/newsfirstlive-kannada/media/media_files/2026/01/28/ajit-pawar-7-2026-01-28-11-41-02.jpg)
ಮಹಾರಾಷ್ಟ್ರ ರಾಜಕಾರಣದ ‘ದಾದಾ’ ಎಂದೇ ಖ್ಯಾತರಾಗಿದ್ದ, ಆರು ಬಾರಿ ಉಪಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಅಜಿತ್ ಪವಾರ್ (Ajit Pawar) ಅವರ ಅಕಾಲಿಕ ನಿಧನ ದೇಶವನ್ನ ಬೆಚ್ಚಿಬೀಳಿಸಿದೆ. ಇವತ್ತು ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ.
ಆಡಳಿತಾತ್ಮಕ ದಕ್ಷತೆಗೆ ಹೆಸರಾಗಿದ್ದ ಅಜಿತ್ ಪವಾರ್, ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಅವರ ಆಸ್ತಿ ವಿವರಗಳು ಬೆರಗುಗೊಳಿಸುವಂತಿವೆ.
ಒಟ್ಟು ಆಸ್ತಿ 124 ಕೋಟಿ ರೂಪಾಯಿ
ಅಜಿತ್ ಪವಾರ್ ಮತ್ತು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ 124 ಕೋಟಿ ರೂಪಾಯಿಗೂ ಅಧಿಕ. ಇಷ್ಟೊಂದು ಶ್ರೀಮಂತಿಕೆ ಹೊಂದಿದ್ದರೂ ಅಜಿತ್ ಪವಾರ್ ಹೆಸರಿನಲ್ಲಿ ಯಾವುದೇ ಜೀವ ವಿಮೆ (LIC) ಪಾಲಿಸಿ ಇರಲಿಲ್ಲ. ಆದರೆ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಭರ್ಜರಿಯಾಗಿತ್ತು.
ನಗದು ಮತ್ತು ಬ್ಯಾಂಕ್ ಡೆಪಾಸಿಟ್
- ನಗದು: ಪವಾರ್ ಕುಟುಂಬದ ಬಳಿ ಸುಮಾರು 14.12 ಲಕ್ಷ ರೂಪಾಯಿ ನಗದು ಇತ್ತು.
- ಬ್ಯಾಂಕ್ ಬ್ಯಾಲೆನ್ಸ್: ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 6.81 ಕೋಟಿ ರೂಪಾಯಿ ಠೇವಣಿ ಇಡಲಾಗಿತ್ತು. ಇದರಲ್ಲಿ ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರಾ ಪವಾರ್ ಅವರ ಖಾತೆಗಳಲ್ಲಿ ತಲಾ 3 ಕೋಟಿ ರೂಪಾಯಿ ಬ್ಯಾಲೆನ್ಸ್ ಇತ್ತು.
- ಹೂಡಿಕೆ: ಶೇರು ಮಾರುಕಟ್ಟೆ, ಬಾಂಡ್‌ಗಳು ಮತ್ತು ಡಿಬೆಂಚರ್‌ಗಳಲ್ಲಿ ಸುಮಾರು 24 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು.
ಚಿನ್ನಾಭರಣದ ಸಂಗ್ರಹ
ಅಜಿತ್ ಪವಾರ್ ಅವರ ಬಳಿ 38 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದರೆ, ಅವರ ಪತ್ನಿ ಸುನೇತ್ರಾ ಪವಾರ್ ಬಳಿ ಬರೋಬ್ಬರಿ 1.19 ಕೋಟಿ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಆಭರಣಗಳಿದ್ದವು.
ಇದನ್ನೂ ಓದಿ: Ajit Pawar Death News Live: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಅಜಿತ್ ಪವಾರ್ ಅಸಲಿ ಶಕ್ತಿ ಇರುವುದು ಅವರ ಭೂ ಆಸ್ತಿಯಲ್ಲಿ. ಬಾರಾಮತಿ, ಮುಂಬೈ, ಪುಣೆ ಮತ್ತು ದೆಹಲಿಯವರೆಗೆ ಅವರ ಸಾಮ್ರಾಜ್ಯ ಹರಡಿದೆ. ಪತಿ-ಪತ್ನಿಯ ಹೆಸರಿನಲ್ಲಿ 13.21 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಮತ್ತು 37 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಅಜಿತ್ ಪವಾರ್ ಹೆಸರಿನಲ್ಲಿ 4 ಮನೆಗಳಿದ್ದು (ಅಂದಾಜು ಮೌಲ್ಯ 9 ಕೋಟಿ ರೂ.), ಸುನೇತ್ರಾ ಪವಾರ್ ಹೆಸರಿನಲ್ಲಿ 22 ಕೋಟಿ ರೂಪಾಯಿ ಮೌಲ್ಯದ 4 ಫ್ಲಾಟ್‌ಗಳು ಮತ್ತು ಮನೆಗಳಿವೆ. ಪುಣೆಯಲ್ಲಿ ಅವರ ಹೆಸರಿನಲ್ಲಿ 11 ಕೋಟಿ ರೂಪಾಯಿ ಮೌಲ್ಯದ ಒಂದು ವಾಣಿಜ್ಯ ಕಟ್ಟಡವೂ ಇದೆ.
ವಾಹನಗಳ ಹವ್ಯಾಸ
ಅಜಿತ್ ಪವಾರ್ ಸರಳವಾಗಿ ಕಾಣಿಸಿಕೊಂಡರೂ ಅವರ ಬಳಿ ಟೊಯೋಟಾ ಕ್ಯಾಮ್ರಿ, ಹೋಂಡಾ ಸಿಆರ್‌ವಿ ಮತ್ತು ಕೃಷಿಗಾಗಿ ಅತ್ಯಾಧುನಿಕ ಟ್ರ್ಯಾಕ್ಟರ್‌ಗಳು ಹಾಗೂ ಟ್ರೈಲರ್‌ಗಳಿದ್ದವು. ಇವುಗಳ ಒಟ್ಟು ಮೌಲ್ಯ ಸುಮಾರು 75 ಲಕ್ಷ ರೂಪಾಯಿ ಎನ್ನಲಾಗಿದೆ. ಅಜಿತ್ ಪವಾರ್ ಅವರ ಮೇಲೆ ಸುಮಾರು 21.39 ಕೋಟಿ ರೂಪಾಯಿ ಸಾಲವೂ ಇತ್ತು. ಅವರ ಅಗಾಧವಾದ ಆಸ್ತಿಯ ಮುಂದೆ ಇದು ಅಲ್ಪವೇ ಆಗಿತ್ತು. ಇಂದು ಅವರ ನಿಧನದೊಂದಿಗೆ ಬಾರಾಮತಿ ತನ್ನ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಸುಪುತ್ರನ ಕಳೆದುಕೊಂಡಿದೆ.
ಇದನ್ನೂ ಓದಿ: Ajit Pawar Death News Live: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us