ಅಜಿತ್ ಪವರ್ ನಿಧನ.. ದುರಂತಕ್ಕೆ ಒಳಗಾದ ‘ಲಿಯರ್ ಜೆಟ್​’ನ ಸಾಮರ್ಥ್ಯ ಏನು..?

ಜಗತ್ತಿನ ಐಷಾರಾಮಿ ಮತ್ತು ವೇಗದ ಪ್ರಯಾಣಕ್ಕೆ ಲಿಯರ್ ಜೆಟ್ 45 (Learjet 45) ವಿಮಾನ ಹೆಸರುವಾಸಿ. ಇದು ಕೇವಲ ವಿಮಾನವಲ್ಲ, ಕಾರ್ಪೊರೇಟ್ ಜಗತ್ತು ಮತ್ತು ವಿಐಪಿಗಳ ಅತ್ಯಾಧುನಿಕ ಜೀವನಶೈಲಿಯ ಭಾಗವಾಗಿದೆ.

author-image
Ganesh Kerekuli
Ajit Pawar (5)
Advertisment

ಮಹಾರಾಷ್ಟ್ರದ ರಾಜಕಾರಣದಲ್ಲಿ ಇಂದು ಅತ್ಯಂತ ಆಘಾತಕಾರಿ ಮತ್ತು ಕರಾಳ ಘಟನೆಯೊಂದು ಸಂಭವಿಸಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿಯಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ವಿಮಾನ ದುರಂತದಲ್ಲಿ ಒಟ್ಟು 6 ಪ್ರಯಾಣಿಕರು ಮೃತಪಟ್ಟಿದ್ದಾರೆ. 

ಇನ್ನು ಅಜಿತ್ ಪವಾರ್ ವಿಐಪಿ ವಿಮಾನ ಲಿಯರ್ ಜೆಟ್ 45ನಲ್ಲಿ ಪ್ರಯಾಣಿಸುತ್ತಿದ್ದರು. ಜಗತ್ತಿನ ಐಷಾರಾಮಿ ಮತ್ತು ವೇಗದ ಪ್ರಯಾಣಕ್ಕೆ ಲಿಯರ್ ಜೆಟ್ 45 (Learjet 45) ವಿಮಾನ ಹೆಸರುವಾಸಿ. ಇದು ಕೇವಲ ವಿಮಾನವಲ್ಲ, ಕಾರ್ಪೊರೇಟ್ ಜಗತ್ತು ಮತ್ತು ವಿಐಪಿಗಳ ಅತ್ಯಾಧುನಿಕ ಜೀವನಶೈಲಿಯ ಭಾಗವಾಗಿದೆ.

ಇದನ್ನೂ ಓದಿ: ವಿಮಾನ ದುರಂತದಲ್ಲಿ ಅಜಿತ್ ಪವರ್ ನಿಧನ.. ಕಣ್ಣೀರಿಟ್ಟ ಬಾರಾಮತಿ ಕ್ಷೇತ್ರದ ಜನ..

Ajit Pawar (3)

ಏನಿದು ಲಿಯರ್ ಜೆಟ್ 45?

ಲಿಯರ್ ಜೆಟ್ 45 ಒಂದು ಆಧುನಿಕ ಬಿಸಿನೆಸ್ ಜೆಟ್ ವಿಮಾನ. ಇದನ್ನು ಕೆನಡಾದ ಪ್ರಸಿದ್ಧ ಏರೋಸ್ಪೇಸ್ ಸಂಸ್ಥೆಯಾದ ಬಾಂಬಾರ್ಡಿಯರ್ (Bombardier) ಅಭಿವೃದ್ಧಿಪಡಿಸಿದೆ. ಈ ವಿಮಾನವನ್ನು ಪ್ರಮುಖವಾಗಿ ವಿಐಪಿಗಳಿಗಾಗಿ, ದೊಡ್ಡ ಕಂಪನಿಗಳ ಉನ್ನತ ಅಧಿಕಾರಿಗಳಿಗಾಗಿ ಮತ್ತು ವಿಶೇಷ ಚಾರ್ಟರ್ ವಿಮಾನಗಳಲ್ಲಿ ಪ್ರಯಾಣಿಸೋರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಲಿಯರ್ ಜೆಟ್ 45ರ ವಿಶೇಷತೆ..! 

  • ಆರಾಮದಾಯಕ ಪ್ರಯಾಣ: ಈ ವಿಮಾನವು ಅತ್ಯಂತ ಸುಸಜ್ಜಿತ ಮತ್ತು ಐಷಾರಾಮಿ ಕ್ಯಾಬಿನ್  ಹೊಂದಿದೆ. ಸುಮಾರು 8 ಪ್ರಯಾಣಿಕರು ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದು.
  • ದೂರ ಪ್ರಯಾಣದ ಸಾಮರ್ಥ್ಯ: ದೀರ್ಘ ಹಾಗೂ ದೂರದ ಹಾರಾಟಕ್ಕೆ ಹೆಸರುವಾಸಿ. ಪದೇ ಪದೇ ಇಂಧನ ತುಂಬಿಸುವ ಕಿರಿಕಿರಿ ಇಲ್ಲ. ವೇಗವಾಗಿ ಪ್ರಯಾಣಿಸೋದ್ರಿಂದ ಗಣ್ಯರ ಅಮೂಲ್ಯ ಸಮಯ ಉಳಿಸುತ್ತದೆ. 
  • ಅಧಿಕ ವೇಗ: ಇದರ 'ಕ್ರೂಸ್ ಸ್ಪೀಡ್' ಅತ್ಯಂತ ವೇಗವಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ನಿಗದಿತ ಸ್ಥಳವನ್ನು ತಲುಪಲು ನೆರವಾಗುತ್ತದೆ.
  • ಶಕ್ತಿಯುತ ಎಂಜಿನ್‌ಗಳು: ಲಿಯರ್ ಜೆಟ್ 45 ಎರಡು ಶಕ್ತಿಯುತ ಟರ್ಬೋಫ್ಯಾನ್ ಎಂಜಿನ್‌ಗಳನ್ನು ಹೊಂದಿದೆ. ಇವು ವಿಮಾನಕ್ಕೆ ಅದ್ಭುತವಾದ ವೇಗ, ಸ್ಥಿರತೆ ಮತ್ತು ಸುರಕ್ಷಿತವಾದ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ.

ವಿಶ್ವದಾದ್ಯಂತ ಉದ್ಯಮಿಗಳು ಮತ್ತು ರಾಜಕೀಯ ನಾಯಕರು ತಮ್ಮ ತುರ್ತು ಪ್ರಯಾಣಗಳಿಗೆ ಈ ನಂಬಲರ್ಹವಾದ ಲಿಯರ್ ಜೆಟ್ 45 ವಿಮಾನವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರ ವೇಗ ಮತ್ತು ಸುರಕ್ಷತೆ ವಿಮಾನಯಾನ ಕ್ಷೇತ್ರದಲ್ಲಿ ಇದಕ್ಕೆ ವಿಶೇಷ ಸ್ಥಾನವನ್ನು ತಂದುಕೊಟ್ಟಿದೆ.

ಇದನ್ನೂ ಓದಿ: Ajit Pawar Death News Live: ವಿಮಾನ ದುರಂತದಲ್ಲಿ 6 ಮಂದಿ ಸಾವು.. ಮಹಾರಾಷ್ಟ್ರ ಸರ್ಕಾರದಿಂದ ಮೊದಲ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Learjet 45 Baramati Ajit Pawar plane crash
Advertisment