Advertisment

ಯುವಕನಿಗೆ 1.5 ನಿಮಿಷದಲ್ಲಿ 26 ಬಾರಿ ಕಪಾಳಮೋಕ್ಷ ಮಾಡಿದ ಯುವತಿ.. VIDEO

ಲಕ್ನೋದ ಅಮಿಟಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ಮೇಲೆ ಸಹಪಾಠಿಗಳು ಕನಿಷ್ಠ 50 ರಿಂದ 60 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಕಳೆದ ತಿಂಗಳ ಹಿಂದೆ ಕಾರಿನೊಳಗೆ ಲಾಕ್ ಮಾಡಿ ಹೊಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

author-image
Ganesh Kerekuli
Lucknow Amity Student
Advertisment

ಲಕ್ನೋದ ಅಮಿಟಿ ವಿಶ್ವವಿದ್ಯಾಲಯದ (Amity University in Lucknow) ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ಮೇಲೆ ಸಹಪಾಠಿಗಳು ಕನಿಷ್ಠ 50 ರಿಂದ 60 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಕಳೆದ ತಿಂಗಳ ಹಿಂದೆ ಕಾರಿನೊಳಗೆ ಲಾಕ್ ಮಾಡಿ ಹೊಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. 

Advertisment

ಆಗಸ್ಟ್ 26 ರಂದು ಸಂತ್ರಸ್ಥ ಶಿಖರ್ ಮುಖೇಶ್ ಕೇಸರ್ವಾನಿ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದಾಗ ಘಟನೆ ನಡೆದಿದೆ. ಹಲ್ಲೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಖರ್ ತಂದೆ ಮುಖೇಶ್ ಕೇಸರ್ವಾನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಆಯುಷ್ ಯಾದವ್, ಜಾಹ್ನವಿ ಮಿಶ್ರಾ, ಮಿಲಯ್ ಬ್ಯಾನರ್ಜಿ, ವಿವೇಕ್ ಸಿಂಗ್ ಮತ್ತು ಆರ್ಯಮಾನ್ ಶುಕ್ಲಾರನ್ನು ಬಂಧಿಸಲಾಗಿದೆ. 

45 ನಿಮಿಷಗಳ ಕಾಲ ಬೆದರಿಕೆ, ನಿಂದನೆ

ಸಂತ್ರಸ್ಥನ ತಂದೆ ಆರೋಪದ ಪ್ರಕಾರ..  BA LLB ವಿದ್ಯಾರ್ಥಿ ಆಗಿರುವ ನನ್ನ ಮಗ ಘಟನೆಯಿಂದ ಆಘಾತಕ್ಕೊಳಗಾಗಿದ್ದಾನೆ. ಕಾಲೇಜಿಗೆ ಹೋಗುತ್ತಿಲ್ಲ. ಆಗಸ್ಟ್ 26 ರಂದು ಕಾಲೇಜಿಗೆ ಹೋಗುತ್ತಿದ್ದಾಗ, ಅವನ ಸ್ನೇಹಿತ ಸೌಮ್ಯ ಸಿಂಗ್ ಯಾದವ್, ತನ್ನ ಕಾರಿನಲ್ಲಿ ಕರೆದೊಯ್ದು ದಾಳಿ ಮಾಡಿಸಿದ್ದಾಳೆ. ಕ್ಯಾಂಪಸ್‌ ಪಾರ್ಕಿಂಗ್ ಸ್ಥಳ ತಲುಪಿದ ತಕ್ಷಣ ಹಲ್ಲೆ ಮಾಡಿದ್ದಾರೆ. 45 ನಿಮಿಷಗಳ ಕಾಲ ನಿಂದಿಸುತ್ತ ಹಲ್ಲೆ ಮಾಡಲಾಗಿದೆ. ಓರ್ವ ಯುವತಿ ಒಂದುವರೆ ನಿಮಿಷದಲ್ಲಿ 26 ಬಾರಿ ಕೆನ್ನೆಗೆ ಬಾರಿಸೋದನ್ನ ಕಾಣಬುಹುದಾಗಿದೆ  ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಅಯ್ಯರ್​ ಕ್ಯಾಪ್ಟನ್..

Advertisment

ಘಟನೆಯಿಂದ ಮಗನಿಗೆ ಅಸ್ಥಿರಜ್ಜು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಡೆಯಲು ಕೋಲಿನ ಸಹಾಯ ಬೇಕಾಗಿದೆ. ಜಾಹ್ನವಿ ಮಿಶ್ರಾ ಮತ್ತು ಆಯುಷ್ ಯಾದವ್ ಕನಿಷ್ಠ 50 ರಿಂದ 60 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅವರು ನಮ್ಮನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಹಲ್ಲೆಯ ದೃಶ್ಯವನ್ನು ಸೆರೆ ಹಿಡಿದು ಇಡೀ ಕ್ಯಾಂಪಸ್​ಗೆ ಹರಡಿದ್ದಾರೆ ಎಂದು ದೂರಿದ್ದಾರೆ. ಶಿಖರ್ ಮೇಲಿನ ಹಲ್ಲೆಯ ವಿಡಿಯೋ 101 ಸೆಕೆಂಡು ಇದೆ. ಅದರಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿ ಶಿಖರ್ ಅವರ ಎಡ ಕೆನ್ನೆಗೆ ಪದೇ ಪದೆ ಹೊಡೆಯುತ್ತಿರುವುದನ್ನ ಗಮನಿಸಬಹುದಾಗಿದೆ. ಇನ್ನು ಹಲ್ಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. 

ಇದನ್ನೂ ಓದಿ:ಘೋರ ದುರಂತ.. ರೋಪ್​​ವೇ ಕುಸಿದು ಬಿದ್ದು 6 ಮಂದಿ ದುರಂತ ಅಂತ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Amity University Lucknow Kannada News
Advertisment
Advertisment
Advertisment