಳ ಮೂಲಕ ತಳಮಟ್ಟದಲ್ಲಿ ಬಲಿಷ್ಠ ನೆಟ್‌ವರ್ಕ್ ಸ್ಥಾಪಿಸಿ ಮೇಲ್ಮಟ್ಟಕ್ಕೆ ಬಂದರು.
ಇದನ್ನೂ ಓದಿ: ಅಜಿತ್ ಪವರ್ ನಿಧನ.. ದುರಂತಕ್ಕೆ ಒಳಗಾದ ‘ಲಿಯರ್ ಜೆಟ್​’ನ ಸಾಮರ್ಥ್ಯ ಏನು..?
/filters:format(webp)/newsfirstlive-kannada/media/media_files/2026/01/28/ajit-pawar-5-2026-01-28-10-31-27.jpg)
ಬಾರಾಮತಿಯ ಅವಿನಾಭಾವ ನಂಟು
1991 ರಲ್ಲಿ ಮೊದಲ ಬಾರಿಗೆ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಶರದ್ ಪವಾರ್ ಕೇಂದ್ರದಲ್ಲಿ ರಕ್ಷಣಾ ಸಚಿವರಾದಾಗ, ಅಜಿತ್ ಅವರು ಆ ಕ್ಷೇತ್ರವನ್ನು ಬಿಟ್ಟುಕೊಟ್ಟು ರಾಜ್ಯ ರಾಜಕಾರಣಕ್ಕೆ ಮರಳಿದರು. ಅದೇ ವರ್ಷ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಅವರು, ಅಲ್ಲಿಂದ ಸತತ ಮೂರು ದಶಕಗಳ ಕಾಲ ಅದೇ ಕ್ಷೇತ್ರವನ್ನು ಪ್ರತಿನಿಧಿಸಿ ದಾಖಲೆ ಬರೆದಿದ್ದರು.
ಆಡಳಿತಾತ್ಮಕ ದಕ್ಷತೆ ಮತ್ತು ಅಧಿಕಾರ
ಅಜಿತ್ ಪವಾರ್ ಅವರು ತಮ್ಮ ನೇರ ನಡೆ-ನುಡಿ ಮತ್ತು ಆಡಳಿತಾತ್ಮಕ ದಕ್ಷತೆಗೆ ಹೆಸರಾಗಿದ್ದರು. ಹಣಕಾಸು, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿ ರಾಜ್ಯದ ಬಜೆಟ್ ಮತ್ತು ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಹಾರಾಷ್ಟ್ರದ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (ಆರು ಬಾರಿ) ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೆಗ್ಗಳಿಕೆ ಇವರದ್ದಾಗಿತ್ತು.
/filters:format(webp)/newsfirstlive-kannada/media/media_files/2026/01/28/ajit-pawar-4-2026-01-28-10-10-33.jpg)
ರಾಜಕೀಯ ತಿರುವುಗಳು
ಅಜಿತ್ ಪವಾರ್ ಅವರ ರಾಜಕೀಯ ಜೀವನವು ರೋಚಕ ತಿರುವುಗಳಿಂದ ಕೂಡಿತ್ತು.
- 2019: ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸೇರಿ ಬೆಳ್ಳಂಬೆಳಗ್ಗೆ ರಾಜಭವನದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ ಆ ಸರ್ಕಾರ ಕೇವಲ 80 ಗಂಟೆಗಳ ಕಾಲ ಮಾತ್ರ ಉಳಿಯಿತು.
- 2023: ಎನ್‌ಸಿಪಿ ಪಕ್ಷವನ್ನು ಒಡೆದು ಐದನೇ ಬಾರಿಗೆ ಉಪಮುಖ್ಯಮಂತ್ರಿಯಾದರು. ಇದು ಅವರ ಕಾಕ ಶರದ್ ಪವಾರ್ ಅವರೊಂದಿಗಿನ ದೊಡ್ಡ ರಾಜಕೀಯ ಬಿರುಕಿಗೆ ಕಾರಣವಾಯಿತು.
- 2024: ಡಿಸೆಂಬರ್ 5 ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಆರನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಅಜಿತ್ ಪವರ್ ನಿಧನ.. ಕಣ್ಣೀರಿಟ್ಟ ಬಾರಾಮತಿ ಕ್ಷೇತ್ರದ ಜನ..
/filters:format(webp)/newsfirstlive-kannada/media/media_files/2026/01/28/ajit-pawar-3-2026-01-28-09-52-29.jpg)
ತುಂಬಲಾರದ ನಷ್ಟ
ಅಜಿತ್ ಪವಾರ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಾರಾಮತಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅವರು ಹೊಂದಿದ್ದ ಹಿಡಿತ ಮತ್ತು ಸಂಘಟನಾ ಶಕ್ತಿ ಅದ್ವಿತೀಯವಾಗಿತ್ತು. ಅವರ ನಿಧನವು ಮಹಾರಾಷ್ಟ್ರದ ಮೈತ್ರಿ ರಾಜಕಾರಣ ಮತ್ತು ಪ್ರಾದೇಶಿಕ ಸಮೀಕರಣಗಳಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ರಾಜ್ಯದ ಒಬ್ಬ ದಕ್ಷ ಆಡಳಿತಗಾರ ಮತ್ತು ಹೋರಾಟಗಾರನನ್ನು ಮಹಾರಾಷ್ಟ್ರ ಇಂದು ಕಳೆದುಕೊಂಡಿದೆ.
ಇದನ್ನೂ ಓದಿ: Ajit Pawar Death News Live: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us